ಕಾರ್ಕಳ: ಆಗುಂಬೆಯಲ್ಲಿ ಭೀಕರ ಅಪಘಾತ - ಮಿಯ್ಯಾರು ಮೂಲದ ನಾಲ್ವರು ಸಾವು, ಐವರು ಗಂಭೀರ-Times of karkala

ಹೆಬ್ರಿ : ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಆಗುಂಬೆ ಘಾಟಿಯಲ್ಲಿ ಪ್ರಪಾತಕ್ಕೆ ಉರುಳಿ ನಾಲ್ವರು ಮೃತಪಟ್ಟ ಘಟನೆ ಇಂದು ನಡೆದಿದೆ.

ಮೃತಪಟ್ಟವರನ್ನು ಈಚರ್ ಚಾಲಕ ಯಜ್ಞೇಶ್ ಹಾಗೂ ಈಚರ್ ಕ್ಲೀನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಿವತಿಕೆರೆ ಬಳಿಯ ಮಹಾವೀರಭವನ ಪಕ್ಕದ ನಿವಾಸಿ ಶ್ರೀಜಿತ್ (21) ಜೋಡುಕಟ್ಟೆ ನಿವಾಸಿ ಮಂಜುನಾಥ (35), ಮಣಿ(28) ಎಂದು ಗುರುತಿಸಲಾಗಿದೆ.


ಘಟನೆಯ ಪರಿಣಾಮ ಐವರು ಗಂಭೀರ ಗಾಯಗೊಂಡಿದ್ದು, ಮಂಜುನಾಥ ಗೌಡ ಕಾರ್ಕಳ (35), ನಾಗರಾಜ ಸಾಹೆಬ್ರಕಟ್ಟೆ (30), ಸಯ್ಯದ್ ಆಸೀಫ್ ಕಾರ್ಕಳ (36), ಗಣೇಶ್ ಕಾರ್ಕಳ (21), ಮಹಾದೇವ ಕಾರ್ಕಳ (42) ಎಂದು ಗುರುತಿಸಲಾಗಿದೆ.

ಶಿವಮೊಗ್ಗದಿಂದ ಹೆಬ್ರಿ ಕಡೆಗೆ ಬರುತ್ತಿದ್ದ ಕಲ್ಲು ಸಾಗಾಟ ಮಾಡುತ್ತಿದ್ದ ಈಚರ್ ಲಾರಿ ಘಾಟಿ ರಸ್ತೆಯ 5ನೇ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದೆ
 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯ 9ನೇ ತಿರುವಿನಲ್ಲಿ ಈ ಘಟನೆ ನಡೆದಿದ್ದು, ಶಿವಮೊಗ್ಗದಿಂದ ಹೆಬ್ರಿ ಕಡೆಗೆ ಬರುತ್ತಿದ್ದ ಈಚರ್ ಲಾರಿ ಅಪಘಾತಕ್ಕೀಡಾಗಿದೆ.  ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಸ್ಥಳಕ್ಕೆ ಆಗುಂಬೆ ಹಾಗೂ ಹೆಬ್ರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 











 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget