ಕಾರ್ಕಳ:ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ-Times of karkala

 

ಕಡಿಮೆ‌ ಅಂಕ ಬಂದಿದ್ದಕ್ಕೆ ದ್ವಿತೀಯ ಪದವಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶಬರೀಶ್ (21) ಆತ್ಮಹತ್ಯೆ ಮಾಡಿಕೊಂಡಿರುವವರು.ಇವರು ಕಾರ್ಕಳದ ಸ್ಥಳೀಯ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮಾಡುತ್ತಿದ್ದರು.

ಕಡಿಮೆ‌ ಅಂಕ ಬಂದಿದ್ದಕ್ಕೆ ಮನೆಯಲ್ಲಿ‌ ಯಾರಲ್ಲೂ ಮಾತನಾಡದೇ ಸದಾ ಮೌನವಾಗಿ ಇರುತ್ತಿದ್ದ‌. ಇದರಿಂದಲೇ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮನೆಯವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಜೆಕಾರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





ಜಾಹೀರಾತು 






















ಪೊಲೀಸ್ ವರದಿ:

ಅಜೆಕಾರು: ಪಿರ್ಯಾದಿದಾರರಾದ ರಾಜೇಶ್ (23), ತಂದೆ: ರಮೇಶ್ ರಾವ್, ವಾಸ:ಕಮಲ ನಿವಾಸ ಚಿಮುಳ್ಳು ಶಿರ್ಲಾಲು ಗ್ರಾಮ ಕಾರ್ಕಳ ತಾಲೂಕು ಇವರ ತಮ್ಮ ಶಬರೀಶ್ (21) ಎಂಬುವವರು ಕಾರ್ಕಳ ತಾಲೂಕು ಶಿರ್ಲಾಲು ಗ್ರಾಮ ಚಿಮುಳ್ಳು ಎಂಬಲ್ಲಿ ತನ್ನ ತಂದೆ ತಾಯಿಯವರೊಂದಿಗೆ ವಾಸಿಸುತ್ತಿದ್ದು, ಕಾರ್ಕಳದ MPM ಕಾಲೇಜಿನಲ್ಲಿ ದ್ವಿತೀಯ ಡಿಗ್ರಿ ವಿದ್ಯಾರ್ಥಿಯಾಗಿದ್ದು ಕಾಲೇಜಿಗೆ ರಜೆ ಇದ್ದ ಕಾರಣ ಮನೆಯಲ್ಲಿಯೇ ಇದ್ದು ದ್ವಿತೀಯ ಡಿಗ್ರಿಯಲ್ಲಿ ಅಂಕ ಕಡಿಮೆ ಬಂದಿದ್ದರಿಂದ ಮನೆಯಲ್ಲಿ ಬೇಸರಗೊಂಡು ಒಬ್ಬನೇ ಕುಳಿತುಕೊಂಡು ಮೊಬೈಲ್ ನಲ್ಲಿ ಯಾವುದೋ ಆಟ ಆಡುತ್ತಿದ್ದು ಆತನಿಗೆ ಬುದ್ದಿ ಹೇಳಿ ಸಮಾದಾನಪಡಿಸಿದರೂ ಯಾವುದೇ ಪ್ರತಿಕ್ರಿಯೆ ನೀಡದೇ ಒಬ್ಬನೇ ಕುಳಿತುಕೊಂಡು ಮನೆಯವರಲ್ಲಿ ಮಾತಾನಾಡದೇ ಮೌನಿಯಾಗಿದ್ದು, ಡಿಗ್ರಿಯಲ್ಲಿ ಅಂಕ ಕಡಿಮೆ ಬಂದಿದ್ದರಿಂದ ಮಾನಸಿಕವಾಗಿ ನೊಂದು ಖಿನ್ನತೆಗೆ ಒಳಗಾಗಿ ದಿನಾಂಕ 11/10/2021 ರಂದು ಬೆಳಿಗ್ಗೆ 08:00 ಗಂಟೆಯಿಂದ ಸಂಜೆ 17:41 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು ಅಸ್ವಸ್ತಗೊಂಡು ಒದ್ದಾಡುತ್ತಿದ್ದವರನ್ನು ಆಸ್ವತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯ ಮೃತಪಟ್ಟಿದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 17/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget