ಕಾರ್ಕಳ:ಎರಡು ಮಕ್ಕಳೊಂದಿಗೆ ವಿವಾಹಿತೆ ಮಹಿಳೆ ನಾಪತ್ತೆ-Times of karkala

ಕಾರ್ಕಳ: ಎರಡು ಮಕ್ಕಳೊಂದಿಗೆ ವಿವಾಹಿತೆ ಮಹಿಳೆ ನಾಪತ್ತೆ

ಕಾರ್ಕಳ: ಇಬ್ಬರು‌ ಮಕ್ಕಳೊಂದಿಗೆ ಮಹಿಳೆಯೊಬ್ಬರು ನಾಪತ್ತೆಯಾದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.



ಬೋಳ ಪದವು ನಿವಾಸಿ ಸವಿತಾ ಪೂಜಾರಿ (36) ಅವರು,‌ ವಿಷ್ಣು (10) ಹಾಗೂ ಆಶ್ಮಿತಾ ಎಂಬ ಇಬ್ಬರು ಮಕ್ಕಳೊಂದಿಗೆ ಕಾಣೆಯಾಗಿದ್ದಾರೆ. ಇವರು ಗಂಡನನ್ನು ಬಿಟ್ಟು ತಾಯಿ ಮನೆಯಾದ ಬೋಳ ಪದವು ಎಂಬಲ್ಲಿ ವಾಸಿಸುತ್ತಿದ್ದರು. 

ಬೀಡಿ ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ಇವರು, ಅಕ್ಟೋಬರ್ 12ರಂದು ಸಂಜೆ 4.30ಕ್ಕೆ ಇಬ್ಬರು ಮಕ್ಕಳೊಂದಿಗೆ  ಮುಂಡ್ಕೂರಿನ ನಾನಿಲ್ತಾರಿನಲ್ಲಿರುವ ಅಜ್ಜಿ‌ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು. ಆದರೆ ಬಳಿಕ ಅಲ್ಲಿಗೂ ಹೋಗದೆ ಮನೆಗೂ ವಾಪಾಸ್ಸು ಬಾರದೆ ಕಾಣೆಯಾಗಿದ್ದಾರೆ. ಸವಿತಾ ಪೂಜಾರಿ ಒಂದು ವಾರದ ಹಿಂದೆ ತಮ್ಮನಿಗೆ ಪೋನ್ ಮಾಡಿ 'ನನಗೆ ಸತೀಶ್ ಎಂಬವರನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದರಂತೆ. ಅದಕ್ಕೆ ತಮ್ಮ ಒಪ್ಪಿರಲಿಲ್ಲ. ಹೀಗಾಗಿ ಉಮೇಶ್ ಎಂಬಾತನೊಂದಿಗೆ ಸವಿತಾ ಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget