ಕಾರ್ಕಳ:ಸಾಲ ವಾಪಸು ನೀಡದಿದ್ದರೆ ತನ್ನ ಜೊತೆ ಮಲಗಬೇಕೆಂದ ಸಾದಿಕ್!-Times of karkala


 
ಕಾರ್ಕಳ:ಕಾರ್ಕಳ:ಸಾಲ ವಾಪಸು ನೀಡದಿದ್ದರೆ ತನ್ನ ಜೊತೆ ಮಲಗಬೇಕೆಂದ ಸಾದಿಕ್!

ಸಾಲ ನೀಡಿದ್ದನ್ನು ವಾಪಸು ನೀಡದಿದ್ದರೆ ತನಗೆ ಲೈಂಗಿಕ ಸುಖ ನೀಡಬೇಕೆಂದು ಮಹಿಳೆಗೆ ಒತ್ತಾಯಿಸಿದ ಘಟನೆ ನಡೆದಿದೆ.

ಘಟನೆಯ ವಿವರ: ದೂರು ನೀಡಿದ ಮಹಿಳೆಗೆ 2 ವರ್ಷದ ಹಿಂದೆ ಸಾಧಿಕ್ ಎಂಬಾತನ ಪರಿಚಯವಾಗಿರುತ್ತದೆ. ಬಳಿಕ ಸಾಧಿಕ್‌ನಲ್ಲಿ ರೂಪಾಯಿ 15,000/ ರೂ ಸಾಲವನ್ನು  ಪಡೆದಿದ್ದರು.  ಸಾಧಿಕ್‌ ಸಾಲ ವಾಪಾಸು ನೀಡುವಂತೆ ಮಹಿಳೆಯ  ಮನೆಗೆ ಬಂದು ಪೀಡಿಸುತ್ತಿದ್ದು , ಮನೆಗೆ ಬರಬೇಡ ಎಂದು ಹೇಳಿದ್ದಕ್ಕೆ ಸಾದಿಕ್‌ ಮೊಬೈಲ್ ಫೋನ್ ಒಂದನ್ನು ಕೊಟ್ಟಿದ್ದನು. ನಂತರದ ದಿನದಲ್ಲಿ ಈ ಮೊಬೈಲಿಗೆ ಕರೆ ಮಾಡಿ ಸಾಲ ವಾಪಾಸು ನೀಡುವಂತೆ  ಹೇಳುತ್ತಿದ್ದನು.

ಮೂರು ತಿಂಗಳ ಹಿಂದೆ ಸಾದಿಕ್‌ ಕಾರ್ಕಳ ಪತ್ತೊಂಜಿಕಟ್ಟೆಯ ಒಂದು ಮನೆಗೆ ಮಹಿಳೆಯನ್ನು ಕರೆದುಕೊಂಡು  ಹೋಗಿ  ಸಾಲ ವಾಪಾಸು ಕೊಡಬೇಕು ಇಲ್ಲವಾದರೆ ತನ್ನ ಜೊತೆ ಮಲಗಿ ಲೈಂಗಿಕ ಸುಖ  ಕೊಡಬೇಕು ಎಂದು ಬೆದರಿಸಿ ಬಲವಂತವಾಗಿ  ಲೈಂಗಿಕ ಸಂಪರ್ಕ ಮಾಡಿನಗ್ನ ಚಿತ್ರಗಳನ್ನು ಚಿತ್ರೀಕರಿಸಿದ್ದ. 

ನಂತರದ ದಿನದಲ್ಲಿ   ಕರೆ  ಮಾಡಿ ತನ್ನ ಜೊತೆ ಮಲಗಲು  ಬರಬೇಕು ಬರದಿದ್ದಲ್ಲಿ ಮೊಬೈಲಿನಲ್ಲಿ ತೆಗೆದ ಪೋಟೊವನ್ನು ಮಹಿಳೆಯ  ಅಕ್ಕನ ಮೊಬೈಲಿಗೆ ಕಳುಹಿಸಿ ಮಾನ  ಹರಾಜು ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ.

ಇದರಿಂದ ಹೆದರಿದ ಮಹಿಳೆ  ಇಂದು(06.10.2021)ಪತ್ತೊಂಜಿಕಟ್ಟೆಯ ಮನೆಗೆ    ಹೋದಾಗ  ಮನೆಯಲ್ಲಿ ಒಬ್ಬನೇ  ಇದ್ದ   ಸಾದಿಕ್‌ ಮಹಿಳೆಯನ್ನು  ಬಿಗಿಯಾಗಿ ಹಿಡಿದುಕೊಂಡಾಗ ಮಹಿಳೆಯು ಗಾಬರಿಗೊಂಡು ಆತನಿಂದ ತಪ್ಪಿಸಿಕೊಂಡು ಮನೆಯಿಂದ ಹೊರಗಡೆ ಹೋಗಿದ್ದಾರೆ.

ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget