ಸಾಣೂರು ಪೆಟ್ರೋಲ್ ಬಂಕ್ ನಲ್ಲಿ ಕಳ್ಳತನ-Times of karkala

 

ಸಾಣೂರು ಪೆಟ್ರೋಲ್ ಬಂಕ್ ನಲ್ಲಿ ಕಳ್ಳತನ ನಡೆದಿದೆ.
ನಿನ್ನೆ ರಾತ್ರಿ 9:00 ಗಂಟೆಗೆ ಪೆಟ್ರೋಲ್ ಪಂಪ್ ನ ಶೆಟರ್ ಗೆ ಕೆಲಸಗಾರರು ಬೀಗ ಹಾಕಿ ಹೋಗಿದ್ದರು. ಇಂದು ಬೆಳಿಗ್ಗೆ ಬೆಳಗ್ಗೆ 06.19 ಗಂಟೆಗೆ ನಾರಾಯಣ ಎಂಬುವವರು ಬಂಕ್ ಮ್ಯಾನೇಜರ್ ಉದಯ ಕುಮಾರ್ ಗೆ ಕರೆ ಮಾಡಿ ಪಂಪ್ ನ ಶೆಟರ್ ಗೆ ಅಳವಡಿಸಿದ ಬೀಗವನ್ನು ಮುರಿದ ವಿಚಾರವನ್ನು ತಿಳಿಸಿದ್ದು ಮ್ಯಾನೇಜರ್  ಸ್ಥಳಕ್ಕೆ ಬಂದು ನೋಡಿದಾಗ ಎದುರು ಶೆಟರ್ ಗೆ ಹಾಕಿದ್ದ ಬೀಗವನ್ನು ಮುರಿದಿದ್ದಲ್ಲದೇ ಕಚೇರಿ ಒಳಗಡೆ ಇದ್ದ ಸ್ವಾಯಿಪಿಂಗ್‌ ಮಿಷನ್‌ -2. (ಮೌಲ್ಯ10,000/-) ಪ್ಲಿಟ್‌  ಕಾರ್ಡ್‌ ಮಿಷನ್‌ -1 (ಮೌಲ್ಯ 5,000/-) ಸ್ವತ್ತುಗಳು ಹಾಗೂ ಹೊರಗಡೆ ಪಂಪ್‌ನ ಮೇಲೆ ಪಿಕ್ಸ್‌ ಮಾಡಿ ಇಟ್ಟ ಅಟೋ ಮಿಷನ್‌‌ ಡಿವೈಸ್‌ ಕಳವು ಮಾಡಿಕೊಂಡು ಹೋಗಿದ್ದಾರೆ.


ಪೆಟ್ರೋಲ್‌ ಪಂಪ್‌ಗೆ ಅಳವಡಿಸಿದ ಸಿಸಿ ಕ್ಯಾಮರಾ ವನ್ನು ಪರಿಶೀಲಿಸಿದಾಗ  ಇಂದು ಬೆಳಗ್ಗಿನ ಜಾವ 1:04 ಗಂಟೆಗೆ ಒಬ್ಬ ವ್ಯಕ್ತಿ ಪ್ಯಾಂಟ್‌ ಮತ್ತು ತುಂಬು ತೋಳಿನ ಶರ್ಟ್‌ ಹಾಗೂ ಮಾಸ್ಕ್‌ ಧರಿಸಿಕೊಂಡು ಪೆಟ್ರೋಲ್‌ ಪಂಪ್‌ ಒಳಗಡೆ ಬಂದು ಹುಡುಕಾಡಿ ಒಳಗಡೆ  ಇದ್ದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಸಿಸಿ ಕ್ಯಾಮೇರದಲ್ಲಿ ಸೆರೆಯಾದ ದೃಶ್ಯಾವಳಿಯಲ್ಲಿ  ಕಂಡು ಬಂದಿದೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget