ಮುದ್ರಾಡಿಯಲ್ಲಿ ಅಖಿಲ ಭಾರತ ನವರಂಗೋತ್ಸವ:ಕರ್ಣಾಟ ನಾಡ ಪೋಷಕ ಪ್ರಶಸ್ತಿ ಪ್ರದಾನ-Times of karkala

ಮುದ್ರಾಡಿಯಲ್ಲಿ ಅಖಿಲ ಭಾರತ ನವರಂಗೋತ್ಸವ:ಕರ್ಣಾಟ ನಾಡ ಪೋಷಕ ಪ್ರಶಸ್ತಿ ಪ್ರದಾನ. 

ಕರಾವಳಿ ರಂಗಾಯಣವನ್ನು ಉಡುಪಿ ಜಿಲ್ಲೆಯಲ್ಲೇ ಸ್ಥಾಪಿಸಿ : ಗೋಪಾಲಕೃಷ್ಣ ನಾಯರಿ.

ನಾಟ್ಕದೂರು ಮುದ್ರಾಡಿ : ಕರಾವಳಿ ರಂಗಾಯಣವನ್ನು ಉಡುಪಿ ಜಿಲ್ಲೆಯಲ್ಲೇ ಸ್ಥಾಪಿಸಿ, ರಂಗಾಯಣಕ್ಕೆ ಉಡುಪಿ ಜಿಲ್ಲೆಯ ಮಣ್ಣು ಸೂಕ್ತವಾಗಿದೆ. ಆದುನಿಕ ರಂಗಭೂಮಿಯ ಕೆಲಸಗಳು ಉಡುಪಿ ಜಿಲ್ಲೆಯಲ್ಲೇ ವಿಶೇಷವಾಗಿ ನಡೆಯುತ್ತಿದೆ. ನಿರಂತರ ರಂಗಸೇವೆ ಮಾಡುತ್ತಿರುವ ರಂಗ ನಿರ್ದೇಶಕ ಸುಕುಮಾರ್‌ ಮೋಹನ್‌ ನೇತ್ರತ್ವದಲ್ಲಿ ರಂಗಾಯಣಕ್ಕಾಗಿ ಹೋರಾಟ ನಡೆಯಬೇಕಿದೆ ಎಂದು ಹಿರಿಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಹೇಳಿದರು.

ಅವರು ಮುದ್ರಾಡಿ ನಾಟ್ಕದೂರು ನಮ ತುಳುವೆರ್‌ ಕಲಾ ಸಂಘಟನೆಯ ವತಿಯಿಂದ ನಾಟ್ಕದೂರಿನ ಬಿ.ವಿ.ಕಾರಂತ ಬಯಲು ರಂಗಸ್ಥಳದಲ್ಲಿ ಗುರುವಾರ ಆರಂಭಗೊಂಡ ಅಖಿಲ ಭಾರತ ನವರಂಗೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. 

ಕಡಿಮೆ ಖರ್ಚಿನಲ್ಲಿ ರಂಗಭೂಮಿಯಲ್ಲಿ ಎಲ್ಲಾ ಸಾಧ್ಯತೆಯನ್ನು ಬಳಸಿಕೊಂಡು ರಂಗ ನಿರ್ದೇಶಕ ಸುಕುಮಾರ್‌ ಮೋಹನ್‌ ನೇತ್ರತ್ವದ ಮುದ್ರಾಡಿ ನಾಟ್ಕದೂರು ನಮ ತುಳುವೆರ್‌ ಕಲಾ ಸಂಘಟನೆ ವಿಶೇಷ ಸಾಧನೆ ಮಾಡಿ ಭಾರತದ ರಂಗಭೂಮಿಗೆ ದೊಡ್ಡ ಕೊಡುಗೆ ನೀಡಿದೆ ಎಂದು ಗೋಪಾಲಕೃಷ್ಣ ನಾಯರಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಕಳದ ಕ್ಷೇತ್ರದ ಶಾಸಕ ಸುನೀಲ್‌ ಕುಮಾರ್‌ ಈಗ ಕನ್ನಡ ಸಂಸ್ಕೃತಿ ಸಚಿವರಾಗಿದ್ದಾರೆ. ಅವರಿಂದಲೇ ಕರಾವಳಿಯ ರಂಗಾಯಣದ ಸ್ಥಾಪನೆಯ ಕೆಲಸ ಆಗಲಿ, ಅದು ಕಾರ್ಕಳ ಕ್ಷೇತ್ರದಲ್ಲೇ ಬೇಕಿದ್ದರೂ ಮಾಡಲಿ, ಒಟ್ಟಾರೆಯಾಗಿ ಉಡುಪಿ ಜಿಲ್ಲೇಯಲ್ಲೇ ರಂಗಾಯಣ ನಿರ್ಮಾಣವಾಗಲಿ ಎಂದು ಗೋಪಾಲಕೃಷ್ಣ ನಾಯರಿ ಆಶಿಸಿದರು. 


ಕರ್ಣಾಟ ನಾಡ ಪೋಷಕ ಪ್ರಶಸ್ತಿ ಸ್ವೀಕರಿಸಿದ ಬೆಂಗಳೂರಿನ ಉದ್ಯಮಿ ಸಮಾಜಸೇವಕರಾದ ಬೈಂದೂರಿನ ಡಾ. ಗೋವಿಂದ ಬಾಬು ಪೂಜಾರಿ ಮಾತನಾಡಿ ಕಲೆಗೆ ಬೆಲೆ ಕೊಟ್ಟು ಕಲೆಯನ್ನು ಉಳಿಸುವ ಸಂಸ್ಥೆಗಳಿಗೆ ನನ್ನಿಂದಾದ ಸಹಾಯ ಮಾಡುತ್ತೇನೆ, ಜೀವನದಲ್ಲಿ ಬಡವರ ಕಣ್ಣೀರು ಒರೆಸುವುದು ಅದು ನನ್ನ ಕರ್ತವ್ಯವಾಗಿದೆ, ಕೊರೋನದ ಬಿಡುವಿನ ಸಮಯವನ್ನು ಜನಸೇವೆ ಮೀಸಲಿಟ್ಟು ಜೀವನದ ಸಾರ್ಥಕತೆಯನ್ನು ಕಂಡಿದ್ದೇನೆ ಎಂದು ಕೃತಜ್ಷತೆ ಸಲ್ಲಿಸಿದರು. 


ಸಂಸ್ಕಾರ ಭಾರತೀಯ ಪ್ರಮುಖರಾದ ಬೆಂಗಳೂರಿನ ಫ.ರಾ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕಲೆಯ ಕೆಲಸ ಅದು ಪರಿಪೂರ್ಣ ಕೆಲಸ, ಅದು ದೇಶದ ಕೆಲಸ, ಅದು ಸಂಸ್ಕೃತಿಯ ಪ್ರತಿಷ್ಠಾಪನೆಯ ಕೆಲಸ. ಈ ಕೆಲಸವನ್ನು ನಿರಂರತವಾಗಿ ಮಾಡುತ್ತಿರುವ ನಮ ತುಳುವೆರ್‌ ಕಲಾ ಸಂಘಟನೆ ನಮ್ಮ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳುರು ಉದ್ಯಮಿ ಬೈಂದೂರಿನ ಡಾ. ಗೋವಿಂದ ಬಾಬು ಪೂಜಾರಿ, ವಿಜಯ ಶೆಟ್ಟಿ ಕಾರ್ಕಳ, ಪ್ರಮಲ್‌ ಕುಮಾರ್‌ ಕಾರ್ಕಳ, ಸ್ಟೋನ್‌ ಕ್ರಷರ್‌ ಫೆಡರೇಶನ್‌ ರಾಜ್ಯ ಘಟಕದ ಅಧ್ಯಕ್ಷ ಬಜಗೋಳಿ ರವೀಂದ್ರ ಶೆಟ್ಟಿ ಅವರಿಗೆ ಕರ್ಣಾಟ ನಾಡ ಪೋಷಕ ಪ್ರಶಸ್ತಿ ಮತ್ತು ಕಲಾವಿದ ಮೈಸೂರಿನ ಅನಿಲ್‌ ಹುಲಿಯಾ ಅವರಿಗೆ ಬಿ.ವಿ.ಕಾರಂತ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಹೆಗ್ಡೆ, ರಂಗ ನಿರ್ದೇಶಕರಾದ ಪರಶುರಾಮ ಹರಪ್ಪನಹಳ್ಳಿ. ಸಂಸ ಸುರೇಶ್‌ ಮತ್ತಿತರರು ಉಪಸ್ಥಿತರಿದ್ದರು. ನಮ ತುಳುವೆರ್‌ ಕಲಾ ಸಂಘಟನೆ ಅಧ್ಯಕ್ಷ ಸುಕುಮಾರ್‌ ಮೋಹನ್‌ ಸ್ವಾಗತಿಸಿ ಸಂಚಾಲಕ ಬೆಂಗಳೂರಿನ ಜಗದೀಶ್‌ ಜಾಲ ನಿರೂಪಿಸಿದರು. ರಾಯಚೂರಿನ ಮಾರುತಿ ಬಡಿಗೇರ್‌ ಅಭಿನಂದನ ಭಾಷಣ ಮಾಡಿದರು. ಬಳಿಕ ಗುರುರಾಜ್‌ ಮಾರ್ಪಳ್ಳಿ ಮಾರ್ಗದರ್ಶನದಲ್ಲಿ ನಾಟ್ಕ ಮುದ್ರಾಡಿ ತಂಡದಿಂದ ಅವ್ವ ನನ್ನ ಅವ್ವ ನಾಟಕ ಪ್ರದರ್ಶನಗೊಂಡಿತು.


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget