ಇರ್ವತ್ತೂರು:ಮಹಿಳೆ ಆತ್ಮಹತ್ಯೆ-Times of karkala

ಇರ್ವತ್ತೂರು:ಮಹಿಳೆ ಆತ್ಮಹತ್ಯೆ 


ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಹಿಳೆಯೊರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕು, ಇರ್ವತ್ತೂರು ಗ್ರಾಮದಲ್ಲಿ ನಡೆದಿದೆ. ಕಾರ್ಕಳ ತಾಲೂಕು, ಇರ್ವತ್ತೂರು ಗ್ರಾಮದ ಹೆಂಟಾಣೆ ನಿವಾಸಿ, ಶ್ರೀಮತಿ ಸವಿತಾ(40)  ಆತ್ಮಹತ್ಯೆ ಮಾಡಿಕೊಂಡವರು.

ಮನೆಯೊಳಗಿನ ಜಂತಿಗೆ ನೈಲಾನ್ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ಉಡುಪಿಯ ಬಾಳಿಗ ಆಸ್ಪತ್ರೆಯಿಂದ ಔಷಧಿ ಮಾಡಿಸಿದರೂ ಖಾಯಿಲೆಯು ಗುಣವಾಗದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡ್ದಾರೆ ಎನ್ನಲಾಗಿದೆ.

 ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget