ನಂದಳಿಕೆ:ನೀರಿನಲ್ಲಿ ಮುಳುಗಿ ಯುವಕ ಸಾವು-Times of karkala

 

ನೀರಿನಲ್ಲಿ ಮುಳುಗಿ ಯುವಕ  ಮೃತಪಟ್ಟ ಘಟನೆ ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಆರ್ಯಾಡ್ ಮಾನಬೆಟ್ಟು ಎಂಬಲ್ಲಿ ಇಂದು ಸಂಭವಿಸಿದೆ.ಪ್ರವೀಣ (19 ವರ್ಷ) ಮೃತಪಟ್ಟ ಯುವಕ.

ಜಾನಕೀ ಎಂಬುವವರು ಬಾಳೆಹೊನ್ನೂರಿನಿಂದ ತನ್ನ ತಂಗಿಮನೆಯಾದ ನಂದಳಿಕೆ ಗ್ರಾಮದ ಆರ್ಯಾಡ್ ಮಾನಬೆಟ್ಟು ಎಂಬಲ್ಲಿಗೆ ಬಂದಿದ್ದರು.ಮಧ್ಯಾಹ್ನ ಸುಮಾರು 12:30 ಗಂಟೆಗೆ ಅವರ ಅಕ್ಕ ಲಲಿತಾರವರು ತನ್ನ ಮಗ ಚೇತನ್,ಜಾನಕಿರವರ ಮಗ ಪ್ರವೀಣ್ ಹಾಗೂ ನೆರೆಕೆರೆಯವರಾದ ಸುಶೀಲ ಹಾಗೂ ರೇಖಾಳೊಂದಿಗೆ  ಮನೆಯ ಬಳಿಯ ಕಲ್ಲಗುಂಡಿ ಎಂಬಲ್ಲಿ ತೋಡಿಗೆ ಬಟ್ಟೆ ತೊಳೆಯಲು  ಹೋಗಿದ್ದರು. 

ಪ್ರವೀಣನು  ತೋಡಿನ ಬದಿಯಲ್ಲಿ ನೀರಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ನೀರಿನ ಸುಳಿಗೆ ಸಿಕ್ಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.


ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget