ಇಂದಿರಾ ಕ್ಯಾಂಟೀನ್ ಊಟದ ರುಚಿ ಸವಿದ ಪುರಸಭಾ ಸದಸ್ಯರು ಮತ್ತು ಅಧಿಕಾರಿಗಳು-Times of karkalaಇಂದಿರಾ ಕ್ಯಾಂಟೀನ್ ಊಟದ ರುಚಿ ಸವಿದ ಪುರಸಭಾ ಸದಸ್ಯರು ಮತ್ತು ಅಧಿಕಾರಿಗಳು

ಕಾರ್ಕಳ: ಕಾರ್ಕಳ ಪುರಸಭಾ ಮಾಸಿಕ ಸಭೆ ಸೋಮವಾರ ಪುರಸಭಾ ಸಭಾಂಗಣದಲ್ಲಿ ಪ್ರತಿಭಟನೆ  ಆರೋಪ ಪ್ರತ್ಯಾರೋಪ ಮಾತಿನ ಚಕಮಕಿಯೊಂದಿಗೆ ನಡೆದ ನಂತರ ಕಾರ್ಕಳ ಬಂಡಿಮಠದ ಇಂದಿರಾ ಕ್ಯಾಂಟೀನ್ ನಲ್ಲಿ ಸೌಹಾರ್ದ ಸಹಭೋಜನ ಸವಿದು ಕಾರ್ಕಳ ಪುರಸಭಾ ಸದಸ್ಯರು ಅಧಿಕಾರಿಗಳು ತಾವು   ಇಂದಿರಾ ಕ್ಯಾಂಟೀನ್ ಅನ್ನು ಬೆಂಬಲಿಸುವ ಪ್ರಯತ್ನ ಮಾಡಿದ್ದಾರೆ.

ಕಳೆದ ತಿಂಗಳ ಮಾಸಿಕ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರೊಬ್ಬರು ಸಭೆಯ ಸಂದರ್ಭಗಳಲ್ಲಿ ಸದಸ್ಯರಿಗೆ ನೀಡುವ ಉಪಹಾರದ ಗುಣಮಟ್ಟ ಚೆನ್ನಾಗಿ ಇಲ್ಲ ಇಂತಹ ಉಪಹಾರವನ್ನ ನಮಗೆ ನೀಡಿ ಹೆಚ್ಚಿನ ಹಣವನ್ನು ಹೋಟೆಲ್ ಗಳಿಗೆ ಪಾವತಿಸುತ್ತೀರ ಎಂದು ವ್ಯಂಗ್ಯ ವಾಗಿ ಸಭೆಯಲ್ಲಿ ಸದಸ್ಯರನ್ನು ನಗಿಸಿದ್ದರು

ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರೊಬ್ಬರು ಉಪಹಾರ  ,ಊಟ ಮುಂದಿನ ಸಭೆಗೆ ಇಂದಿರಾ ಕ್ಯಾಂಟೀನ್ ನಿಂದ ತರಿಸುವ ಎಂದು ಪ್ರತ್ಯುತ್ರರ ನೀಡಿದರು .ಅದನ್ನೇ ಮುಖ್ಯ ವಿಷಯವಾಗಿ ತೆಗೆದುಕೊಂಡು ಸದಸ್ಯರು ಮುಂದಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್ ನಿಂದಲೇ ಊಟದ ವ್ಯವಸ್ಥೆ ಮಾಡುವ ತೀರ್ಮಾನವನ್ನು ಕೈಗೊಳ್ಳಲಾಗಿತ್ತು .ಆದರೆ ಪಾರ್ಸೆಲ್ ವ್ಯವಸ್ಥೆ ಇಲ್ಲದ ಕಾರಣ ಪುರಸಭಾ ಸದಸ್ಯರು ಹಾಗೂ ಅಧಿಕಾರಿಗಳು ಇಂದಿರಾ ಕ್ಯಾಂಟೀನ್ ಗೆ ತೆರಳಿ ಮಧ್ಯಾಹ್ನದ ಭೋಜನದ ರುಚಿ ಸವಿದರು   ಹಾಗೂ ಇಂದಿರಾ ಕ್ಯಾಂಟೀನ್ನ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆದುಕೊಂಡರು.

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget