ಕಾರ್ಕಳದ ಜೋಡುರಸ್ತೆಯಲ್ಲಿ ಪ್ರೈಮ್ ಮಾಲ್ ಉದ್ಘಾಟನೆ-Times of karkala

 

ಕಾರ್ಕಳದ ಜೋಡುರಸ್ತೆಯಲ್ಲಿ ಪ್ರೈಮ್ ಮಾಲ್ ಉದ್ಘಾಟನೆ                     


ಕಾರ್ಕಳ: ಉದ್ಯಮಗಳು ,ವಾಣಿಜ್ಯ ಚಟುವಟಿಕೆಗಳು ಬೆಳೆದಾಗ ಆರ್ಥಿಕತೆ ಚೇತರಿಕೆಯಾಗಿ ಜನರ ಜೀವನಮಟ್ಟ ಸುಧಾರಿಸುವುದರೊಂದಿಗೆ ದೇಶಕ್ಕೆ ತೆರಿಗೆ ಸಂಗ್ರಹವಾಗುವುದರ ಜತೆಗೆ ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ರಾಜ್ಯ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು. ಅವರು ಪ್ರೈಮ್ ಮಾಲ್  ನೂತನ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು.ನಗರಗಳು ಬೆಳೆಯಬೇಕಾದರೆ ವಾಣಿಜ್ಯ ಚಟುವಟಿಕೆಗಳು ಬೆಳೆಯಬೇಕು ಎಂದರು.                                        


ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಎಂ‌ ಕೆ‌ ವಿಜಯಕುಮಾರ್, ಬಿಜೆಪಿ ಹಿರಿಯ ಮುಖಂಡ ಪ್ರಭಾಕರ್ ಕಾಮತ್, ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್, ಎಸ್ ಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ ಎನ್ ರಾಜೇಂದ್ರ ಕುಮಾರ್,  ಉದ್ಯಮಿ ಹಾಗೂ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಪ್ರಗತಿಪರ ಕೃಷಿಕರಾದ ಅಶೋಕ್ ಅಡ್ಯಂತಾಯ  ಉಪಸ್ಥಿತರಿದ್ದರು.

                         

          

ಪ್ರೈಮ್ ಮಾಲ್ ನ ಪಾಲುದಾರರಾದ   ಮಹಾವೀರ ಹೆಗ್ಡೆ, ಸಂಪತ್ ಜೈನ್, ಎಂ ಕೆ ಸುವೃತ್ ಕುಮಾರ್, ಸಚಿನ್ ಸಾಲ್ಯಾನ್, ದಿವಾಕರ ಶೆಟ್ಟಿ ಅತಿಥಿಗಳನ್ನು ಪುಸ್ತಕ ನೀಡಿ ಗೌರವಿಸಿದರು. ಎಂ ಕೆ ಸುವೃತ್ ಕುಮಾರ್ ಸ್ವಾಗತಿಸಿ , ಆರ್ ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget