ಕಾರ್ಕಳ:ಗೂಡುದೀಪ ಹಾಗೂ ಮುದ್ದು ಶಾರದೆ ಸ್ಪರ್ಧೆ-Times of karkala

 ಕಾರ್ಕಳ:ಗೂಡುದೀಪ ಹಾಗೂ ಮುದ್ದು ಶಾರದೆ ಸ್ಪರ್ಧೆ

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಿರಿಯಂಗಡಿ ಕಾರ್ಕಳ ಇವರ ಸಹಯೋಗದಲ್ಲಿ  ನಾಲ್ಕನೇ ವರ್ಷದ ಗೂಡುದೀಪ ಹಾಗೂ ಮುದ್ದು ಶಾರದೆ ಸ್ಪರ್ಧೆಯು ‌‌ನವಂಬರ್ 7 ರಂದು‌‌ ಸಂಜೆ 4 ರಿಂದ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆಯಲಿದೆ. 

ಗೂಡುದೀಪ ಸ್ಪರ್ಧೆಯು ಸಾಂಪ್ರದಾಯಿಕ ಮತ್ತು ಆಧುನಿಕ ವಿಭಾಗದಲ್ಲಿ ನಡೆಯಲ್ಲಿದ್ದು ಸಾಂಪ್ರದಾಯಿಕ ವಿಭಾಗದಲ್ಲಿ ಕೇವಲ ಗೂಡು ಮತ್ತು ಬಣ್ಣದ ಕಾಗದ ಬಳಕೆಗೆ ಮಾತ್ರ ಅವಕಾಶವಿದ್ದು ಆಧುನಿಕ ವಿಭಾಗದಲ್ಲಿ‌ ಹೂ, ಎಲೆ, ಗರಿ, ಗಾಜು, ಪೇಪರ್, ನವಧಾನ್ಯ,ಇತ್ಯಾದಿಗಳಿಗೆ ಅವಕಾಶವಿದೆ. ಮುದ್ದು ಶಾರದೆ ‌ಸ್ಪರ್ಧೆಯು 6 ರಿಂದ 10 ವರ್ಷದ ಮಕ್ಕಳಿಗೆ ನಡೆಯಲ್ಲಿದ್ದು ಸಾಂಪ್ರದಾಯಿಕ ವೇಷಭೂಷಣಕ್ಕೆ ಆದ್ಯತೆ ನೀಡಲಾಗಿದ್ದು ಜನನ ಪ್ರಮಾಣ ಪತ್ರ ಕಡ್ಡಾಯವಾಗಿದೆ. 

ಎಲ್ಲಾ ವಿಭಾಗದ ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರ ಮತ್ತು ಜನ‌ಮೆಚ್ಚಿದ ಗೂಡುದೀಪ, ಜನಮೆಚ್ಚಿದ ಶಾರದೆ ಪ್ರಶಸ್ತಿಯೊಂದಿಗೆ ತಲಾ‌ ಮೂರು‌ ಸಮಾದಾನಕರ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಆಯೋಜಕರಾದ ಪುರಸಭಾ ‌ಸದಸ್ಯ ಶುಭದರಾವ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget