ಕಾರ್ಕಳ:"ಲಯನ್ಸ್ ಕ್ಲಬ್ ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಮಾಜದ ಮೇಲುಸ್ತರದಲ್ಲಿ ಗುರುತಿಸಿಕೊಂಡಿದೆ"-ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ_Times of karkala


ಕಾರ್ಕಳ:ಲಯನ್ಸ್ ಕ್ಲಬ್ ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಮಾಜದ ಮೇಲುಸ್ತರದಲ್ಲಿ ಗುರುತಿಸಿಕೊಂಡಿದೆ  ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ  
 

ಲಯನ್ಸ್ ಕ್ಲಬ್ ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಮಾಜದ ಮೇಲುಸ್ತರದಲ್ಲಿ ಗುರುತಿಸಿಕೊಂಡಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ ಹೇಳಿದರು .ಕಾರ್ಕಳದ ಲಯನ್ಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ  ಕಾರ್ಕಳ ಲಯನ್ಸ್ ಕ್ಲಬ್ ಶೈಕ್ಷಣಿಕ ಸಾಮಾಜಿಕ ಇತರ ಸೇವಾರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡು  ಜಿಲ್ಲೆಯ ಎಲ್ಲಾ ಲಯನ್ಸ್  ಕ್ಲಬ್ ಗಳಿಗಿಂತ ಹೆಚ್ಚಿನ ಸಾಧನೆ ಮಾಡಿದೆ ಎಂದರು.  

ಶತಮಾನವನ್ನು ಪೂರೈಸಿರುವ ಲಯನ್ಸ್ ಕ್ಲಬ್ ನೂರನಾಲ್ಕು ವರ್ಷದಲ್ಲಿ 210 ದೇಶಗಳಲ್ಲಿ ಅನೇಕ  ಸಮಾಜಮುಖಿ ಸೇವಾಕಾರ್ಯಗಳನ್ನು ಮಾಡುತ್ತಿದೆ ಅದರಂತೆ ಸಂಬಂಧ ವೆಂಬ ಘೋಷವಾಕ್ಯದಡಿ  ಸರ್ವರು ಸಮಬಾಳು  ಸಹಬಾಳ್ವೆ ,ಸಂತೃಪ್ತ ಸಂಬಂದ ಗಳನ್ನು  ಪಡೆಯುವುದಾಗಿದೆ , ಮುಂದಿನ ದಿನಗಳಲ್ಲಿಯೂ ಕಾರ್ಕಳ ಲಯನ್ಸ್ ಕ್ಲಬ್ ಸಮಾಜಮುಖಿ ಸೇವೆಗಳನ್ನು ಮಾಡಿ  ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದರು.

ಕಾರ್ಕಳ ಲಯನ್ಸ್  ಕ್ಲಬ್ ಅಧ್ಯಕ್ಷ ರಾಜೇಶ್ ಶೆಣೈ ಮಾತನಾಡಿ  ಕೊರೋನಾ  ಸಂದಿಗ್ಧ ಪರಿಸ್ಥಿತಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ 7 ವೈದ್ಯಕೀಯ ಶಿಬಿರಗಳನ್ನು ನಡೆಸಿದ್ದು 510 ಕಣ್ಣಿನ ಚಿಕಿತ್ಸೆಗಳನ್ನು ನೂರಕ್ಕೂ ಹೆಚ್ಚು ಕನ್ನಡಕಗಳನ್ನು ವಿತರಿಸಲಾಗಿದ್ದು ನೂರು ಯೂನಿಟ್ ರಕ್ತವನ್ನು ಸಂಗ್ರಹಿಸಿ ಆರೋಗ್ಯ ಕ್ಷೇತ್ರಕ್ಕೆ ಮಹತ್ತರವಾದ ಕೊಡುಗೆ ನೀಡಿದೆ. 

ಸ್ತನ್ಯಪಾನ ಜಾಗೃತಿ ಶಿಬಿರ,ಶಾಲೆಗಳಿಗೆ ಕಂಪ್ಯೂಟರ್ ವಿತರಣೆ, ಮಕ್ಕಳ ಶಿಕ್ಷಣಕ್ಕೆ ಧನಸಹಾಯ, ಮುದ್ದುಕೃಷ್ಣಸ್ಪರ್ಧೆ ,ಶೈಕ್ಷಣಿಕ, ಕ್ರೀಡಾ , ಎಲ್ಲಾ ಕ್ಷೇತ್ರ ದಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಚಾರ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಖಜಾಂಚಿ  ಲಯನ್ ಜಯಪ್ರಕಾಶ್ ಭಂಡಾರಿ, ಜಿಲ್ಲಾ ಮಾಜಿ ಕೋಶಾಧಿಕಾರಿ ಲಯನ್ಸ್ ಸ್ಯಾಮುಯೆಲ್ ,ಕಾರ್ಯದರ್ಶಿ ಲಯನ್ಸ್ ನಿತ್ಯಾನಂದ ಭಂಡಾರಿ, ಕೋಶಾಧಿಕಾರಿ  ಲಯನ್ಸ್ ಪ್ರಕಾಶ್ ಪಿಂಟೊ, ವಲಯ ಅದ್ಯಕ್ಷ  ಲಯನ್ಸ್ ಸುಭಾಷ್ ಸುವರ್ಣ ಉಪಸ್ಥಿತರಿದ್ದರು.Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget