November 2021


ರೆಂಜಾಳ ಗ್ರಾಮದ ವ್ಯಕ್ತಿಯೊರ್ವರು ನಾಪತ್ತೆಯಾದ ಕುರಿತು ವರದಿಯಾಗಿದೆ. ರೆಂಜಾಳ ಗ್ರಾಮದ ನೆಲ್ಲಿದಡ್ಕ ನಿವಾಸಿ ಶೇಖರ (40) ನಾಪತ್ತೆಯಾದವರು.

ಇವರು ನ.24ರಂದು ಬಜಗೋಳಿಯ ಅಕ್ಕನ ಮನೆಯಿಂದ ಕೆಲಸಕ್ಕೆಂದು ಬಟ್ಟೆಯ ಚೀಲ ತೆಗೆದುಕೊಂಡು ಹೋದವರು ತನ್ನ ಮನೆಯಾದ ರೆಂಜಾಳ ಗ್ರಾಮದ ನೆಲ್ಲಿದಡ್ಕಕ್ಕೂ ಹೋಗದೇ  ಸಂಬಂಧಿಕರ ಮನೆಗೂ ಹೋಗದೇ, ಇದುವರೆಗೆ ಮನೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.

ಈ  ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.\

ಶ್ರೀ ಕ್ಷೇತ್ರ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜನವರಿ 20 ರಿಂದ 25 ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿರುವುದರಿಂದ ಈ ಪ್ರಯುಕ್ತ  ದಿನಾಂಕ 21.12.21ರಿಂದ 19 01.22ರವರೆಗೆ ಪ್ರತಿದಿನ ಸಾಯಂಕಾಲ 6:30 ರಿಂದ 8.00 ರವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ.

ಈ ಭಜನಾ ಕಾರ್ಯಕ್ರಮದಲ್ಲಿ  ಕಾರ್ಕಳ ತಾಲೂಕಿನ ಭಜನಾ ತಂಡಗಳು ಭಾಗವಹಿಸಿ ಸಹಕರಿಸುವಂತೆ ಕೋರಲಾಗಿದೆ. 

ಹೆಚ್ಚಿನ ಮಾಹಿತಿಗಾಗಿ ಮೋಕ್ತೇಸರ ಶ್ರೀ ಸುಧೀಂದ್ರರಾವ್ ದೂರವಾಣಿ ಸಂಖ್ಯೆ. 9740921853 ಹಾಗೂ 9902207666  ರವರನ್ನು ಸಂಪರ್ಕಿಸುವಂತೆ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

\ 

ಕಾರ್ಕಳ : ಕಾರ್ಕಳ ಕಾಬೆಟ್ಟು ಸಮೀಪ ಮುಖ್ಯರಸ್ತೆ ಬದಿಯಲ್ಲಿರುವ ಸಮೃದ್ಧಿ ಅಪಾರ್ಟ್‌ಮೆಂಟ್‌ ನ ಪ್ರಥಮ ಮಹಡಿಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಕೊಳೆತ ಸ್ಥಿತಿಯಲ್ಲಿ ನ. 27ರಂದು ಪತ್ತೆಯಾಗಿದೆ. 

ಮೃತ ದೇಹವು ಸಂಪೂರ್ಣ ಕೊಳೆತು ಹೋಗಿದ್ದು ಮೃತಪಟ್ಟು 30 ದಿನಗಳಿಗಿಂತ ಹೆಚ್ಚಾಗಿರಬಹುದು.ಮೃತ ವ್ಯಕ್ತಿಗೆ ಸುಮಾರು 50 ರಿಂದ 60 ವರ್ಷ ವಯಸಾಗಿರಬಹುದು ಎಂದು ಅಂದಾಜಿಸಲಾಗಿದೆ.

ನೀಲಿ ಬಣ್ಣದ ಅರ್ಧ ತೋಳಿನ ಶರ್ಟ್,ಕಪ್ಪು ಬಣ್ಣದ ಪ್ಯಾಂಟ್, ನೀಲಿ ಕಪ್ಪು ಬಣ್ಣದ ಪೂಮ ಕಂಪೆನಿಯ ಬರ್ಮುಡ ಚಡ್ಡಿ,ಬಾಟಾ ಕಂಪೆನಿಯ ಕಪ್ಪು ಬಣ್ಣದ ಒಂದು ಜೊತೆ ಚಪ್ಪಲಿ,ಹಲ್ಲು ಉಜ್ಜುವ ಹಸಿರು ಬಣ್ಣದ 2 ಟೂತ್ ಬ್ರಷ್,ತಲೆ ಬಾಚುವ ಬಾಚಣಿಗೆ ದೊರೆತಿದೆ.

ಮೃತ ದೇಹದ ಬಗ್ಗೆ ಮಾಹಿತಿ ಸಿಕ್ಕಲ್ಲಿ ಈ ಕೆಳಕಂಡ ಫೋನ್ ನಂಬರಿಗೆ ಕರೆ ಮಾಡಿ ಮಾಹಿತಿ ತಿಳಿಸಲು ಕೋರಲಾಗಿದೆ.

PSI ಕಾರ್ಕಳ ನಗರ ಠಾಣೆ-08258 230213.

CPI ಕಾರ್ಕಳ 08258 230213.

DySP ಕಾರ್ಕಳ 08258. 231333.

District Control Room Udupi 0820 2534777.

\ಹೆಬ್ರಿ:ಮಟ್ಕಾ ಜುಗಾರಿ ಆಟ ಆಡುತ್ತಿದ್ದ ವ್ಯಕ್ತಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.

ಉಪ್ಪೂರು ನಿವಾಸಿ ಪ್ರಮೋದ್ (26) ಬಂಧಿತ ಆರೋಪಿ.

ನ.27 ರಂದು ಹೆಬ್ರಿ ಗ್ರಾಮದ  ತಾಣ ಎಂಬಲ್ಲಿ ರಸ್ತೆಯ ಬದಿಯಲ್ಲಿರುವ ಅಶ್ವಥ ಮರದ ಕಟ್ಟೆಯ ಬದಿಯಲ್ಲಿ ಆರೋಪಿ ಪ್ರಮೋದ್ ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟು ಹಣವನ್ನು  ಪಡೆದುಕೊಂಡು ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಹೆಬ್ರಿ ಪಿಎಸ್ಐ ಸಿಬ್ಬಂಧಿಯವರೊಂದಿಗೆ  ಸ್ಥಳಕ್ಕೆ  ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯಿಂದ  1240 ರೂಪಾಯಿ ನಗದು, ಮಟ್ಕಾ ನಂಬ್ರ ಬರೆದ ಚೀಟಿ ಹಾಗೂ ಬಾಲ್ ಪೆನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

\

ಕಾರ್ಕಳ : ಕಾರ್ಕಳ ಕಾಬೆಟ್ಟು ಸಮೀಪ ಮುಖ್ಯರಸ್ತೆ ಬದಿಯಲ್ಲಿರುವ ಸಮೃದ್ಧಿ ಅಪಾರ್ಟ್‌ಮೆಂಟ್‌ ನ ಪ್ರಥಮ ಮಹಡಿಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ನ. 27ರಂದು ಪತ್ತೆಯಾಗಿದೆ. 

ಮೃತದೇಹ ಕೊಳೆತ ಸ್ಥಿತಿಯಲ್ಲಿರುವುದರಿಂದ 15 ದಿನಗಳ ಹಿಂದೆ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಅಪಾರ್ಟ್‌ಮೆಂಟ್‌ ನಲ್ಲಿ ಯಾರೊಬ್ಬರೂ ವಾಸ್ತವ್ಯವಿಲ್ಲದಿರುವುದರಿಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಕಾರ್ಕಳ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.

\


MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget