ಸಾಣೂರು:ಹೃದಯಾಘಾತದಿಂದ ಯುವಕ ಸಾವು-Times of karkala

 

ಹೃದಯಾಘಾತದಿಂದ ಯುವಕ ಮೃತಪಟ್ಟ ಘಟನೆ ಸಾಣೂರು ಗ್ರಾಮದಲ್ಲಿ ನಡೆದಿದೆ.ಸಾಣೂರು ನಿವಾಸಿ ರಾಹುಲ್ ಪಿಂಟೋ(32) ಮೃತಪಟ್ಟವರು.

ಶೇರು ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದ ರಾಹುಲ್ ಮನೆಯ ಒಂದನೇ ಮಹಡಿಯಲ್ಲಿ ಕಂಪ್ಯೂಟರ್ ಇಟ್ಟುಕೊಂಡು ಅಲ್ಲಿಯೇ ಕೆಲಸ ಮಾಡಿಕೊಂಡು ಹೆಚ್ಚಿನ ಸಮಯವನ್ನು ಅಲ್ಲಿಯೇ ಕಳೆಯುತ್ತಿದ್ದರು.

ನ.19 ರಂದು ಶುಕ್ರವಾರ ಅಂಗಳದಲ್ಲಿ ಒಣಗಲು ಹಾಕಿದ ಅಡಿಕೆಯನ್ನು ಆತನೇ ಒಟ್ಟು ಮಾಡಿ ಚೀಲದಲ್ಲಿ ತುಂಬಿಸಿ ನಂತರ ಕೊಟ್ಟಿಗೆಯಲ್ಲಿ ತುಂಬಿಸಿದ ನಂತರ ಸುಸ್ತಾಯಿತೆಂದು ಹಾಲ್‌ನಲ್ಲಿ ಕುಳಿತು ವಿಶ್ರಾಂತಿ ಪಡೆದು ಸ್ನಾನ ಮಾಡಿ ಮಧ್ಯಾಹ್ನ 3 ಗಂಟೆಗೆ ಆತನ ಕೊಠಡಿಗೆ ಹೋಗಿದ್ದು ನಂತರ ಮನೆಯಿಂದ ಹೊರಗೆ ಬಂದಿರಲಿಲ್ಲ.

ಎರಡು ದಿನಗಳ ಬಳಿಕ  (ನ. 21 ) ಬೆಳಗ್ಗಿನ ಜಾವ 03:00 ಗಂಟೆಗೆ  ಆತನ ರೂಮ್‌ನ ಬಾಗಿಲು ಹಾಕಿಕೊಂಡಿದ್ದು ಕರೆದರೂ ಪ್ರತಿಕ್ರಿಯಿಸದ ಕಾರಣ ಬಲವಂತದಿಂದ ಬಾಗಿಲು ತೆರೆದು ನೋಡಿದಾಗ ನೆಲದಲ್ಲಿ ಅಂಗಾತನೆ ಬೆತ್ತಲೆಯಾಗಿ ಮೃತಪಟ್ಟಿದ್ದು ದೇಹವು ಊದಿಕೊಂಡು ಸ್ಥಿತಿಯಲ್ಲಿದ್ದು ವಾಸನೆ ಬರುತಿತ್ತು.

ಆತನು ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget