ಕಾರ್ಕಳ:ಭಾಗವತ ಎಳ್ಳಾರೆ ಶಂಕರ್ ನಾರಾಯಣ ನಾಯಕ್ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ-Times of karkala

 

ಭಾಗವತ ಎಳ್ಳಾರೆ ಶಂಕರ್ ನಾರಾಯಣ ನಾಯಕ್ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ.

ಮುಂಬೈ - ಎಳ್ಳಾರೆ ಯಕ್ಷವೈಭವ ಮಕ್ಕಳ ಮೇಳದ ರೂವಾರಿ ಭಾಗವತ ಎಳ್ಳಾರೆ ಶಂಕರ್ ನಾರಾಯಣ ನಾಯಕ್ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ.

ಎಳ್ಳಾರೆ : ಕಾರ್ಕಳ ತಾಲ್ಲೂಕು ರಾಜಾಪುರ ಸಾರಸ್ವತ ಸಂಘವು ನೀಡುವ ಪ್ರತಿಷ್ಠಿತ ವರ್ಷದ ವ್ಯಕ್ತಿ ಪ್ರಶಸ್ತಿಗೆ ಯಕ್ಷಸಂಘಟಕ ಭಾಗವತರಾದ ಎಳ್ಳಾರೆ - ಮುಂಬೈ ಯಕ್ಷವೈಭವ ಮಕ್ಕಳ ಮೇಳದ ರೂವಾರಿ ಎಳ್ಳಾರೆ ಶಂಕರ ನಾರಾಯಣ ನಾಯಕ್‌ ಮುಂಬೈ ಆಯ್ಕೆಯಾಗಿದ್ದಾರೆ. ಡಿಸೆಂಬರ್‌ 3 ರಂದು ಶಿವಾನಂದ ಸರಸ್ವತಿ ಮಹಾಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಎಣ್ಣೆಹೊಳೆ ಲಕ್ಷ್ಮೀಪುರ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ದೀಪೋತ್ಸವದಲ್ಲಿ ವರ್ಷದ ವ್ಯಕ್ತಿ ಗೌರವ ಸಮರ್ಪಣೆ ನಡೆಯಲಿದೆ.

ಕಳೆದ ಹಲವು ವರ್ಷದಗಳಿಂದ ದೂರದ ಮುಂಬೈ ಮತ್ತು ಕಾರ್ಕಳ ತಾಲ್ಲೂಕಿನ ಎಳ್ಳಾರೆಯನ್ನು ತನ್ನ ಸೇವಾ ಕೇಂದ್ರವಾಗಿಸಿಕೊಂಡು ನೂರಾರು ಮಕ್ಕಳಿಗೆ ಯಕ್ಷವೈಭವ ಮಕ್ಕಳ ಮೇಳದ ಮೂಲಕ ಗೆಜ್ಜೆಕಟ್ಟಿಸಿ ಯಕ್ಷ ಕುಣಿತವನ್ನು ಕಲಿಸಿ ರಂಗಪ್ರವೇಶ ಮಾಡಿಸಿದ್ದಾರೆ. ಆ ಮೂಲಕ ಸಣ್ಣ ಮಕ್ಕಳು ಸೇರಿ 500 ಕ್ಕೂ ಹೆಚ್ಚು ಮಕ್ಕಳು ಯಕ್ಷಗಾನ ಕಲಿಸಿದ್ದಾರೆ. 

ಭಾಗವತ ಎಳ್ಳಾರೆ ಶಂಕರ ನಾರಾಯಣ ನಾಯಕ್‌ ಅವರಿಂದಾಗಿ ಎಳ್ಳಾರೆ ಮುನಿಯಾಲು ಕಡ್ತಲ ಸಹಿತ ಪರಿಸರದಲ್ಲಿ ನಿತ್ಯವೂ ಯಕ್ಷಗಾನ ಹಾಡು ಚೆಂಡೆಯ ಸದ್ದು ಕೇಳುತ್ತಿದೆ. ಮುಂಬೈಯಿಂದ ಬಂದು ಊರಿನಲ್ಲೇ ನೆಲೆಸಿದ ಭಾಗವತ ಎಳ್ಳಾರೆ ಶಂಕರ ನಾರಾಯಣ ನಾಯಕ್‌ಈಗ ವಿವಿದೆಡೆ ನೂರಾರು ಮಕ್ಕಳಿಗೆ ಯಕ್ಷಗಾನವನ್ನು ಕಲಿಸುತ್ತ ಆ ಮಕ್ಕಳ ಮೂಲಕವೇ ವಿವಿಧ ಪೌರಣಿಕ ಪ್ರಸಂಗಗಳಲ್ಲಿ ಯಕ್ಷಗಾನ ಪ್ರದರ್ಶನ ಕೊಡಿಸುತ್ತಿದ್ದಾರೆ. ಇತ್ತೀಚೆಗೆ ಎಳ್ಳಾರೆ ಪರಿಸರದಲ್ಲಿ ಚಿಕ್ಕಮೇಳದ ಮೂಲಕ ಮನೆಮನೆಯಲ್ಲಿ ಯಕ್ಷಗಾನ ನೀಡಿ ಎಲ್ಲರ ಮನಗೆದ್ದಿದ್ದಾರೆ. ಅಂದಿನ ಖ್ಯಾತ ಭಾಗವತರಾಗಿದ್ದ ದಿ. ಎಳ್ಳಾರೆ ವೆಂಕಟ್ರಾಯ ನಾಯಕ್‌ಮತ್ತು ಪಾರ್ವತಮ್ಮ ನಾಯಕ್‌ದಂಪತಿಯ ಪುತ್ರರಾದ ಭಾಗವತ ಎಳ್ಳಾರೆ ಶಂಕರ ನಾರಾಯಣ ನಾಯಕ್‌ಎಳ್ಳಾರೆ ಮುಳ್ಕಾಡು ಮತ್ತು ಅಜೆಕಾರು ಮುನಿಯಾಲು ಪರಿಸರದ ಶಾಲಾ ಕಾಲೇಜಿನಲ್ಲಿ ತನ್ನ ಬಾಲ್ಯದ ವಿದ್ಯಾಭ್ಯಾಸ ಪೂರೈಸಿ ಉದ್ಯೋಗ ಅರಸಿ ದೂರದ ಮುಂಬಯಿಗೆ ತೆರಳಿ ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸಿ ಪ್ರವೃತ್ತಿಯಾಗಿ ತನ್ನ ತಂದೆಯಿಂದ ಬಳುವಳಿಯಾಗಿ ಬಂದ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ವಿಶೇಷ ಶ್ರಮವಹಿಸಿ ಯಕ್ಷಸೇವೆಯನ್ನು ಮಾಡುತ್ತ ಬಂದಿದ್ದಾರೆ. 

ಯಕ್ಷಗಾನ ಭಾಗವತರಾಗಿ ಯಕ್ಷಗುರುವಾಗಿ ಯಕ್ಷಸಂಘಟಕರಾಗಿ ಮುಂಬೈಯಾದ್ಯಂತ ಸೇವೆಯನ್ನು ಮಾಡಿ ಈಗ ಹುಟ್ಟೂರಿನಲ್ಲೂ ಯಕ್ಷಸೇವೆಯಲ್ಲಿ ಸಕ್ರೀಯರಾಗಿದ್ದಾರೆ. ಪತ್ನಿ ಉಮಾಲಕ್ಷ್ಮೀ ನಾಯಕ್‌ ಮತ್ತು ಇಬ್ಬರು ಗಂಡು ಮಕ್ಕಳಾದ ಶಿವಾನಂದ್ ನಾಯಕ್ ಹಾಗೂ ಪೂರ್ಣನಂದ್ ನಾಯಕ್ ಅವರೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಮಗ ಪೂರ್ಣಾನಂದ ನಾಯಕ್‌ಕೂಡ ಯಕ್ಷಗಾನ ಕಲಾವಿದರಾಗಿ ತನ್ನ ಅಜ್ಜಿನಿಂದ ಬಂದ ಯಕ್ಷ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಯಕ್ಷಕಲಾ ಸೇವೆಗೆ ಹಲವು ಗೌರವ ಪುರಸ್ಕಾರಗಳು ದೊರೆತಿವೆ. ಇದೀಗ ರಾಜಾಪುರ ಸಾರಸ್ವತ ಸಮಾಜದ ವರ್ಷದ ವ್ಯಕ್ತಿ ಗೌರವ ಸಂದಿದೆ.Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget