ಬಜಗೋಳಿ:ಯೂತ್ ಫಾರ್ ಸೇವಾ ಸಂಸ್ಥೆಯಿಂದ ಸರಕಾರಿ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕ ವಿತರಣೆ-Times of karkala

 ಬಜಗೋಳಿ:ಯೂತ್ ಫಾರ್ ಸೇವಾ ಸಂಸ್ಥೆಯಿಂದ ಪುಸ್ತಕ ವಿತರಣೆ 


ಯೂತ್ ಫಾರ್ ಸೇವಾ ಕಾರ್ಯ ಶ್ಲಾಘನೀಯ: ಪ್ರತಿಯೊಬ್ಬರು ದಾನವನ್ನು ಮಾಡಬೇಕು ಆದರೆ ಯೂತ್ ಫಾರ್ ಸೇವಾ ಸಂಸ್ಥೆಯು ಹಳ್ಳಿಯ ಮಕ್ಕಳಿಗೆ ನೆರವು ಮಾಡುತ್ತಿದೆ ಎಂದು ಗ್ರಾಮ ಪಂಚಾಯತ್ ನ ಅಧ್ಯಕ್ಷ ಸುರೇಶ್ ಶೆಟ್ಟಿ ಅವರು ಹೇಳಿದರು. ಬಜಗೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕ ಪರಿಕರಗಳನ್ನು ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಉದ್ಘಾಟನೆಯನ್ನು  ಸ್ಟೋನ್ ಕ್ರಷರ್ ಹಾಗೂ ಕ್ವಾರಿ ಮಾಲಕರ ಸಂಘದ ರಾಜ್ಯ ಅಧ್ಯಕ್ಷ ರವೀಂದ್ರ ಶೆಟ್ಟಿ ಅವರು ನೆರವೇರಿಸಿ ಹಳ್ಳಿಯ ಶಾಲೆಯನ್ನು ಗುರುತಿಸಿ ಆ ಮಕ್ಕಳಿಗೆ ಬೇಕಾಗಿರುವ ಸಲಕರಣೆಗಳನ್ನು ಕೊಟ್ಟು ಮಕ್ಕಳ ಖುಷಿಯನ್ನು ಕಾಣುತ್ತಿರುವ ಈ ಸಂಸ್ಥೆಗೆ ಶುಭವಾಗಲಿ ಎಂದು ಹಾರೈಸಿದರು. 


ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಯೂಥ್ ಫಾರ್ ಸೇವಾ  ಜಿಲ್ಲಾ ಸಂಚಾಲಕಿ ರಮಿತಾ ಶೈಲೇಂದ್ರ ಅವರು ವಹಿಸಿದ್ದರು ಯೂಥ್ ನ ಸಮಾಜದಲ್ಲಿ ಮಾದರಿ ಆಗಿ ಮಾಡೋದು, ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ನಮ್ಮ ಸಂಸ್ಥೆಯ ದ್ಯೇಯ ಎಂದು ತಿಳಿಸಿದರು.


ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಗಾಯತ್ರಿ ಪ್ರಭು, ಗ್ರಾಮ ಪಂಚಾಯತ್ ಸದಸ್ಯರಾದ  ರಜತ್ ರಾಮ್ ಮೋಹನ್,  ರೇಖಾ ಎಸ್ ಭಂಡಾರಿ, ಶೃತಿ ಅಧಿಕಾರಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವಿನ್ಸೆಂಟ್ ಡಿಸೋಜ, ಮುಖ್ಯೋಪಾಧ್ಯಾಯರಾದ ವಿಜಯಕುಮಾರ್   ಅತಿಥಿಗಳಾಗಿ  ಉಪಸ್ಥಿತರಿದ್ದರು ಮತ್ತು ಯೂತ್ ಫಾರ್ ಸೇವಾ ಸದಸ್ಯರು ಮಕ್ಕಳು ಪೋಷಕರು ಉಪಸ್ಥಿತರಿದ್ದರು.

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget