ಹೆಬ್ರಿ:ಮಟ್ಕಾ ಜುಗಾರಿ ನಿರತ ವ್ಯಕ್ತಿಯ ಬಂಧನ!-Times of karkala

ಹೆಬ್ರಿ:ಮಟ್ಕಾ ಜುಗಾರಿ ಆಟ ಆಡುತ್ತಿದ್ದ ವ್ಯಕ್ತಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.

ಉಪ್ಪೂರು ನಿವಾಸಿ ಪ್ರಮೋದ್ (26) ಬಂಧಿತ ಆರೋಪಿ.

ನ.27 ರಂದು ಹೆಬ್ರಿ ಗ್ರಾಮದ  ತಾಣ ಎಂಬಲ್ಲಿ ರಸ್ತೆಯ ಬದಿಯಲ್ಲಿರುವ ಅಶ್ವಥ ಮರದ ಕಟ್ಟೆಯ ಬದಿಯಲ್ಲಿ ಆರೋಪಿ ಪ್ರಮೋದ್ ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟು ಹಣವನ್ನು  ಪಡೆದುಕೊಂಡು ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಹೆಬ್ರಿ ಪಿಎಸ್ಐ ಸಿಬ್ಬಂಧಿಯವರೊಂದಿಗೆ  ಸ್ಥಳಕ್ಕೆ  ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯಿಂದ  1240 ರೂಪಾಯಿ ನಗದು, ಮಟ್ಕಾ ನಂಬ್ರ ಬರೆದ ಚೀಟಿ ಹಾಗೂ ಬಾಲ್ ಪೆನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

\

















Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget