ಮುದ್ರಾಡಿ ಗುರುರಕ್ಷಾ ಸೌಹಾರ್ದ ಸಹಕಾರಿ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ-Times of karkala

ಮುದ್ರಾಡಿ ಗುರುರಕ್ಷಾ ಸೌಹಾರ್ದ ಸಹಕಾರಿ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ.

ಮುದ್ರಾಡಿ : ಮುದ್ರಾಡಿ ಗುರುರಕ್ಷಾ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿ ಮುಖ್ಯಪ್ರವರ್ತಕರಾಗಿದ್ದ ಮುದ್ರಾಡಿ ಮಂಜುನಾಥ ಪೂಜಾರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶುಕ್ರವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಈ ಆಯ್ಕೆ ನಡೆದಿದೆ. ಸಮಾಜದ ಕಟ್ಟಕಡೆಯ ಸಾಮಾಜಿಕ ನ್ಯಾಯದ ಜೊತೆಗೆ ಆರ್ಥಿಕವಾಗಿ ಸುಲಭದಲ್ಲಿ ಸಾಲ ಸೌಲಭ್ಯ ನೀಡುವುದು. ಬಡಜನರ ಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ ಮುದ್ರಾಡಿ ಗುರುರಕ್ಷಾ ಸೌಹಾರ್ದ ಸಹಕಾರಿಯನ್ನು ಆರಂಭಿಸಲಾಗಿದೆ.ಸಮಾಜ ಸೇವೆಯ ಜೊತೆಗೆ ಜನರ ಸೇವೆಯನ್ನು ನಿರಂತರವಾಗಿ ಮಾಡುತ್ತೇವೆ ಎಂದು ನೂತನ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ತಿಳಿಸಿದರು.


ಉಪಾಧ್ಯಕ್ಷರಾಗಿ ಸತೀಶ್‌ ಶೇರಿಗಾರ್‌, ನಿರ್ದೇಶಕರಾಗಿ ಶಿವಪ್ರಸಾದ್‌ ಮುನಿಯಾಲ್‌, ಸುರೇಶ ಶೆಟ್ಟಿಗಾರ್‌, ದಿನೇಶ ಕುಲಾಲ್‌, ಪ್ರಶಾಂತ ಶೆಟ್ಟಿ, ಆದರ್ಶ ಎಂ ಪೂಜಾರಿ, ಚೇತನ್‌ ಕುಮಾರ್‌ ಕುಚ್ಚೂರು, ಕೃಷ್ಣ ನಾಯ್ಕ್‌ ಹೆಬ್ರಿ, ಸಚ್ಚೀಂದ್ರ ಉಪ್ಪಳ, ರವಿ ಶೆಟ್ಟಿಗಾರ್‌, ಸರೋಜಾ ಎಸ್‌ ಹೆಗ್ಡೆ, ಚಿತ್ರಾ ಆಯ್ಕೆಯಾಗಿದ್ದಾರೆ. ಮುದ್ದು ಪೂಜಾರಿ ಮತ್ತು ಅಶೋಕ ಪೂಜಾರಿ ನಾಮ ನಿರ್ದೇಶಿತ ನಿರ್ದೇಶಕರಾಗಿದ್ದಾರೆ. ಶಶಿಕುಮಾರ್‌ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ, ಹೆಬ್ರಿಯ ಎಚ್.‌ ನಾರಾಯಣ ಪೂಜಾರಿ ಗೌರವ ಸಲಹೆಗಾರರಾಗಿ, ಶ್ರೀವಿದ್ಯಾ ಹೆಬ್ಬಾರ್‌ ಗುಮಾಸ್ತರಾಗಿ ಮತ್ತು ಹರೀಶ್‌ ಕುಲಾಲ್‌ ಪಿಗ್ಮಿ ಕಲೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮಂಜುನಾಥ ಪೂಜಾರಿ ತಿಳಿಸಿದರು.















Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget