ನಿಟ್ಟೆ:ಮಟ್ಕಾ ಜುಗಾರಿ ನಿರತ ವ್ಯಕ್ತಿಯ ಬಂಧನ!-Times of karkala

 

ಕಾರ್ಕಳ: ಮಟ್ಕಾ ಜುಗಾರಿ ಆಟ ಆಡುತ್ತಿದ್ದ ವ್ಯಕ್ತಿಯನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ತೆಳ್ಳಾರು ನಿವಾಸಿ ಉಮಾನಾಥ (36) ಬಂಧಿತ ಆರೋಪಿ.

ನ.25 ರಂದು ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ದೂಪದಕಟ್ಟೆ ರಿಕ್ಷಾ ನಿಲ್ದಾಣದ ಬಳಿ ಆರೋಪಿ ಉಮಾನಾಥ ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟು ಹಣವನ್ನು  ಪಡೆದುಕೊಂಡು ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಾರ್ಕಳ ಗ್ರಾಮಾಂತರ ಠಾಣೆ ಪಿಎಸ್ಐ ಸಿಬ್ಬಂಧಿಯವರೊಂದಿಗೆ  ಸ್ಥಳಕ್ಕೆ  ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯಿಂದ ನಗದು ರೂಪಾಯಿ 2140/-,  ಮಟ್ಕಾ ಬರೆದ ಚೀಟಿ ಮತ್ತು ಬಾಲ್‌ ಪೆನ್‌ ಪಡೆದುಕೊಳ್ಳಲಾಗಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















ಪೊಲೀಸ್ ವರದಿ 

ಕಾರ್ಕಳ : ದಿನಾಂಕ 25/11/2021 ರಂದು ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ದೂಪದಕಟ್ಟೆ ರಿಕ್ಷಾ ನಿಲ್ದಾಣದ ಬಳಿ ಆರೋಪಿ ಉಮಾನಾಥ (36), ತಂದೆ: ಜಯ ಶೆಟ್ಟಿ, ವಾಸ: ಮನೆ ನಂಬ್ರ: 2-399 ತೆಳ್ಳಾರ್ ರಸ್ತೆ, ಶಬರಿ ಆಶ್ರಮದ ಹತ್ತಿರ, ಕಾರ್ಕಳ ಕಸಬಾ ಎಂಬಾತ ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟು ಹಣವನ್ನು  ಪಡೆದುಕೊಂಡು ಮಟ್ಕಾ ಜುಗಾರಿ ಆಟ ಆಡುತ್ತಿದ್ದ  ಬಗ್ಗೆ ಬಂದ  ಮಾಹಿತಿಯಂತೆ ತೇಜಸ್ವಿ, ಪೊಲೀಸ್ ಉಪನಿರೀಕ್ಷಕರು,  ಕಾರ್ಕಳ ಗ್ರಾಮಾಂತರ ಠಾಣೆ ಇವರು ದಾಳಿ ನಡೆಸಿ  ಆರೋಪಿಯನ್ನು  ವಶಕ್ಕೆ  ಪಡೆದು ಆರೋಪಿ  ವಶದಲ್ಲಿ ಮಟ್ಕಾ ಜುಗಾರಿ  ಆಟದಿಂದ  ಸಂಗ್ರಹಿಸಿದ  ನಗದು ರೂಪಾಯಿ 2140/-,  ಮಟ್ಕಾ ಬರೆದ ಚೀಟಿ ಮತ್ತು ಬಾಲ್‌ ಪೆನ್‌ -01 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 135 /2021 ಕಲಂ: 78 (i)(iii) ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget