December 2021

 ಹೆಬ್ರಿ: ಬಾವಿಗೆ ಹಾರಿ ವ್ಯಕ್ತಿ ಆತ್ಮ ಹತ್ಯೆ- Times Of  Karkala

ಹೆಬ್ರಿ: ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ತಾಲೂಕಿನ ಚಾರಾ ಗ್ರಾಮದಲ್ಲಿ ನಡೆದಿದೆ. ಹುತ್ತುರ್ಕೆ ನಿವಾಸಿ ಬಚ್ಚ  ಹಾಂಡ(85 ) ಆತ್ಮಹತ್ಯೆ ಮಾಡಿಕೊಂಡಿವರು. ಇವರಿಗೆ ಅನ್ನನಾಳ ಸಮಸ್ಯೆ ಇದ್ದು, ಅನಾರೋಗ್ಯದಿಂದ ಮನನೊಂದು ಮದ್ಯಪಾನ ಮಾಡುತ್ತಿದ್ದರು ಎನ್ನಲಾಗಿದೆ. 


ಇದೆ ಕಾರಣದಿಂದ ಗುರುವಾರ ಮನೆ ಸಮೀಪದ ಬಾವಿಗೆ  ಹಾರಿ  ಆತ್ಮಹತ್ಯೆ  ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಜಾಹೀರಾತು ಕಾರ್ಕಳ: ಆಂಗ್ಲ ಭಾಷಣ ಸ್ಪರ್ಧೆಯಲ್ಲಿ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿನಿ ಟಿ ಶರಣ್ಯ ನಾಯಕ್  ರಾಷ್ಟ್ರಮಟ್ಟಕ್ಕೆ ಆಯ್ಕೆ-Times Of Karkala 

ಕಾರ್ಕಳ: ನೆಹರು ಯುವ ಕೇಂದ್ರ ಆಯೋಜಿಸಿದ್ದ ದೇಶ ಭಕ್ತಿ ಮತ್ತು ರಾಷ್ಟ್ರ ನಿರ್ಮಾಣದ ಕುರಿತು ರಾಜ್ಯ ಮಟ್ಟದ ಇಂಗ್ಲಿಷ್ ಭಾಷಣ ಸ್ಪರ್ಧೆಯಲ್ಲಿ ಕಾರ್ಕಳ ಭುವನೇಂದ್ರ ಕಾಲೇಜಿನ  ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಟಿ ಶರಣ್ಯ ನಾಯಕ್ ಪ್ರಥಮ ಸ್ಥಾನ ಪಡೆದ್ದಿದಾರೆ. ಪ್ರಶಸ್ತಿಯು ಪ್ರಶಸ್ತಿ ಪತ್ರ ಹಾಗೂ ನಗದು 25 ಸಾವಿರ ರೂ. ಒಳಗೊಂಡಿದೆ. 


ಅವರು  ಜನವರಿಯಲ್ಲಿ ದೆಹಲಿಯಲ್ಲಿ ನಡೆಯುವ  ರಾಷ್ಟ್ರ ಮಟ್ಟ ಸ್ಪರ್ಧೆಗೆ ಅರ್ಹತೆ ಪಡೆದು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.ಇವರು  ಅನಂತ್ ಶಯನ ನಿವಾಸಿ ಟಿ. ರಾಜಾರಾಮ್ ನಾಯಕ್ ಹಾಗೂ ಟಿ ರಾಜೇಶ್ವರಿ ನಾಯಕ್ ಅವರ ಪುತ್ರಿಯಾಗಿದ್ದಾರೆ .

ಜಾಹೀರಾತು


  'ಜೆಲ್ಲೆಯಲ್ಲಿ ನೈಟ್ ಕರ್ಫ್ಯೂ ಅಗತ್ಯವೇ?'-ಮಂಜುನಾಥ್ ಪೂಜಾರಿ- Times Of  Karkala 

ಹೆಬ್ರಿ:ಕೊರೊನ ಅಥವಾ ಒಮಿಕ್ರಾನ್ ತಡೆಗೆ ಸರಕಾರದ ಕಟ್ಟುನಿಟ್ಟಿನ ಕ್ರಮದ ಬಗ್ಗೆ ವಿರೋಧವಿಲ್ಲ ಆದರೆ ಎಲ್ಲಿ ಅಳವಡಿಸಬೇಕು ಎಂಬ  ನಿರ್ಧಾರ ಕೈಗೊಳ್ಳುವಲ್ಲಿ ಸರಕಾರ ವಿಫಲವಾಗಿದೆ . ಜಿಲ್ಲೆಯಲ್ಲಿ ಕೊರೊನ ಪ್ರಭಾವ ಅಷ್ಟಿಲ್ಲ ಆದರೂ ನೈಟ್ ಕರ್ಫ್ಯೂ ಯಾಕೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಪೂಜಾರಿ ಪ್ರಶ್ನಿಸಿದರು .

ಕೆಳೆದ ಬರಿ ಕೋವಿಡ್ ಸಂಬಂಧ ದಿನಕೊಂದು ನಿಯಮ ಜಾರಿಗೊಳಿಸಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದರು . ಇದರಿಂದ ಸರಕಾರ ಪಾಠ ಕಲಿತಿಲ್ಲ ಈಗ ಮತ್ತೊಮ್ಮೆ   ಒಮಿಕ್ರಾನ್ ಬಗ್ಗೆ ಜಾಗ್ರತಿಗೊಳ್ಳಲು ನೈಟ್ ಕರ್ಫ್ಯೂ ಘೋಷಣೆ ಮಾಡಿ ವ್ಯಾಪಾರ ವಹಿವಾಟು ,ವೈಯಕ್ತಿಕ , ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿಷೇದ ಅಥವಾ ನಿಯಮಾನುಸಾರ ಆಚರಿಸಲು ಅವಕಾಶ ಕೊಟ್ಟಿದೆ ಮಾಡುವೆ ರಾಜಕೀಯ ಕಾರ್ಯಕ್ರಮಗಳಲ್ಲಿ ಹಗಲಿಗೆ  ಸಾವಿರಾರು ಜನ  ಸೇರುತ್ತಾರೆ , ಆದರೆ ರಾತ್ರಿಯ ಕಾರ್ಯಕ್ರಮಗಳಿಗೆ ಯಾಕೆ ನಿಷೇಧ ಎಂದು ಪ್ರಶ್ನಿಸಿದರು.


ಕೊರೊನ ರೂಪಾಂತರಿ ವೈರಸ್ ರಾತ್ರಿ 10 ಗಂಟೆಯ ನಂತರವೇ ಹರಡುತ್ತದೆ ಎನ್ನುವುದಕ್ಕೆ ಸರಕಾರಕ್ಕೆ ವೈಜ್ಞಾನಿಕ ಮಾಹಿತಿ ಇದೆಯೇ ? ಈಗಾಗಲೇ ಸಣ್ಣ ವ್ಯಾಪಾರ ಉದ್ಯಮ , ಉದ್ಯೋಗ ಕೆಳೆದುಕೊಂಡು ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ .ಈಗಾಗಲೇ ಕೆಲವು ಕಾರ್ಯಕ್ರಮಗಳಿಗೆ ಪೂರ್ವ ತಯಾರಿಯಾಗಿದ್ದು ಇದನ್ನು ಮುಂದೂಡಿದರೆ ಅದರ ನಷ್ಟಗಳಿಗೆ ಹೊಣೆ ಯಾರು? ಸರಕಾರ ಮತ್ತು ಖಾಸಗಿ ಆಸ್ಪತ್ರೆಗಳು ತಜ್ಞ ವೈದ್ಯರು, ತಾಂತ್ರಿಕ ಸಿಬ್ಬಂದಿಯಿಲ್ಲದೆ ಹಾಗೂ ಆಸ್ಪತ್ರೆಗೆ ಹೋದಾಗ ಅವರನ್ನು ನಿಗಾ ವಹಿಸದ ಆಸ್ಪತ್ರೆಗಳನ್ನು ಗುರುತಿಸಿ ವರ್ದಿ ಮಾಡಬೇಕು . ಯಾವುದೇ ಕಾರಣಕ್ಕೂ ಚುನಾವಣೆ ಮುಂದೂಡದೆ ಅಭಿವೃದ್ಧಿ ದ್ರಷ್ಟಿಯಲ್ಲಿ ಚುನಾವಣೆ ನಡೆಯಬೇಕು. ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೇ ಕೃಷ್ಣ ಶೆಟ್ಟಿ ಹೇಳಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್ , ಸಂತೋಷ್ ನಾಯಕ್ , ವಿಶುಕುಮಾರ್ ಉಪಸ್ಥಿತರಿದ್ದರು. 


ಜಾಹೀರಾತು


ಕೊರಗ ಸಮುದಾಯದ ಮೇಲೆ ಪೊಲೀಸ್ ದ್ರೌಜನ್ಯ ನಡೆಸಿ ಅಮಾಯಕರ ಮೇಲೆ ದಾಖಲಿಸಿದ ಸುಳ್ಳು ಕೇಸ್ ನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ: ವಿಶ್ವ ಹಿಂದೂ ಪರಿಷತ್ ..!- Times Of Karkal 

ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟು  ಕೊರಗ  ಕಾಲನಿಯಲ್ಲಿ ರಾಜೇಶನ ಮೆಹೆಂದಿ ಕಾರ್ಯಕ್ರಮದಲಿ ಪೊಲೀಸ್ ಇಲಾಖೆ ನಡೆಸಿದಂತಹ ದೌರ್ಜನ್ಯವನ್ನು ವಿಶ್ವ ಹಿಂದೂ ಪರಿಷತ್ ಬಲ್ವಾಗಿ ಖಂಡಿಸುತ್ತದೆ ಎಂದು ಭಜರಂಗ ದಳದ  ರಾಜ್ಯ ಸಂಚಾಲಕರಾದ ಸುನಿಲ್ ಕೆ ಆರ್ ಹೇಳಿದರು .ಇವ್ರು ಕೋಟತಟ್ಟು ಚಿಟ್ಟಿಬೆಟ್ಟುವಿನಲ್ಲಿರುವ ಕೊರಗ ಕಾಲೋನಿಯ ಕ್ಕೆ ಭೇಟಿ ನೀಡಿ ವಧು ವರರಿಗೆ ಶುಭ ಹಾರೈಸಿ, ಮೆಹೆಂದಿ ಕಾರ್ಯಕ್ರಮದಲ್ಲಿ ನಡೆದ ಪೊಲೀಸ್ ದೌರ್ಜನ್ಯ ಬಗ್ಗೆ ವಿಷಾದ ಪಡಿಸಿದರು. 

ಕೊರಗ ಸಮಾಜದ ಒಬ್ಬ ವ್ಯಕ್ತಿಯ ಹಾಗೂ ಸಮುದಾಯದ ಕಾಲೋನಿಯ ಮೇಲೆ ದಾಳಿಯ ರೀತಿಯ್ಲಲಿ ಇಲ್ಲಿ ಬಂದು ಸಮುದಾಯದ ಮಕ್ಕಳ ಹಾಗೂ ಮಹಿಳೆಯರ  ಮೇಲೆ ಅಲ್ಲದೆ ಒಬ್ಬ ಮದುಮಗನ ಮೇಲೆ ಮಾಡಿದಂತಹ ಹೆಲ್ಲೇ ಖಂಡನೀಯ  ಎಂದರು.

ಆದ್ದರಿಂದ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಈ ಕೊರಗ ಸಮುದಾಯದ ಜೊತೆಗೆ ಹಾಗೂ ಎಲ್ಲ ಕಾಲೋನಿಯವರೊಂದಿಗೆ ಅವರಿಗಾದ ಅನ್ಯಾಯ ದ ವಿರುದ್ಧ ದ್ವನಿ ಎತ್ತಿ ಇದರ ಬಗ್ಗೆ ಏನೇನು ಹೋರಾಟ ನಡೆಯುತ್ತದೆಯೋ ಅದರ ಜೊತೆಗೆ ವಿಶ್ವ ಹಿಂದೂ ಪರಿಷತ್ ನಿರಂತರವಾಗಿ ಒಟ್ಟಾಗಿ ಒಂದಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು.  

ಅವರು ದಾಖಲಿಸಿದಂತಹ ಸುಳ್ಳು ಕೇಸ್ ನ್ನು ತಕ್ಷಣ ಹಿಂಪಡೆಯಬೇಕು ಇಲ್ಲವಾದರೆ ಉಗ್ರ ಹೋರಾಟ ನಡೆಸುವುದಾಗಿ  ಹೇಳಿದರು. 

ಹಿಂದೆ ಉಳಿದಂತೆ ಈ ಸಮಾಜ ನಮ್ಮ ಹಿಂದೂ ಸಮಾಜದೊಂದಿಗೆ ಸೇರಿಕೊಂಡು ಹೋಗಬೇಕಾದ  ಈ ಕಾಲ ಘಟ್ಟದಲ್ಲಿ  ಪೊಲೀಸ್ ವ್ಯವಸ್ಥೆ ಇದನ್ನು ಮತ್ತೆ  ಕೆದಕುವುದಂತಹ ಪ್ರಯತ್ನದಲ್ಲಿದೆ ಅದಕ್ಕೆ ನಮ್ಮ ವಿರೋಧವನ್ನು ವ್ಯಕ್ತಪಡಿಸುತ್ತೇವೆ. ತಕ್ಷಣ್ ಈ ಎಫ್ ಆರ್ ಐ ನ್ನು ಹಿಂಪಡೆಯಬೇಕೆಂದು ವಿಶ್ವ ಹಿಂದೂ ಪರಿಷತ್ ಹಾಗು ಭಜರಂಗ ದಳ ಆಗ್ರಹಿಸುತ್ತದೆ ಎಂದು ಭಜರಂಗ ದಳದ ರಾಜ್ಯ ಸಂಚಾಲಕರಾದ ಸುನಿಲ್ ಕೆ ಆರ್  ಹೇಳಿದರು.

ಈ ಸಂದರ್ಭದಲ್ಲಿ ಭಜರಂಗದಳ ಜಿಲ್ಲಾ ಸಂಚಾಲಕರಾದ ದಿನೇಶ್ ಮೆಂಡನ್ , ಸುರೇಂದ್ರ ಕುಮಾರ್ ಮಾರ್ಕೋಡ್ , ಹಿಂದೂ ಜಾಗರಣ ವೇದಿಕೆ ಮುಖಂಡರಾದ ರತ್ನಾಕರ್ ಭಾರೀಕೆರೆ , ಪ್ರಸಾದ್ ಬಾರೀಕೆರೆ, ಮೊದಲಾದವರು ಉಪಸ್ತಿಥರಿದ್ದರು. 

ಜಾಹೀರಾತು


MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget