ಕಾರ್ಕಳ: ಪುರಸಭೆ ವ್ಯಾಪ್ತಿಯಲ್ಲಿ 1 ಕೋ. ರೂ . ಅಭಿವೃದ್ಧಿ ಕಾಮಗಾರಿಗೆ ಸಚಿವ ವಿ. ಸುನಿಲ್ ಕುಮಾರ್ ರವರಿಂದ ಚಾಲನೆ - Times Of Karkala

ಕಾರ್ಕಳ: ಪುರಸಭೆ ವ್ಯಾಪ್ತಿಯಲ್ಲಿ 1 ಕೋ. ರೂ . ಅಭಿವೃದ್ಧಿ ಕಾಮಗಾರಿಗೆ ಸಚಿವ ವಿ. ಸುನಿಲ್ ಕುಮಾರ್ ರವರಿಂದ ಚಾಲನೆ - Times Of Karkala

ಕಾರ್ಕಳ: ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ರವರು  ಪುರಸಭೆ ವ್ಯಾಪ್ತಿಯಲ್ಲಿ 1 ಕೋ. ರೂ . ವೆಚ್ಚದ ವಿವಿಧ ಅಭಿವೃದ್ಧಿ  ಕಾಮಗಾರಿಗೆ ದಾನಶಾಲೆ ಕಾಲನಿ ಬಳಿ ಭೂಮಿ ಪೂಜೆ ನರವೇರಿಸಿದರು .

ತಾಲೂಕಿನ ಪರಿಶಿಷ್ಟ ಜಾತಿ ,ಪಂಗಡಗಳ ಕಾಲೋನಿಗಳನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಮಾಡುವ ಪ್ರಯತ್ನ ತನ್ನ ಶಾಸಕತ್ವ  ಅವಧಿಯಲ್ಲಿ ನಡೆದಿದೆ, ಮುಂದೆಯೂ ತಾಲೂಕಿನ ಎಲ್ಲ ಕಾಲನಿಗಳ  ಅಭಿವೃದ್ಧಿಗೆ  ಒತ್ತು ನೀಡಲಾಗುತ್ತಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

 ತಾಲೂಕಿನ ಕುಡಿಯುವ ನೀರು ಒಳಚರಂಡಿ ವ್ಯವಸ್ಥೆ ಮೊದಲಾದ ಮೂಲಸೌಕರ್ಯಕ್ಕೆ ಒತ್ತು ನೀಡಲಾಗುವುದು .ಕ್ಷೇತ್ರದ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯವಿದೆ ಎಂದು ನುಡಿದರು.

 ಶಿವಭಕ್ತ ಭಜನಾ ಮಂಡಳಿ ಕಟ್ಟಡ ಈ ಹಿಂದೆಯೇ ದಾನಿಗಳ ಸಹಕಾರದಲ್ಲಿ ನಿರ್ಮಾಣಗೊಂಡಿದೆ , ಅದಕ್ಕೆ ಮೇಲ್ಚಾವಣಿ ನಿರ್ಮಾಣ ಶೀಘ್ರ ಈಡೇರಲಿದೆ ಎಂದು ಹೇಳಿದರು.

 


ಕಾಲನಿಗೆ ಸಂಪರ್ಕಿಸುವ ಆರಂಭದ ರಸ್ತೆ ಕಾಂಕ್ರೀಟ್ ಕಾಮಗಾರಿಯಾಗಿ ಅಭಿವೃದ್ಧಿಯಾಗಿದೆ . ಕಾಲನಿಗೆ ಹೋಗುವ ರಸ್ತೆಗಾಳ ಅಭಿವೃದ್ಧಿ ಆಗಬೇಕಿದೆ , ಒಳ ರಸ್ತೆ ಕಾಂಕ್ರೀಟ್ ಕಾಮಗಾರಿ, ಚರಂಡಿ ಇತ್ಯಾದಿ ಕಾರ್ಯಗಳು ನಡೆಯಲಿದೆ ಎಂದರು .

 ಈ ಸಮಯದಲ್ಲಿ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್ , ಮುಖ್ಯಾಧಿಕಾರಿ ರೂಪ ಟಿ . ಶೆಟ್ಟಿ , ಪುರಸಭೆ ಅಧ್ಯಕ್ಷರಾದ ಯೋಗೀಶ್ ದೇವಾಡಿಗ, ಭಾರತಿ ಅಮೀನ್ , ಶಶಿಕಲಾ ಶೆಟ್ಟಿ , ಸಂದ್ಯಾ ಮಲ್ಯ , ಪ್ರದೀಪ್ ಕುಮಾರ್ , ವಿನ್ನಿಬೋಲ್ಡ್  ಮೆಡೋನ್ನಾ , ಪ್ರಸನ್ನ , ಅವಿನಾಶ್ , ಬಿಜೆಪಿ ನಗರಾಧ್ಯಕ್ಷ ರವೀಂದ್ರ ಮೊಯಿಲಿ , ಪುರಸಭೆ ಮಾಜಿ ಸದ್ಯಸ್ಯ ಪ್ರಕಾಶ್ ರಾವ್ ,ಶಿವಭಕ್ತ ಭಜನಾ ಮಂಡಳಿಯ ಗೌರವಾಧ್ಯಕ್ಷ ರಮೇಶ್ ಕಾರ್ಲ , ಅಧ್ಯಕ್ಷ ರಾಜು , ಶೀನಿವಾಸ್ ಕಾರ್ಲ , ರತ್ನೇಶ್ , ಸುಂದರ್ ಶೀನ , ರಮೇಶ್ , ನವೀನ್,ದಿನೇಶ್, ಶಶಿಕಾಂತ್, ರಾಮ , ರಾಮಚಂದ್ರ ಮೊದಲಾದವರು ಉಪಸ್ಥಿತರಿದ್ದರು .


ಜಾಹೀರಾತು  

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget