ಕಂಬಳ,ಯಕ್ಷಗಾನಕ್ಕೂ ತಟ್ಟಿದ ನೈಟ್ ಕರ್ಫ್ಯೂ : ರಾತ್ರಿ 10 ಗಂಟೆಯೊಳಗೆ ಮುಗಿಸುವಂತೆ ಸೂಚನೆ -Times of karkala

ಕಂಬಳ,ಯಕ್ಷಗಾನಕ್ಕೂ ತಟ್ಟಿದ ನೈಟ್ ಕರ್ಫ್ಯೂ :  ರಾತ್ರಿ 10 ಗಂಟೆಯೊಳಗೆ ಮುಗಿಸುವಂತೆ ಸೂಚನೆ -Times of karkala 

ಓಮೀಕ್ರಾನ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದ್ದು ರಾಜ್ಯ ಸರಕಾರದ ಆದೇಶವು ಕರಾವಳಿಯಲ್ಲಿ ನಡೆಯುವ ಯಕ್ಷಗಾನ  ಹಾಗೂ ಕಂಬಳಕ್ಕೂ  ಅನ್ವಯಿಸಲಿದೆ ಎಂಬುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಸೂಚಿಸಿದ್ದಾರೆ .

ನೈಟ್ ಕರ್ಫ್ಯೂ ವಿಚಾರದಲ್ಲಿ ರಾಜ್ಯ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುವುದು . ಕಂಬಳ ಯಕ್ಷಗಾನ ಸೇರಿದಂತೆ ರಾತ್ರಿ ನೆಡೆಯುವಂತಹ ಕಾರ್ಯಕ್ರಮಗಳನ್ನು 10  ಗಂಟೆಯೊಳಗೆ ಮುಗಿಸಬೇಕು . ಇದರಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ  ಎಂಬುದಾಗಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸ್ಪಷ್ಟಪಡಿಸಿದ್ದಾರೆ.ಇಂದು ಈ ಕುರಿತು ಸಭೆಯನ್ನು ನಡೆಸಿ ಆಯೋಜಕರ ಜೊತೆಗೆ ಚರ್ಚಿಸಲಾಗುವುದು . ನೈಟ್ ಕರ್ಫ್ಯೂ ಆರಂಭಕ್ಕೂ  ಮೊದಲೇ ಎಲ್ಲ ಕಾರ್ಯಕ್ರಮ ಮುಗಿಸುವಂತೆ ಸಂಬಂಧಪಟ್ಟವರಿಗೆ ಸೂಚನೆಗಳನ್ನು  ನೀಡಲಾಗುವುದು. ಓಮೀಕ್ರಾನ್ ಹೆಚ್ಚುತ್ತಿರುವ ಕಾರಣ ಸರಕಾರವು ಕಟ್ಟೆಚ್ಚರದ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು ಯಾವುದೇ ಕಾರಣಕ್ಕೂ ನೈಟ್ ಕರ್ಫ್ಯೂ ಅವಧಿಯಲ್ಲಿ ನಿಯಮಗಳನ್ನು ಸಡಿಲಗೊಳಿಸಲು ಆಗುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ .

  ರಾತ್ರಿ ನಡೆಯುವ ಯಕ್ಷಗಾನ ಕಂಬಳಗಳನ್ನೂ  ಬೇಗನೆ ಆರಂಭಿಸಿ ನೈಟ್ ಕರ್ಫ್ಯೂ ಆರಂಭವಾಗುವುದರೊಳಗೆ ಮುಗಿಸಬೇಕು. ನೈಟ್ ಕರ್ಫ್ಯೂ ನಿಯಮಗಳು ಇಡೀ ರಾಜ್ಯಕ್ಕೆ ಅನ್ವಯವಾಗುವುದರಿಂದ ನಿಯಮಗಳನ್ನು ಸಡಿಲಗೊಳಿಸುವ ನಿರ್ಧಾರವು ಸರ್ಕಾರದ ಮಟ್ಟದಲ್ಲಿಯೇ ಆಗಬೇಕಾಗುತ್ತದೆ ಎಂಬುದಾಗಿ ತಿಳಿಸಿದರು.  

ಜಾಹೀರಾತು
      

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget