ಮುಂಡ್ಕೂರು:ಕುಲಾಲ ಸಂಘ ನಾನಿಲ್ತಾರ್ ಇದರ 33 ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕ ಮಹಾಸಭೆ-Times of karkala

ಕಾರ್ಕಳ: ಕುಲಾಲ ಸಂಘ ನಾನಿಲ್ತಾರ್ (ರಿ.)ಮುಲ್ಲಡ್ಕ-ಮುಂಡ್ಕೂರು ಇದರ 33 ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕ ಮಹಾಸಭೆಯು ಪ್ರತಿಭಾ ಪುರಸ್ಕಾರ, ವೈದ್ಯಕೀಯ ನೆರವು ಹಸ್ತಾಂತರ ಸಾಧಕರಿಗೆ ಅಭಿನಂದನ ಕಾರ್ಯಕ್ರಮವು ಡಿ.12 ರಂದು ಸಂಘದ ಅಧ್ಯಕ್ಷರಾದ ಕುಶ ಆರ್. ಮೂಲ್ಯರವರ ಅಧ್ಯಕ್ಷತೆಯಲ್ಲಿ ನಡೆಯಿತು.


ವಾರ್ಷಿಕ ಮಹಾಸಭೆಯನ್ನು ಮುಂಬೈ ಉದ್ಯಮಿ ಶ್ರೀ ಐತು ಆರ್.ಮೂಲ್ಯ ಉದ್ಘಾಟಿಸಿದರು. ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸದಸ್ಯರಾದ ನಾಗೇಶ್ ಕುಲಾಲ್ ಕುಳಾಯಿ,ಕುಲಾಲ ಕುಂಬಾರರ ಗುಡಿಕೈಗಾರಿಕೆ ಸಹಕಾರಿ ಸಂಘ(ರಿ) ಪೆರ್ಡೂರು ಇದರ ಸಿಜಿಒ ಸುಧಾಕರ್,ಕಾರ್ಕಳ ಕುಲಾಲ ಸಂಘ ಮಹಿಳಾ ಘಟಕದ ಅದ್ಯಕ್ಷೆ ಜ್ಯೋತಿ ಕುಲಾಲ್,ಉಪಾಧ್ಯಕ್ಷ ಬೊಗ್ಗು ಮೂಲ್ಯ,ಪ್ರದಾನ ಕಾರ್ಯದರ್ಶಿ ದಿನೇಶ್ ಕುಲಾಲ್,ದೀಪಕ್ ಕುಲಾಲ್,ಶ್ರೀಮತಿ ರತ್ನಾ ಜಿ. ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಸಂದರ್ಭ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಗಣೇಶ್ ಪಂಜಿಮಾರು,ಇನ್ನಾ ಗ್ತಾಮ ಪಂಚಾಯತ್ ಅಧ್ಯಕ್ಷ ಕುಶ ಆರ್. ಮೂಲ್ಯ,ಸಂತೋಷ ಕುಲಾಲ್ ಪದವು,ವಸಂತ ಕುಮಾರ್, ಶಶಿ ಕುಲಾಲ್,ಪ್ರಕಾಶ್ ಕುಲಾಲ್,ತಿಲಕ್ ಕುಲಾಲ್,ನಾಗೇಶ್ ಕುಲಾಲ್,ನಿತೇಶ್ ಕುಲಾಲ್, ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.





























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget