ಅಜೆಕಾರು:ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದವರಿಗೆ ಕಾರು ಡಿಕ್ಕಿ ಹೊಡೆದು ಪರಾರಿ-Times of karkala

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮೂವರಿಗೆ  ಓಮಿನಿಯೊಂದು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಅಜೆಕಾರು ಗುಡ್ಡೆಯಂಗಡಿ ಬಳಿ ನಡೆದಿದೆ.

ರವಿ,ಸುಂದರ ಹಾಗೂ ನಾರಾಯಣ ಎಂಬುವವರು ಕೆಲಸದಿಂದ ಮರಳಿ ಮನೆಗೆ ಹೋಗುತ್ತಿದ್ದಾಗ  ಗುಡ್ಡೆಯಂಗಡಿ ನರ್ಸರಿ ಬಳಿ ತಲುಪಿದಾಗ ಹಿಂದಿನಿಂದ ಅಂದರೆ ಹೆಬ್ರಿ ಕಡೆಯಿಂದ ಬಂದ ವಾಹನವೊಂದು  3 ಜನರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು,3 ಜನರು ಒಮ್ಮೇಲೆ ರಸ್ತೆಗೆ ಬಿದ್ದಿರುತ್ತಾರೆ.  

ಕಾರು ಡಿಕ್ಕಿ ಹೊಡೆದು ವೇಗವಾಗಿ ತಪ್ಪಿಸಿಕೊಂಡು ಹೋಗಿದ್ದು,ಈ ಪೈಕಿ ಸುಂದರ ರವರು ಪ್ರಜ್ಞೆ ಕಳೆದುಕೊಂಡಿದ್ದಾರೆ.ಉಳಿದವರಿಗೆ ಸಣ್ಣಪುಟ್ಟ ಗಾಯಗಾಗಿವೆ. 

ಕೂಡಲೇ ಸ್ಥಳೀಯರು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸುಂದರವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ  ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget