ಕೊರಗ ಸಮುದಾಯದ ಮೇಲೆ ಪೊಲೀಸ್ ದ್ರೌಜನ್ಯ ನಡೆಸಿ ಅಮಾಯಕರ ಮೇಲೆ ದಾಖಲಿಸಿದ ಸುಳ್ಳು ಕೇಸ್ ನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ: ವಿಶ್ವ ಹಿಂದೂ ಪರಿಷತ್ ..!- Times Of Karkal

ಕೊರಗ ಸಮುದಾಯದ ಮೇಲೆ ಪೊಲೀಸ್ ದ್ರೌಜನ್ಯ ನಡೆಸಿ ಅಮಾಯಕರ ಮೇಲೆ ದಾಖಲಿಸಿದ ಸುಳ್ಳು ಕೇಸ್ ನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ: ವಿಶ್ವ ಹಿಂದೂ ಪರಿಷತ್ ..!- Times Of Karkal 

ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟು  ಕೊರಗ  ಕಾಲನಿಯಲ್ಲಿ ರಾಜೇಶನ ಮೆಹೆಂದಿ ಕಾರ್ಯಕ್ರಮದಲಿ ಪೊಲೀಸ್ ಇಲಾಖೆ ನಡೆಸಿದಂತಹ ದೌರ್ಜನ್ಯವನ್ನು ವಿಶ್ವ ಹಿಂದೂ ಪರಿಷತ್ ಬಲ್ವಾಗಿ ಖಂಡಿಸುತ್ತದೆ ಎಂದು ಭಜರಂಗ ದಳದ  ರಾಜ್ಯ ಸಂಚಾಲಕರಾದ ಸುನಿಲ್ ಕೆ ಆರ್ ಹೇಳಿದರು .ಇವ್ರು ಕೋಟತಟ್ಟು ಚಿಟ್ಟಿಬೆಟ್ಟುವಿನಲ್ಲಿರುವ ಕೊರಗ ಕಾಲೋನಿಯ ಕ್ಕೆ ಭೇಟಿ ನೀಡಿ ವಧು ವರರಿಗೆ ಶುಭ ಹಾರೈಸಿ, ಮೆಹೆಂದಿ ಕಾರ್ಯಕ್ರಮದಲ್ಲಿ ನಡೆದ ಪೊಲೀಸ್ ದೌರ್ಜನ್ಯ ಬಗ್ಗೆ ವಿಷಾದ ಪಡಿಸಿದರು. 

ಕೊರಗ ಸಮಾಜದ ಒಬ್ಬ ವ್ಯಕ್ತಿಯ ಹಾಗೂ ಸಮುದಾಯದ ಕಾಲೋನಿಯ ಮೇಲೆ ದಾಳಿಯ ರೀತಿಯ್ಲಲಿ ಇಲ್ಲಿ ಬಂದು ಸಮುದಾಯದ ಮಕ್ಕಳ ಹಾಗೂ ಮಹಿಳೆಯರ  ಮೇಲೆ ಅಲ್ಲದೆ ಒಬ್ಬ ಮದುಮಗನ ಮೇಲೆ ಮಾಡಿದಂತಹ ಹೆಲ್ಲೇ ಖಂಡನೀಯ  ಎಂದರು.

ಆದ್ದರಿಂದ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಈ ಕೊರಗ ಸಮುದಾಯದ ಜೊತೆಗೆ ಹಾಗೂ ಎಲ್ಲ ಕಾಲೋನಿಯವರೊಂದಿಗೆ ಅವರಿಗಾದ ಅನ್ಯಾಯ ದ ವಿರುದ್ಧ ದ್ವನಿ ಎತ್ತಿ ಇದರ ಬಗ್ಗೆ ಏನೇನು ಹೋರಾಟ ನಡೆಯುತ್ತದೆಯೋ ಅದರ ಜೊತೆಗೆ ವಿಶ್ವ ಹಿಂದೂ ಪರಿಷತ್ ನಿರಂತರವಾಗಿ ಒಟ್ಟಾಗಿ ಒಂದಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು.  

ಅವರು ದಾಖಲಿಸಿದಂತಹ ಸುಳ್ಳು ಕೇಸ್ ನ್ನು ತಕ್ಷಣ ಹಿಂಪಡೆಯಬೇಕು ಇಲ್ಲವಾದರೆ ಉಗ್ರ ಹೋರಾಟ ನಡೆಸುವುದಾಗಿ  ಹೇಳಿದರು. 

ಹಿಂದೆ ಉಳಿದಂತೆ ಈ ಸಮಾಜ ನಮ್ಮ ಹಿಂದೂ ಸಮಾಜದೊಂದಿಗೆ ಸೇರಿಕೊಂಡು ಹೋಗಬೇಕಾದ  ಈ ಕಾಲ ಘಟ್ಟದಲ್ಲಿ  ಪೊಲೀಸ್ ವ್ಯವಸ್ಥೆ ಇದನ್ನು ಮತ್ತೆ  ಕೆದಕುವುದಂತಹ ಪ್ರಯತ್ನದಲ್ಲಿದೆ ಅದಕ್ಕೆ ನಮ್ಮ ವಿರೋಧವನ್ನು ವ್ಯಕ್ತಪಡಿಸುತ್ತೇವೆ. ತಕ್ಷಣ್ ಈ ಎಫ್ ಆರ್ ಐ ನ್ನು ಹಿಂಪಡೆಯಬೇಕೆಂದು ವಿಶ್ವ ಹಿಂದೂ ಪರಿಷತ್ ಹಾಗು ಭಜರಂಗ ದಳ ಆಗ್ರಹಿಸುತ್ತದೆ ಎಂದು ಭಜರಂಗ ದಳದ ರಾಜ್ಯ ಸಂಚಾಲಕರಾದ ಸುನಿಲ್ ಕೆ ಆರ್  ಹೇಳಿದರು.

ಈ ಸಂದರ್ಭದಲ್ಲಿ ಭಜರಂಗದಳ ಜಿಲ್ಲಾ ಸಂಚಾಲಕರಾದ ದಿನೇಶ್ ಮೆಂಡನ್ , ಸುರೇಂದ್ರ ಕುಮಾರ್ ಮಾರ್ಕೋಡ್ , ಹಿಂದೂ ಜಾಗರಣ ವೇದಿಕೆ ಮುಖಂಡರಾದ ರತ್ನಾಕರ್ ಭಾರೀಕೆರೆ , ಪ್ರಸಾದ್ ಬಾರೀಕೆರೆ, ಮೊದಲಾದವರು ಉಪಸ್ತಿಥರಿದ್ದರು. 

ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget