ಇನ್ನ ಗ್ರಾಮ ಪಂಚಾಯತ್, ವಿವಿಧ ಕಾಮಗಾರಿಗಳಿಗೆ ಚಾಲನೆ-Times of karkala

 

ಗ್ರಾಮೀಣ ಪ್ರದೇಶಕ್ಕೆ ಸರಕಾರದ ಅನುದಾನಗಳನ್ನುನೀಡಿದ್ದಲ್ಲಿ ಮೂಲ ಸೌಕರ್ಯಗಳಿಗೆ ಒದಗಿಸಲು ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಅಭಿವೃಧ್ಧಿಗಳನ್ನು ಕಾಣಲು ಸಾಧ್ಯ ಎಂದು ಇನ್ನಾ ಗ್ರಾ.ಪಂ ಅಧ್ಯಕ್ಷರಾದ ಕುಶ ಆರ್ ಮೂಲ್ಯ ತಿಳಿಸಿದರು.

ಇನ್ನಾ ಗ್ರಾ.ಪಂ 2021-22 ನೇ ಸಾಲಿನ ಸುಮಾರು 30 ಲಕ್ಷಕ್ಕೂ ಮಿಕ್ಕಿದ ಕ್ರಿಯಾ ಯೋಜನೆಯ ಕಾಮಗಾರಿಗಳಲ್ಲಿ ಕಾಂಜರಕಟ್ಟೆ ತೋಡಿಕರ್ಮರು ಪ್ರದೇಶದಲ್ಲಿ 15 ನೇ ಹಣಕಾಸು ಯೋಜನೆಯಡಿ 2 ಲಕ್ಷ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 3 ಲಕ್ಷ ಅನುದಾನದಲ್ಲಿ ರಸ್ತೆ ಕಾಂಕ್ರಿಟ್ ಕಾಮಗಾರಿಗೆ ಚಾಲನೆ ನೀಡಿದರು.

ಇನ್ನಾ ಗ್ರಾಮ ಪಂಚಾಯತ್  ಉಪಾಧ್ಯಕ್ಷರಾದ ಶ್ರೀ ಸರಿತಾ ಶೆಟ್ಟಿ ಸದಸ್ಯರಾದ ದೀಪಕ್ ಕೋಟ್ಯಾನ್, ಶರ್ಮಿಳಾ, ವಿಮಲ, ಕಸ್ತೂರಿ, ಚಂದ್ರಹಾಸ ಶೆಟ್ಟಿ, ಪ್ರೇಮ್ ಕುಲಾಲ್, ಸಮೀಕ್ಷಾ ಶೆಟ್ಟಿ,  ಮಾಜಿ ಅಧ್ಯಕ್ಷರಾದ ಜಯ ಎಸ್ ಕೋಟ್ಯಾನ್, ಜೋನ್ ಮೆಂಡೋನ್ಸ, ಅಮರನಾಥ ಶೆಟ್ಟಿ, ಸುರೇಶ್ ಮೂಲ್ಯ, ಗ್ರೆಗೋರಿ ಡಿಸೋಜಾ, ಶಿವಾನಂದ, ನಾಗೇಶ್ ಮೂಲ್ಯ, ಸುಂದರಿ ಪೂಜಾರಿ, ವನಿತಾ,  ಶಾಂತಿ ಮುಂತಾದವರು ಉಪಸ್ಥಿತರಿದ್ದರು ಗ್ರಾಮ ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಸತೀಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget