ಕಾರ್ಕಳ:ಸಾರ್ವಜನಿಕರು ಕುಡಿಯುವ ನೀರಿನ ಬಾವಿಯಲ್ಲಿ ತ್ಯಾಜ್ಯ ವಸ್ತುಗಳು!ಪುರಸಭಾ ಸದಸ್ಯ ಶುಭದರಾವ್ ಆಕ್ರೋಶ-Times of karkala

ಸಾರ್ವಜನಿಕರು ಕುಡಿಯುವ ನೀರಿನ ಬಾವಿಯಲ್ಲಿ ಸಿಮೆಂಟ್ ಚೀಲ‌ ಮತ್ತು ಇತರ ತ್ಯಾಜ್ಯ ವಸ್ತುಗಳು, ಪುರಸಭಾ ಅಡಳಿತದ ನಿರ್ಲಕ್ಷಕ್ಕೆ ಪುರಸಭಾ ಸದಸ್ಯ  ಶುಭದರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.



ಕಾರ್ಕಳ ಪುರಸಭಾ ವ್ಯಾಪ್ತಿಯ ಅನೆಕೆರೆ ಪಾರ್ಕ್  ಪಕ್ಕದ ಸಾರ್ವಜನಿಕು ಕುಡಿಯುವ ನೀರಿನ ಬಾವಿಯಲ್ಲಿ ಸಿಮೆಂಟ್ ಚೀಲ ಹಾಗೂ ಇತರ ತ್ಯಾಜ್ಯ ವಸ್ತುಗಳು ಬಿದ್ದು ನೀರು ಅಶುದ್ದವಾಗಿದೆ ಇದಕ್ಕೆ ಪುರಸಭೆ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಪುರಸಭಾ ಸದಸ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಾನು ಆ ಭಾಗದ  ಸದಸ್ಯರಾಗಿದ್ದ ಸಂದರ್ಭದಲ್ಲಿ ಅನೆಕೆರೆ, ನಾರಾಯಣಗುರು ನಗರ, ಬೈಪಾಸ್, ದುಗ್ಗಬೆಟ್ಟು ಮೊದಲಾದ ಪ್ರದೇಶ ಜನರ ನೀರಿನ ಸಮಸ್ಯೆಯನ್ನು ಅರಿತು ತೆರೆದ ಬಾವಿಯನ್ನು‌ ನಿರ್ಮಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿತ್ತು, ಪರಿಸರದ  ಸಾರ್ವಜನಿಕರು ಕುಡಿಯಲು ಮತ್ತು ಗೃಹ ಬಳಕೆಗೆ ಇದೇ  ನೀರನ್ನು ಉಪಯೋಗಿಸುತ್ತಿದ್ದಾರೆ, ನೀರಿನ ಶುದ್ದತೆ ಕಾಪಾಡಲು ಅನುಕೂಲವಾಗುವಂತೆ  ಬಾವಿಗೆ ಕಬ್ಬಿಣದ ಗ್ರಿಲ್ ಅಳವಡಿಸುವಂತೆ ಪ್ರತಿ ಸಾಮಾನ್ಯ ಸಭೆಯಲ್ಲಿ ವಿನಂತಿಸಿದರೂ ಆಡಳಿತ ನಿರ್ಲಕ್ಷ್ಯಿಸುತ್ತಾ ಬಂದಿದರ ಫಲ ಇಂದು ಅಶುದ್ದ ನೀರು ಕುಡಿಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget