'ಜೆಲ್ಲೆಯಲ್ಲಿ ನೈಟ್ ಕರ್ಫ್ಯೂ ಅಗತ್ಯವೇ?'-ಮಂಜುನಾಥ್ ಪೂಜಾರಿ- Times Of Karkala

  'ಜೆಲ್ಲೆಯಲ್ಲಿ ನೈಟ್ ಕರ್ಫ್ಯೂ ಅಗತ್ಯವೇ?'-ಮಂಜುನಾಥ್ ಪೂಜಾರಿ- Times Of  Karkala 

ಹೆಬ್ರಿ:ಕೊರೊನ ಅಥವಾ ಒಮಿಕ್ರಾನ್ ತಡೆಗೆ ಸರಕಾರದ ಕಟ್ಟುನಿಟ್ಟಿನ ಕ್ರಮದ ಬಗ್ಗೆ ವಿರೋಧವಿಲ್ಲ ಆದರೆ ಎಲ್ಲಿ ಅಳವಡಿಸಬೇಕು ಎಂಬ  ನಿರ್ಧಾರ ಕೈಗೊಳ್ಳುವಲ್ಲಿ ಸರಕಾರ ವಿಫಲವಾಗಿದೆ . ಜಿಲ್ಲೆಯಲ್ಲಿ ಕೊರೊನ ಪ್ರಭಾವ ಅಷ್ಟಿಲ್ಲ ಆದರೂ ನೈಟ್ ಕರ್ಫ್ಯೂ ಯಾಕೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಪೂಜಾರಿ ಪ್ರಶ್ನಿಸಿದರು .

ಕೆಳೆದ ಬರಿ ಕೋವಿಡ್ ಸಂಬಂಧ ದಿನಕೊಂದು ನಿಯಮ ಜಾರಿಗೊಳಿಸಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದರು . ಇದರಿಂದ ಸರಕಾರ ಪಾಠ ಕಲಿತಿಲ್ಲ ಈಗ ಮತ್ತೊಮ್ಮೆ   ಒಮಿಕ್ರಾನ್ ಬಗ್ಗೆ ಜಾಗ್ರತಿಗೊಳ್ಳಲು ನೈಟ್ ಕರ್ಫ್ಯೂ ಘೋಷಣೆ ಮಾಡಿ ವ್ಯಾಪಾರ ವಹಿವಾಟು ,ವೈಯಕ್ತಿಕ , ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿಷೇದ ಅಥವಾ ನಿಯಮಾನುಸಾರ ಆಚರಿಸಲು ಅವಕಾಶ ಕೊಟ್ಟಿದೆ ಮಾಡುವೆ ರಾಜಕೀಯ ಕಾರ್ಯಕ್ರಮಗಳಲ್ಲಿ ಹಗಲಿಗೆ  ಸಾವಿರಾರು ಜನ  ಸೇರುತ್ತಾರೆ , ಆದರೆ ರಾತ್ರಿಯ ಕಾರ್ಯಕ್ರಮಗಳಿಗೆ ಯಾಕೆ ನಿಷೇಧ ಎಂದು ಪ್ರಶ್ನಿಸಿದರು.


ಕೊರೊನ ರೂಪಾಂತರಿ ವೈರಸ್ ರಾತ್ರಿ 10 ಗಂಟೆಯ ನಂತರವೇ ಹರಡುತ್ತದೆ ಎನ್ನುವುದಕ್ಕೆ ಸರಕಾರಕ್ಕೆ ವೈಜ್ಞಾನಿಕ ಮಾಹಿತಿ ಇದೆಯೇ ? ಈಗಾಗಲೇ ಸಣ್ಣ ವ್ಯಾಪಾರ ಉದ್ಯಮ , ಉದ್ಯೋಗ ಕೆಳೆದುಕೊಂಡು ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ .ಈಗಾಗಲೇ ಕೆಲವು ಕಾರ್ಯಕ್ರಮಗಳಿಗೆ ಪೂರ್ವ ತಯಾರಿಯಾಗಿದ್ದು ಇದನ್ನು ಮುಂದೂಡಿದರೆ ಅದರ ನಷ್ಟಗಳಿಗೆ ಹೊಣೆ ಯಾರು? ಸರಕಾರ ಮತ್ತು ಖಾಸಗಿ ಆಸ್ಪತ್ರೆಗಳು ತಜ್ಞ ವೈದ್ಯರು, ತಾಂತ್ರಿಕ ಸಿಬ್ಬಂದಿಯಿಲ್ಲದೆ ಹಾಗೂ ಆಸ್ಪತ್ರೆಗೆ ಹೋದಾಗ ಅವರನ್ನು ನಿಗಾ ವಹಿಸದ ಆಸ್ಪತ್ರೆಗಳನ್ನು ಗುರುತಿಸಿ ವರ್ದಿ ಮಾಡಬೇಕು . ಯಾವುದೇ ಕಾರಣಕ್ಕೂ ಚುನಾವಣೆ ಮುಂದೂಡದೆ ಅಭಿವೃದ್ಧಿ ದ್ರಷ್ಟಿಯಲ್ಲಿ ಚುನಾವಣೆ ನಡೆಯಬೇಕು. ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೇ ಕೃಷ್ಣ ಶೆಟ್ಟಿ ಹೇಳಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್ , ಸಂತೋಷ್ ನಾಯಕ್ , ವಿಶುಕುಮಾರ್ ಉಪಸ್ಥಿತರಿದ್ದರು. 


ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget