ಸಚಿವ ಸುನಿಲ್ ಕುಮಾರ್ ರವರಿಂದ ಏತ ನೀರಾವರಿ ಕಾಮಗಾರಿ ವೀಕ್ಷಣೆ - Times of karkala

ಸಚಿವ ಸುನಿಲ್ ಕುಮಾರ್ ರವರಿಂದ ಏತ ನೀರಾವರಿ ಕಾಮಗಾರಿ ವೀಕ್ಷಣೆ - Times of karkala 

ಜನವರಿ ಅಂತ್ಯದೊಳಗೆ ಪ್ರಾಯೋಗಿಕ ನೀರು ಸರಬರಾಜು 

ಅಜೆಕಾರು: ಸಚಿವ ಸುನಿಲ್ ಕುಮಾರ್ ರವರು ಬ್ರಹತ್ ನೀರಾವರಿ ಯೋಜನೆಯಾದ ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ವೀಕ್ಷಿಸಿದರು.

ಅಂತರ್ಜಲ ಹೆಚ್ಚಿಸುವ ಉದ್ದೇಶದೊಂದಿಗೆ ಬ್ರಹತ್ ನೀರಾವರಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು ಮರ್ಣೆ, ಹಿರ್ಗಾನ ಪಂಚಾಯತ್ ಹಾಗು ಕಾರ್ಕಳ ಪುರಸಭೆ ವ್ಯಾಪ್ತಿಯ ಹಳ್ಳ ಕಿಂಡಿ ಆಣೆಕಟ್ಟುಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ ಎಂದರು .

ಯೋಜನೆ ಹಾಗೂ ನೀರು ಪೂರೈಕೆ ಬಗ್ಗೆ ಸ್ಥಳೀಯರಿಗೆ ಸೂಕ್ತ ಮಾಹಿತಿ ನೀಡುವ ಸಲುವಾಗಿ ಜನವರಿ ಮೊದಲ ವಾರದಲ್ಲಿ ಸಭೆ ಕರೆಯುವಂತೆ ಅಧಿಕಾರಿಗಳಿಗೆ ತಿಳಿಸಿದರು .

ಯಾವುದೇ ಕೃಷಿ ಭೂಮಿ ಹಾಗೂ ವಾಸ್ತವ್ಯದ ಮನೆಗಳಿಗೆ ಈ ಯೋಜನೆ ಇಂದ ಹಾನಿಯಾಗುವುದಿಲ್ಲ ,ಕೆಲ ವ್ಯಕ್ತಿಗಳು ಯೋಜನೆಯ ಬಗ್ಗೆ ಅಪಪ್ರಚಾರ ಮಾಡಿ ಸ್ಥಳೀಯರಲ್ಲಿ   ಭಯದ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ . ಪ್ರಾಯೋಗಿಕವಾಗಿ ಈ ವರ್ಷ ನೀರು ಸರಬರಾಜು ಮಾಡಿ ಪರಿಶೀಲನೆ ನಡೆಸಲಾಗುವುದು. ಅಗತ್ಯ ಇರುವ ಕಡೆ ತಡೆ ಗೋಡೆ ನಿರ್ಮಿಸಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದರು.

ಜನವರಿ 5 ರೊಳಗೆ ಏತ ನೀರಾವರಿ ಯೋಜನೆಯ ಆಣೆಕಟ್ಟಿನ ಗೇಟ್ ಅಳವಡಿಸಿ  ನೀರು ಸಂಗ್ರಹ ಮಾಡಬೇಕು. ಜನವರಿ ಅಂತ್ಯದೊಳಗೆ  ನೀರು ಅಜೆಕಾರು ವ್ಯಾಪ್ತಿಗೆ ಸರಬರಾಜು ಮಾಡುವಂತೆ ಎಂಜಿನೀಯರ್ ಗೆ ಸೂಚಿಸಿದರು .

ಸುಮಾರು 1500  ಹೆಕ್ಟರ್ ಕೃಷಿ ಭೂಮಿಗೆ ನೀರು ಪೂರೈಕೆ ಮಾಡುವ ಯೋಜನೆ ಇದಾಗಿದ್ದು 450  ಎಚ್ ಪಿಯ 2 ಹಾಗು 900 ಎಚ್ ಪಿ ಸಾಮರ್ಥ್ಯದ ವಿದ್ಯುತ್ ಚಾಲಿತ ಪಂಪುಗಳಿಂದ ಹಳ್ಳ ಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಎಂಜಿನೀಯರ್ ಪ್ರಸನ್ನ ತಿಳಿಸಿದರು .

ಹೊಂಡಗಳನ್ನು ಮುಚ್ಚಲು ಸಚಿವರಿಂದ ವ್ಯವಸ್ಥಿತ ಕಾಮಗಾರಿಗೆ ಸೂಚನೆ:

ಯೋಜನೆಯ ಪೈಪ್ ಲೈನ್ ಕಾಮಗಾರಿ ವೇಳೆ  ರಸ್ತೆ ಅಂಚಿನಲ್ಲಿ ಹೊಂಡಗಳನ್ನು ನಿರ್ಮಿಸಲಾಗುತಿದ್ದೆ ಇದನ್ನು  ಕಾಮಗಾರಿ ಬಳಿಕ ಸೂಕ್ತ ರೀತಿಯಲ್ಲಿ  ಮುಚ್ಚದೇ ಇರುವುದರಿಂದ ಸಾರ್ವಜನಿಕರಿಗೆ ಸಂಕಷ್ಟ ಉಂಟಾಗುತ್ತದೆ ಎಂದು ನಂದಕುಮಾರ್ ಸಚಿವ ಗಮನಕ್ಕೆ ತಂದರು . ಕಾರ್ಕಳ  ಪುರಸಭೆ ಹಾಗೂ  ಪಂಚಾಯತ್ ಭಾಗಗಳಲ್ಲಿ ತ್ವರಿತವಾಗಿ  ಕಾಮಗಾರಿ ನಡೆಸಿ ವ್ಯವಸ್ಥಿತವಾಗಿ ಪೂರ್ಣಗೊಳಿಸುವಂತೆ ಸಚಿವರು ಗುತ್ತಿಗೆದಾರರಿಗೆ ಸೂಚಿಸಿದರು.  

ಈ ಸಮಯದಲ್ಲಿ ಮರ್ಣೆ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಪೂಜಾರಿ ,ಎಪಿಎಂಸಿ ಅಧ್ಯಕ್ಷ  ರತ್ನಾಕರ್ ಅಮೀನ್ , ತಾ.ಪಂ ನಿಕಟ ಪೂರ್ವ ಉಪಾಧ್ಯಕ್ಷ ಹರೀಶ್ ನಾಯಕ್ , ಸ್ಥಳೀಯ ಮುಖಂಡರಾದ ನಂದಕುಮಾರ್  ಹೆಗ್ಡೆ ,ಅರುಣ್ ಭಟ್ ಪ್ರಶಾಂತ್ ಶೆಟ್ಟಿ ಕುಂಟಿನಿ, ಭಾಸ್ಕರ್ ಶೆಟ್ಟಿ ಕುಂಟಿನಿ, ಗೌತಮ್ ನಾಯಕ್, ನವೀನ್ ನಾಯಕ್ , ಶಶಿಕಾಂತ್ ರೆಂಜಾಲ್, ವಿದ್ಯಾ ಪೈ , ಗುರುಪ್ರಸಾದ್ , ನಿತ್ಯಾನಂದ ಹಾಗೂ ಪಂ . ಸದಸ್ಯರು ಉಪಸ್ಥಿತರಿದ್ದರು. 

    

  ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget