ರಾಷ್ಟೀಯ ಶಿಕ್ಷಣ ನೀತಿ ಹಸರಿನಲ್ಲಿ ಬಹುತ್ವದ ಕೊಲೆ: ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ - Times Of Karkala

 ರಾಷ್ಟೀಯ ಶಿಕ್ಷಣ ನೀತಿ ಹಸರಿನಲ್ಲಿ ಬಹುತ್ವದ ಕೊಲೆ: ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ -  Times Of Karkala 

ಕಾರ್ಕಳ: ದೇಶದ ವಾಸ್ತವತೆಯ ಇತಿಹಾಸವನ್ನು ಅಳಿಸಿ ಹೊಸ ಇತಿಹಾಸವನ್ನು ಬರೆಯಲು ಹೊರಟ ಪ್ರಧಾನಿ ನರೇಂದ್ರ ಮೋದಿ ಸರ್ಕಾರ , ರಾಷ್ಟೀಯ ಶಿಕ್ಷಣ ನೀತಿಯ ಹೆಸರಿನಲ್ಲಿ ಈ ಮಣ್ಣಿನಲ್ಲಿ ವಿವಿಧತೆಯಲ್ಲಿ ಏಕತೆಯ ಪರಂಪರಾನುಗತ ಬಹುತ್ವದ ಕೊಲೆ ಮಾಡಲು ಹೊರಟಿದೆ . ದೇಶದ ಪ್ರಜಾತಂತ್ರ ವ್ಯವಸ್ಥೆ ಇದನ್ನು ಸಹಿಸಲಸಾಧ್ಯ ಎಂದು  ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ  ಪಾಲ್ ನಕ್ರೆ ಯವರು ಹೇಳಿದ್ದಾರೆ .


ಮೀಸಲಾತಿ ಮತ್ತು ಭೌಗೋಳಿಕ ಆದ್ಯತೆ ಬಗ್ಗೆ ನಿರ್ಣಾಯಕ ಪ್ರಸ್ತಾವನೆ ಇಲ್ಲದ ಈ ರಾಷ್ಟೀಯ ಶಿಕ್ಷಣ ನೀತಿಯ ಅಂತಿಮ ಗುರಿ ದೇಶವನ್ನು ಮನುವಾದಿ ಸಂಸ್ಕೃತಿಯ ಕೇಸರೀಕರಣದ ಹಿಡಿತಕ್ಕೊಳಪಡಿಸುವುದೇ ಆಗಿದೆ . ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಪರಿಣಾಮವಾಗಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಶೋಷಿತ ವರ್ಗ ಶಿಕ್ಷಣ ವಂಚಿತವಾಗಲಿದೆ  ಎಂದು ಹೇಳಿದ್ದಾರೆ.

ದೇಶದ ಬಹುಪಾಲು ರಾಷ್ಟೀಯ ಉದ್ದಿಮೆಗಳನ್ನು ಮಾರಾಟ ಮಾಡಿ ದೇಶದ ಆರ್ಥಿಕತೆಯ ಕೀಗೊಂಚಲನ್ನು ಖಾಸಗಿಯವರ ಕೈಗಿತ್ತ ಈ ಸರಕಾರ ಇದೀಗ ಎನ್ಇಪಿ ಹೆಸರಿನಲ್ಲಿ ಸಂಪೂರ್ಣ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣದ ಹುನ್ನಾರ ನಡೆಸುತ್ತಿದೆ. ಇದು ದೇಶವಾಸಿಗಳ ಸಂವಿಧಾನದತ್ತ ಶೈಕ್ಷಣಿಕ ಹಕ್ಕಿನ ಉಲ್ಲಂಘನೆಯಾಗಿದ್ದು ಕೇಂದ್ರ ಸರಕಾರ ಜನವಿರೋಧಿ ಶಿಕ್ಷಣ ನೀತಿಯನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ . 

ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget