ಸೂಡ:ಕೀಟ ನಾಶಕ ಸೇವಿಸಿ ಆತ್ಮಹತ್ಯೆ-Times of karkala

ಮಲ್ಲಿಗೆ ಗಿಡಕ್ಕೆ ಹಾಕುವ ಕೀಟನಾಶಕವನ್ನು ಸೇವಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕು ಸೂಡ ಗ್ರಾಮದಲ್ಲಿ ಸಂಭವಿಸಿದೆ.

ಸೂಡ ನಿವಾಸಿ ಜೋನ್ಸನ್ ಪಿರೇರಾ (23) ಆತ್ಮಹತ್ಯೆ ಮಾಡಿಕೊಂಡವರು.ಇವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಇದೇ ಕಾರಣಕ್ಕೆ ಜೀವನದಲ್ಲಿ ನೊಂದು ದಿನಾಂಕ 18  ರಂದು ರಾತ್ರಿ 11:00 ಗಂಟೆಗೆ ಮಲ್ಲಿಗೆ ಗಿಡಕ್ಕೆ ಹಾಕುವ ಕೀಟನಾಶಕವನ್ನು ಸೇವಿಸಿದ್ದಾರೆ.

ಕೂಡಲೇ ಇವರನ್ನು  ಉಡುಪಿ ಟಿ ಎಂ ಎ ಪೈ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ನಿನ್ನೆ ಮೃತಪಟ್ಟಿದ್ದಾರೆ.

























ಪೊಲೀಸ್ ವರದಿ:

ಕಾರ್ಕಳ : ಪಿರ್ಯಾದಿದಾರರಾದ ಜೆಸಿಂತಾ ಪಿರೇರಾ (58), ಗಂಡ: ಲೋರೆನ್ಸ್ ಪಿರೇರಾ , ವಾಸ: ಕುದ್ರೆಬೆಟ್ಟು ಮನೆ ಸೂಡ ಗ್ರಾಮ, ಕಾರ್ಕಳ ತಾಲೂಕು ಇವರ ಮಗ ಜೋನ್ಸನ್ ಪಿರೇರಾ (23) ಇವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಇದೇ ಕಾರಣಕ್ಕೆ ಜೀವನದಲ್ಲಿ ನೊಂದು ದಿನಾಂಕ 18/12/2021 ರಂದು ರಾತ್ರಿ 11:00 ಗಂಟೆಗೆ ಮಲ್ಲಿಗೆ ಗಿಡಕ್ಕೆ ಹಾಕುವ ಕೀಟನಾಶಕವನ್ನು ಸೇವಿಸಿದವರನ್ನು ಚಿಕಿತ್ಸೆ ಬಗ್ಗೆ ಉಡುಪಿ ಟಿ ಎಂ ಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಒಳರೋಗಿಯಾಗಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 25/12/2021 ರಂದು 13:30 ಗಂಟೆಗೆ ಮೃತ ಪಟ್ಟಿರುವುದಾಗಿದೆ ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 50/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget