ರಾಜ್ಯದಲ್ಲಿ ನೈಟ್ ಕರ್ಫ್ಯೂ ವಾಪಸ್? ಸಿ ಎಂ ಬೊಮ್ಮಾಯಿಯಿಂದ ಕೋವಿಡ್ ನಿಯಂತ್ರಣ ಕ್ರಮಗಳ ಮರುಪರಿಶೀಲನೆ ಸಾಧ್ಯತೆ-Times Of Karkala

ರಾಜ್ಯದಲ್ಲಿ ನೈಟ್ ಕರ್ಫ್ಯೂ ವಾಪಸ್? ಸಿ ಎಂ ಬೊಮ್ಮಾಯಿಯಿಂದ ಕೋವಿಡ್ ನಿಯಂತ್ರಣ ಕ್ರಮಗಳ ಮರುಪರಿಶೀಲನೆ ಸಾಧ್ಯತೆ-Times Of Karkala 

ಉದ್ಯಮ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿಯವರು ನೈಟ್ ಕರ್ಫ್ಯೂ ಸೇರಿದಂತೆ ರಾಜ್ಯ ಸರಕಾರ ಘೋಷಿಸಿದ ಕೋವಿಡ್-19 ನಿಯಂತ್ರಣ ಕ್ರಮಗಳನ್ನು ಮರು ಪರಿಶೀಲಿಸುವ ಸುಳಿವು ನೀಡಿದ್ದಾರೆ .

ಮತ್ತಷ್ಟು ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸುವ ನಿಯಂತ್ರಣ ಕ್ರಮಗಳ ಭಾಗವಾಗಿ ರಾಜ್ಯ ಸರಕಾರ 10  ದಿನಗಳವರೆಗೆ ಘೋಷಿಸಿದ  ನೈಟ್ ಕರ್ಫ್ಯೂ ಮಂಗಳವಾರ ರಾತ್ರಿಯಿಂದ  ರಾಜ್ಯದಂತ ಜಾರಿಗೆ ಬಂದಿದೆ.

ಇದು ಜನವರಿ 7 ರ ವರೆಗೆ ಪ್ರತಿದಿನ ರಾತ್ರಿ 10  ರಿಂದ ಬೆಳಿಗ್ಗೆ  5 ಗಂಟೆವರೆಗೆ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ಯಾವುದೇ ಚಟುವಟಿಕೆಗಳನ್ನು ಅನುಮತಿಸಲಾಗುವುದಿಲ್ಲ .

ನಿಯಂತ್ರಣ ಕ್ರಮಗಳ ಭಾಗವಾಗಿ ಸರಕಾರ ಎಲ್ಲ ಹೊಸ ವರ್ಷದ  ಪಾರ್ಟಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿಗಳನ್ನು ನಿಷೇಧಿಸಿದೆ. ಮತ್ತು ಹೋಟೆಲ್ ಗಳು  ಪಬ್ ಗಳು, ಕ್ಲಬ್ ಗಳು,ಮತ್ತು ರೆಸ್ಟೋರೆಂಟ್ ಗಳಂತಹ, ಸ್ಥಳಗಳು ಡಿಸೇಂಬರ್ 30 ರಿಂದ ಜನವರಿ 1ರ ವರೆಗೆ ತಮ್ಮ ಆಸನ ಸಾಮರ್ಥ್ಯದ ಶೇ.  50ರಷ್ಟು ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. 

ಫೆಡರೇಷನ್ ಆಪ್ ಕರ್ನಾಟಕ ಚೇಂಬರ್ಸ್ ಆಪ್ ಕಾಮರ್ಸ್ ಅಂಡ್ ಇಂಡಸ್ಟ್ರಿ , ಹೋಟೆಲ್ ಮತ್ತು ಪಬ್ ಮಾಲೀಕರು , ಆಟೋ ಮತ್ತು ಟ್ಯಾಕ್ಸಿ ಮಾಲೀಕರು ಸಹ ರಾತ್ರಿ ಕರ್ಫ್ಯೂ ಮತ್ತು ಹೊಸ ವರ್ಷದ ನಿರ್ಬಂಧಗಳನ್ನು ಸರಕಾರ ಮರುಪರಿಶೀಲಿಸುವಂತೆ ವಿನಂತಿಸಿದ್ದಾರೆ .

ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget