ಹಿರಿಯಂಗಡಿ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಅವಧೂತ ವಿನಯ್ ಗುರೂಜಿ ಭೇಟಿ-Times of karkala

 ಕಾರ್ಕಳ: ಶಿವಾಜಿ ಕೇವಲ ಮರಾಠಾ ದೊರೆ ಅಲ್ಲ. ಆತ ಹಿಂದವೀ ಸಾಮ್ರಾಜ್ಯವನ್ನು ಕಟ್ಟಿದವನು. ಅದಕ್ಕೆ ಅವನು ಆರಿಸಿಕೊಂಡ ದಾರಿ ಕ್ಷಾತ್ರವಾದದ್ದು. ಭಾರತದ ಅತೀ ದೊಡ್ಡ ಮತ್ತು ಮೊದಲ ಶಸ್ತ್ರಸಜ್ಜಿತ ಕ್ರಾಂತಿಗೆ ಕಾರಣ ಆದವನು ಶಿವಾಜಿ. ಆದ್ದರಿಂದ ಕ್ಷಾತ್ರ ತೇಜಸ್ಸು ಮರಾಠರಿಗೆ ರಕ್ತದಲ್ಲಿ ಬಂದಿದೆ. ಕಾರ್ಕಳದ ಕೇಂದ್ರ ಭಾಗದಲ್ಲಿ ಇರುವ ಮರಾಠಾ ಕ್ಷತ್ರಿಯರ ಶ್ರದ್ಧಾ ಕೇಂದ್ರವಾದ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯವು ಜೀರ್ಣೋದ್ಧಾರ ಮತ್ತು ಬ್ರಹ್ಮ ಕಲಶದ ಹೊಸ್ತಿಲಲ್ಲಿ ಬಂದು ನಿಂತಿರುವುದು ಅದೇ ಕ್ಷಾತ್ರ ತೇಜಸ್ಸಿನ ಶಕ್ತಿಯಿಂದ. ದೇವಳದ ಬ್ರಹ್ಮಕಲಶ ಮೊದಲಾದ ಧಾರ್ಮಿಕ ಕಾರ್ಯಕ್ರಮವು ಸಮಸ್ತ ಹಿಂದೂ ಸಮಾಜದ ಐಕ್ಯತೆಯ ಸಂಕೇತವಾಗಿ ಮೂಡಿ ಬರಲಿ. ನಾಡಿಗೆ ಮಾದರಿ ಆಗಲಿ ಎಂದು ಗೌರಿ ಗದ್ದೆ ಕ್ಷೇತ್ರದ ಅವಧೂತ ಶ್ರೀ ವಿನಯ ಗುರೂಜಿ ಅವರು ಹೇಳಿದರು.ಹಿರಿಯಂಗಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟಬಂದ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆಯುತ್ತಿರುವ ಒಂದು ತಿಂಗಳ ಭಜನಾ ಕಾರ್ಯಕ್ರಮವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡುತ್ತಿದ್ದರು.

ಕಾರ್ಕಳವು ಭಜನಾ ಸಂಕೀರ್ತನೆಗೆ ಹೆಸರಾದುದು ಇಲ್ಲಿಯ ಮಣ್ಣಿನಲ್ಲಿ ಆಧ್ಯಾತ್ಮ ಶಕ್ತಿ ಇದೆ ಅದು ಶತಮಾನಗಳಿಂದ ಹರಿದು ಬಂದಿದೆ. ಇಲ್ಲಿನ ತಾಯಂದಿರು ಸಂಜೆ ದೇವರ ಮುಂದೆ ದೀಪ ಹಚ್ಚಿ ಇಡೀ ಕುಟುಂಬದ ಜೊತೆ ಭಜನೆ ಹಾಡುವ

ಸಂಪ್ರದಾಯವನ್ನು ನಿರಂತರವಾಗಿ ಪಾಲಿಸಿಕೊಂಡು ಬಂದಿದ್ದಾರೆ. 

ಸ್ತ್ರೀ ಶಕ್ತಿ ಅಂದರೆ ತಾಯಿ ದುರ್ಗಾ ಶಕ್ತಿ. ಈ ಆಧ್ಯಾತ್ಮ ಶಕ್ತಿಯಿಂದ ಕಾರ್ಕಳವು ಇಂದು ದಕ್ಷಿಣದ ಪಂಡರಾಪುರವಾಗಿ ನನಗೆ ಗೋಚರಿಸುತ್ತಿದೆ ಎಂದು ಅವರು ಹೇಳಿದರು.

ದೇವಳದ ಆಡಳಿತ ಮೊಕ್ತೆಸರರಾದ ಗಿರೀಶ್ ರಾವ್ ದೇವಳದ ಪರವಾಗಿ ಸ್ವಾಮೀಜಿಯನ್ನು ಫಲ ಪುಷ್ಪ ನೀಡಿ ಕ್ಷೇತ್ರದ ಪರಿಚಯ ಮಾಡಿ ಗೌರವಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅದ್ಯಕ್ಷ ಶುಭದ ರಾವ್ ಜೀರ್ಣೋದ್ಧಾರ ಸಮಿತಿಯ ಅದ್ಯಕ್ಷ ಪ್ರಕಾಶ್ ಜಾದವ್, ಭಜರಂಗದಳ ರಾಜ್ಯ ಸಂಚಾಲಕ ಸುನೀಲ್ ಕೆ ಆರ್, ಅಶೋಕ್ ಪಾಲಡ್ಕ, ಮೊಕ್ತೇಸರುಗಳಾದ ಶೇಖರ್ ರಾವ್, ಗಣೇಶ್ ರಾವ್, ಸುದೀಂದ್ರ ರಾವ್ ರಾಮಚಂದ್ರರಾವ್, ಕಾರ್ಕದರ್ಶಿ ಪ್ರಸನ್ನರಾವ್, ಸಮಿತಿಯ‌ ಸದಸ್ಯರುಗಳು ಉಪಸ್ಥಿತಿತರಿದ್ದರು.
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget