ಶ್ರೀಕ್ಷೇತ್ರ ಹಿರಿಯಂಗಡಿ : ಭಜನಾ ಮಾಸದ ಉದ್ಘಾಟನಾ ಸಮಾರಂಭ-Times of karkala

 ಶ್ರೀಕ್ಷೇತ್ರ ಹಿರಿಯಂಗಡಿ : ಭಜನಾ ಮಾಸದ ಉದ್ಘಾಟನಾ ಸಮಾರಂಭ

ಅಷ್ಟಬಂದ ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿರುವ  ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಜನಾ ಮಾಸದ ಕಾರ್ಯಕ್ರಮವನ್ನು‌ ಉದ್ಯಮಿ ಶ್ರೀ ರವೀಂದ್ರ ಶೆಟ್ಟಿ ಬಜಗೋಳಿ ಉದ್ಘಾಟಿಸಿದರು.


ದೇವಳದ ಜೀರ್ಣೋದ್ಧಾರದ ಕಾಮಗಾರಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಭಜನಾ ಕಾರ್ಯಕ್ರಮಕ್ಕೆ ಶುಭ ಕೋರಿದರು.  

ಜನವರಿ 20 ರಿಂದ 25 ರವರೆಗೆ ನಡೆಯುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಒಂದು ತಿಂಗಳ ಕಾಲ‌ ಹಮ್ಮಿಕೊಂಡ  ಈ ಭಜನಾ ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕಿನ 30 ಭಜನಾ ಮಂಡಳಿಗಳು ಭಾಗವಹಿಸಲಿವೆ.  ದೇವಳಕ್ಕೆ ಧ್ವನಿ ವರ್ಧಕದ ಕೊಡುಗೆಯನ್ನು ನೀಡಿದ ಜಿಲ್ಲಾ ರಾಜೋತ್ಸವ ಪ್ರಶಸ್ತಿ ವಿಜೇತ ವೆಲೇರಿಯನ್ ಲೋಬೋ ಇವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮೊಕ್ತೇಸರ ಗಿರೀಶ್ ರಾವ್  ವಹಿಸಿದ್ದು ಮುಖ್ಯ ಅತಿಥಿಗಳಾಗಿ ಕಾರ್ಕಳ ತಾಲೂಕು ಭಜನಾ ಮಂಡಳಿಗಳ ಅಧ್ಯಕ್ಷ ಶ್ರೀಕಾಂತ್ ಪ್ರಭು,  ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶುಭದ ರಾವ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್ ಜಾದವ್,  ದೇವಳದ ಮೊಕ್ತೆಸರರು, ಸಮಿತಿಯ‌‌ ಸದಸ್ಯರು, ಸಮಾಜ ಬಂಧುಗಳು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget