ಕೊರಗರ ಮೇಲೆ ದಾಳಿ : ಎಸ್ಐ ಅಮಾನತು-Times Of Karkala

ಕೊರಗರ ಮೇಲೆ ದಾಳಿ : ಎಸ್ಐ ಅಮಾನತು-Times Of Karkala

ಕೋಟ ಕೊರಗರ ಮೇಲೆ ಹಲ್ಲೆಯ ಘಟನೆ ಸಂಬಂಧಿಸಿ ಕೋಟ ಠಾಣಾಧಿಕಾರಿ ಸಂತೋಷ್ ಬಿ.ಪಿ ಯವರನ್ನು ಅಮಾನತುಗೊಳಿಸಿ ಪಶ್ಚಿಮ ವಲಯ ಐಜಿಪಿಯವರು ಆದೇಶ ಹೊರಡಿಸಿದ್ದಾರೆ. ಅಲ್ಲದೆ ಉಳಿದ ಐದು ಸಿಬ್ಬಂದಿಗಳನ್ನು ಜಿಲ್ಲೆಯ ಬೇರೆ ಠಾಣೆಗಳಿಗೆ ವರ್ಗಾವಣೆಗೊಳಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ .ಸೋಮವಾರ ರಾತ್ರಿ ಕೊಟ್ಟತಟ್ಟು ಗ್ರಾಮದಲ್ಲಿ ಕೊರಗ ಸಮುದಾಯದ ಮನೆಯಲ್ಲಿ ನಡೆದ ಮೆಹೆಂದಿ ಕಾರ್ಯಕ್ರಮದಲ್ಲಿ ಡಿಜೆ ಹಾಕಿದ್ದಾರೆ.ಎಂಬ ಸಾರ್ವಜನಿಕ ದೂರಿನ ಅನ್ವಯ ತೆರಳಿದ್ದ  ಪಿ ಎಸ್ ಐ ಮತ್ತು ಅವರ ತಂಡ ಅಲ್ಲಿದ್ದ ಜನರ ಮೇಲೆ ಲಾಠಿ ಪ್ರಹಾರ ನಡೆಸಿದ್ದು ಘಟನೆಯಲ್ಲಿ ಮದುಮಗ ಸೇರಿ ಹಲವರು ಗಾಯಗೊಂಡಿದ್ದರು.


ಪೋಲೀಸರ ದೌರ್ಜನ್ಯ ಕುರಿತು ರಾಜ್ಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು . ಈ ಸಂಬಂಧ ಡಿ ವೈ ಎಸ್ ಪಿ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಅವರು ತನಿಖೆ ಆದೇಶ ನೀಡಿದ್ದು ಅದರ ಬೆನ್ನೆಲ್ಲೇ ದಕ್ಷಿಣ ವಲಯ ಐಜಿಪಿ ಜ್ಯೋತಿ ಪ್ರಕಾಶ್  ರೈ ಅವರು ಎಸ್ ಐ ಅವರನ್ನು ಅಮಾನತು ಮಾಡಿ ಉಳಿದ  ಐವರು ಪೊಲೀಸರಿಗೆ ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡುವಂತೆ ಆದೇಶ ನೀಡಿದ್ದಾರೆ.

ಜಾಹೀರಾತು



























Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget