ಸಚಿವರಿಂದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಾಮಗಾರಿ ವೀಕ್ಷಣೆ- Times Of Karkala

ಸಚಿವರಿಂದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಾಮಗಾರಿ ವೀಕ್ಷಣೆ- Times  Of Karkala

ಕಾರ್ಕಳ: ಸರಕಾರಿ ಕೈಗಾರಿಕೆ ತರಬೇತಿ ಕೇಂದ್ರದ ಕಾಮಗಾರಿ ವೀಕ್ಷಣೆ ಮಾಡಿದ ಸಚಿವ ವಿ.ಸುನಿಲ್ ಕುಮಾರ್ ರವರು ಯುವಕರಿಗೆ ಉದ್ಯೋಗ ಅವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಟಾಟಾ ಟೆಕ್ನಲಾಜಿಸ್ ಲಿ. ಸಹಭಾಗಿತ್ವದಲ್ಲಿ ತಾಲೂಕಿನಲ್ಲಿ  ಸರಕಾರಿ ಕೈಗಾರಿಕೆ  ತರಬೇತಿ ಸಂಸ್ಥೆ ಹೊಂದುತ್ತಿದ್ದು ಕಟ್ಟಡ ನಿರ್ಮಾಣ ಪೂರ್ಣವಾಗಿದೆ . ಇನ್ಸ್ಟಾಲೇಷನ್ ಸಹಿತ ಬಾಕಿ ಉಳಿದ ಕೆಲಸಗಳನ್ನು ಅಂತಿಮಗೊಳಿಸಿ ಶೀಘ್ರವೇ ತರಗತಿ ಆರಂಭಿಸಲು ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.

ಕಾರ್ಕಳ ಬಿಬಿಎಂ ಕಾಲೇಜು ಹಿಂಭಾಗದ ಪಾಲಿಟೆಕ್ನಿಕ್ ಕಾಲೇಜು ಬಳಿ ಟಾಟಾ ಟೆಕ್ನೋಲಜಿ ಸಹಭಾಗಿತ್ವದಲ್ಲಿ 32 ಕೋ.ರು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸರಕಾರಿ ಕೈಗಾರಿಕಾ ತರಬೇತಿ ಕಟ್ಟಡದ ಉನ್ನತೀಕರಿಸಿದ ಕಾಮಗಾರಿಗಳ ವೀಕ್ಷಣೆ ನಡೆಸಿ ಸಚಿವರು ಮಾತನಾಡಿದರು .

ಗ್ರಾಮೀಣ ಯುವಕ ಯುವತಿಯರಿಗೆ  ಉದ್ಯೋಗ  ಕಲ್ಪಿಸುವ ದ್ರಷ್ಟಿಯಿಂದ ಕೈಗಾರಿಕಾ ಸಂಸ್ಥೆ ಸಹಕಾರಿಯಾಗಿದ್ದು ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ ಸಹಿತ ಕೈಗಾರಿಕೆ ಸಂಬಂದಿಸಿದ ತರಬೇತಿ ಕೇಂದ್ರದಲ್ಲಿ ಸಿಗಲಿದೆ. ಕೇಂದ್ರಕ್ಕೆ ಅವಶ್ಯಕವಿರುವ ಶಿಕ್ಷಕರ  ನೇಮಕಾತಿ ಬಗ್ಗೆ ಗಮನಹರಿಸಲಾಗುವುದು ಎಂದರು . ಕೇಂದ್ರದ ಇನ್ಸ್ಟಾಲೇಷನ್ ಕೆಲಸಗಳನ್ನು ಸಾಧ್ಯವಾದಷ್ಟು ಬೇಗನೆ ಪೂರ್ಣಗೊಳಿಸುವಂತೆ ಸ್ಥಳದಲ್ಲಿದ್ದ ತಾಂತ್ರಿಕ ಅಧಿಕಾರಿಗಳಿಗೆ ಸೂಚಿಸಿದರು .

ಈ  ಸಮಯದಲ್ಲಿ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್,ಟಾಟಾ ಟೆಕ್ನಲಾಜಿ ಲಿ. ನ ವೆಂಕಟರಮಣ ಬಲ್ಲಾಳ್ , ಕೈಗಾರಿಕಾ ಸಂಸ್ಥೆಯ ಪ್ರಾಧ್ಯಾಪಕರಾದ ಸಂತೋಷ್ ನಾಯಕ್, ಸುರೇಶ ಭಟ್,ನಿರ್ಮಿತ ಕೇಂದ್ರದ ಯೋಜನಾ ಅಭಿಯಂತ ಪವನ್ ಪೆರುಮುಂಡ , ಬಿಜೆಪಿ ಮಂಡಲ  ರವೀಂದ್ರ ಮೊಯಿಲಿ, ಬಿಜಿಪಿ ಪ್ರದಾನ ಕಾರ್ಯದರ್ಶಿ ನವೀನ್  ನಾಯಕ್,ಪುರಸಭೆ ಸದಸ್ಯರಾದ ಶೋಭಾ ದೇವಾಡಿಗ , ಪ್ರಸನ್ನ ,ರೆಹಮತ್ , ಅವಿನಾಶ್ ಶೆಟ್ಟಿ, ನಿರಂಜನ್ ಜೈನ,ಮೊದಲಾದವರು ಉಪಸ್ಥಿತರಿದ್ದರು .


                                                                        ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget