ಕಾರ್ಕಳ:ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ,ಸಾವಿನ ಸುತ್ತ ಅನುಮಾನದ ಹುತ್ತ!ಫ್ಲಾಟ್ ನವರು ಹೇಳಿದ್ದೇನು?-Times of karkala

 

ಮಹಿಳೆಯೋರ್ವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಕುಂಟಲ್ಪಾಡಿಯ ಬಳಿ ನಡೆದಿದೆ. ಗೀತಾ(68 ವರ್ಷ)  ಮೃತಪಟ್ಟವರು.

ಕುಂಟಲ್ಪಾಡಿಯ ಅತ್ರಿ ಅಪಾರ್ಟ್ಮೆಂಟ್ ನಲ್ಲಿ ಈ ಘಟನೆ ನಡೆದಿದೆ.ಅಪಾರ್ಟ್ಮೆಂಟ್ ನಲ್ಲಿ ಸುರೇಂದ್ರ ಕುಡ್ವ(70 ವರ್ಷ)  ಗೀತಾ(68 ವರ್ಷ) ಇಬ್ಬರೇ ವಾಸವಾಗಿದ್ದರು.ಗೀತಾರವರ  ಮಗಳಾದ  ಧನಶ್ರೀ ಕುಡ್ವರವರಿಗೆ ಕರೆ ಮಾಡಿದ ಪಕ್ಕದ ಫ್ಲಾಟ್ ನವರು ಗೀತರ ಮೈಮೇಲೆ  ಸುಟ್ಟ ಗಾಯಗಳಾದ ಕುರಿತು ಮಾಹಿತಿ ನೀಡಿದ್ದಾರೆ.ಕೂಡಲೇ ಮಗಳು ತಾಯಿಯನ್ನು ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದಾರೆ.

ಕಾರ್ಕಳ  ಆಸ್ಪತ್ರೆಗೆ ಬಂದು ತಾಯಿಯಲ್ಲಿ ವಿಚಾರಿಸಿದಾಗ ತಾನೇ ಬೆಂಕಿ ಹಾಕಿಕೊಂಡಿದ್ದಾಗಿ ತಿಳಿಸಿದರು. ಇಡೀ ದೇಹದಲ್ಲಿ ಸುಟ್ಟ ಗಾಯಗಳಾಗಿದ್ದು ಕಾರ್ಕಳ ಆಸ್ಪತ್ರೆಯ  ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದು,ಧನಶ್ರೀರವರು  ತಾಯಿಯನ್ನು ಮಣಿಪಾಲಕ್ಕೆ ಅಂಬುಲೆನ್ಸ್ ನಲ್ಲಿ  ಹೆಚ್ಚಿನ ಚಿಕಿತ್ಸೆಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಇಂದು  (ಡಿ.07) ಬೆಳಿಗ್ಗೆ ನಿಧನ ಹೊಂದಿದ್ದಾರೆ.

ಫ್ಲಾಟ್ ನವರು ಹೇಳಿದ್ದೇನು?

ಆದರೆ ಇದೀಗ ಹತ್ತಿರದ ಫ್ಲಾಟ್ ನವರು ಧನಶ್ರೀರವರಿಗೆ ನೀಡಿದ್ದ ಮಾಹಿತಿ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.ಕಣ್ಣೆದುರೇ   ಸುಡುತ್ತಾ ಇರುವ ತನ್ನ ತಾಯಿಯನ್ನು ನೋಡಿಯೂ ತಂದೆ ಮಾತ್ರ ಏನೂ ಮಾಡದೇ ಎದುರು ನಿಂತಿದ್ದರು  ಎಂದು ಪಕ್ಕದ ಫ್ಲಾಟ್‌ನ ಮನೆಯವರು ತಿಳಿಸಿದ್ದಾರೆ.ಗೀತಾರವರಿಗೆ ಮಾನಸಿಕ ಕಿರುಕುಳ ನೀಡಿ ಆತ್ಮಹತ್ಯೆ ಮಾಡಲು ಪ್ರೇರೇಪಿಸಲಾಗಿದೆಯೇ ಎಂಬ ಸಂಶಯ ವ್ಯಕ್ತವಾಗಿದೆ.

ಆದ್ದರಿಂದ ದೂರುದಾರಳಾದ ಮಗಳು ತಂದೆ ಸೇರಿದಂತೆ  ಒಟ್ಟು ಐವರ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ.ಕಾರ್ಕಳ ನಗರ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸ್ ವರದಿ:

  • ಕಾರ್ಕಳ: ಫಿರ್ಯಾದಿ ಧನಶ್ರೀ ಕುಡ್ವ, ಪ್ರಾಯ: 28 ವರ್ಷ, ಗಂಡ: ಧೀಮಂತ್ ಭಂಢಾರ್ ಕರ್, ವಾಸ: ಶ್ರೀ ಗುರುಕೃಪಾ ಹೌಸ್, ಅರಮನೆ ಬಾಗಿಲು, ಕೊಂಡೆ ಸ್ಟ್ರೀಟ್, ಮೂಡುಬಿದ್ರೆಯಲ್ಲಿ ಗಂಡನ ಮನೆಯಲ್ಲಿ ವಾಸವಾಗಿದ್ದು ಜ್ಞಾನಸುಧಾ ಪಿಯು ಕಾಲೇಜಿನಲ್ಲಿ  ಅಧ್ಯಾಪಕಿಯಾಗಿ ಕೆಲಸ ಮಾಡಿಕೊಂಡಿರುತ್ತಾರೆ., ಅವರ ತಂದೆ ಸುರೇಂದ್ರ ಕುಡ್ವ(70 ವರ್ಷ)  ಮತ್ತು ತಾಯಿ ಗೀತಾ(68 ವರ್ಷ) ರವರು  ಕಾರ್ಕಳ ಕುಂಟಲ್ಪಾಡಿಯ ಅತ್ರಿ ಅಪಾರ್ಟ್ ಮೆಂಟ್‌ನಲ್ಲಿ ಇಬ್ಬರೇ  ವಾಸವಾಗಿದ್ದರು. ದಿನಾಂಕ 06-12-2021 ರಂದು ಹತ್ತಿರದ ಫ್ಲಾಟ್‌ನವರು ಪಿರ್ಯಾದಿಗೆ ಫೋನ್ ಮೂಲಕ ತಾಯಿಗೆ ಬೆಂಕಿಯಿಂದ ಸುಟ್ಟ ಗಾಯಗಳಾಗಿರುವುದಾಗಿ ತಿಳಿಸಿದರು. ಕೂಡಲೇ ಅವರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು ಫಿರ್ಯಾದುದಾರರು ಕಾರ್ಕಳ  ಆಸ್ಪತ್ರೆಗೆ ಬಂದು ತಾಯಿಯಲ್ಲಿ ವಿಚಾರಿಸಿದಾಗ ತಾನೇ ಹಾಕಿಕೊಂಡಿದ್ದಾಗಿ ತಿಳಿಸಿದರು ಇಡೀ ದೇಹದಲ್ಲಿ ಸುಟ್ಟ ಗಾಯಗಳಾಗಿದ್ದು ಕಾರ್ಕಳ ಆಸ್ಪತ್ರೆಯ  ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದು, ಫಿರ್ಯಾದುದಾರರು ತಾಯಿಯನ್ನು ಮಣಿಪಾಲಕ್ಕೆ ಅಂಬುಲೆನ್ಸ್ ನಲ್ಲಿ  ಹೆಚ್ಚಿನ ಚಿಕಿತ್ಸೆಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿನಾಂಕ 07-12-2021 ರಂದು ಬೆಳಿಗ್ಗೆ 05-30 ಗಂಟೆಗೆ ಮೃತಪಟ್ಟಿರುತ್ತಾರೆ.  ತನ್ನ ತಂದೆ ಸುಡುತ್ತಾ ಇರುವ ತನ್ನ ತಾಯಿಯನ್ನು ನೋಡಿಯೂ ಏನೂ ಮಾಡದೇ ಎದುರು ನಿಂತಿರುತ್ತಾರೆ ಎಂದು ಫ್ಲಾಟ್‌ನ ಮನೆಯವರು ಹೇಳಿರುವುದು ಅನುಮಾನ. ಫ್ಲಾಟ್‌ನ ವಿಚಾರದ ಬಗ್ಗೆ ತಂದೆ ಹಾಗೂ ಅವರ ತಮ್ಮಂದಿರ ಕೇಸ್ ನೋಟೀಸ್ ದಾಖಲಾಗಿರುತ್ತದೆ. ಆದ್ದರಿಂದ ತಾಯಿಗೆ ಮಾನಸಿಕ ಕಿರುಕುಳ ಕೊಟ್ಟು ಈ  ರೀತಿ ಮಾಡಿಕೊಳ್ಳುವ ಹಾಗೂ ತಂದೆ ಹಾಗೂ  ಮನೆಯವರು ಪ್ರೇರೆಪಿಸಿರುವುದು  ಸತ್ಯ ಆದ್ದರಿಂದ ತಂದೆ ಸುರೇಂದ್ರ ಕುಡ್ವ,ಮತ್ತು ಅವರ  ತಮ್ಮಂದಿರಾದ ನಿತ್ಯಾನಂದ ಕುಡ್ವ, ವಿಜೇಂದ್ರ ಕುಡ್ವ, ಮುಕುಂದ ಕುಡ್ವ,  ಹಾಗೂ ತಂಗಿ ಪುಷ್ಪಲತಾ ಮೇಲೆ ಅನುಮಾನ ಇರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌ ಸಂಖ್ಯೆ 46/2021 ಕಲಂ 174C CRPC ಯಂತೆ  ಪ್ರಕರಣ ದಾಖಲಿಸಲಾಗಿದೆ.
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget