ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಷನ್ ಕಾರ್ಕಳ ವಲಯದ ಪದಪ್ರದಾನ ಕಾರ್ಯಕ್ರಮ-Times Of Karkala

 ಫೋಟೋಗ್ರಾಪರ್ಸ್  ಅಸೋಸಿಯೇಷನ್  : ಪದಪ್ರದಾನ Times Of Karkala 

ಕಾರ್ಕಳ : ನಗರದ ಹೋಟೆಲ್ ಪ್ರಕಾಶ್ ಸಂಭಾಂಗಣದಲ್ಲಿ ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಷನ್ ಉಡುಪಿ .ದ ಕ  ಜಿಲ್ಲೆ ಕಾರ್ಕಳ ವಲಯದ ಪದಪ್ರದಾನ ಕಾರ್ಯಕ್ರಮ ನಡೆಯಿತು.

ಶ್ರೀ ರಕ್ತೇಶ್ವರಿ  ದೇವಸ್ಥಾನ ಕುಂಟಾಡಿ ಆಡಳಿತ ಮೋಕ್ತಸರ್ ಶ್ರೀ ಕೃಷ್ಣ ರಾಜ ರೈ ದೀಪ  ಬೆಳಗಿ ಉದ್ಘಾಟಿಸಿ, ಫೋಟೋಗ್ರಾಪರ್ಸ್ ಸಂಘಟನೆಯ ಸಾಮಾಜಿಕ ಕಾರ್ಯ ಚಟುವಟಿಕೆ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿ ಶುಭ ಹಾರೈಸಿದರು . 

ದ.ಕ - ಉಡುಪಿ ಜೆಲ್ಲೆಯ ಎಸ್.ಕೆ..ಪಿ.ಎ ಅಧ್ಯಕ್ಷ ಆನಂದ್ ಎನ್ .ಅಧ್ಯಕ್ಷತೆ ವಹಿಸಿ ಸಮಾಜಮುಖಿ ಕೆಲಸಗಳೊಂದಿಗೆ ತನ್ನ ಸದಸ್ಯರಿಗೆ ರೆಡ್ ಕ್ರಾಸ್ ಸೊಸೈಟಿ ಯೊಂದಿಗೆ ವೈದ್ಯಕೀಯ ತಪಾಸಣೆ ಶಿಬಿರವನ್ನು ನಡೆಸಿರುವುದು  ಅತ್ಯುತ್ತಮ ಕಾರ್ಯಕ್ರಮ ಎಂದರು .

 ಗ್ರಾ .ಪಂ. ಅಧ್ಯಕ್ಷ ಸಂದೀಪ್ ಅಮೀನ್ ಮುದ್ದು ಮಕ್ಕಳ ಛಾಯಾಚಿತ್ರ ಪದರ್ಶನ  ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎಸ್ .ಕೆ. ಪಿ. ಎ . ವಿವಿದೋದ್ದೇಶ ಸ.ಸಂ. ನಿಯಮಿತ ಅಧ್ಯಕ್ಷ ವಾಸುದೇವ್ ರಾವ್ ,  ಎಸ್ .ಕೆ. ಪಿ. ಎ  ದ.ಕ ಮತ್ತು  ಉಡುಪಿ ಜೆಲ್ಲೆಯ ಉಪಾಧ್ಯಕ್ಷ ಪದ್ಯ ಪ್ರಸಾದ್ ಎನ್ . ಜಿಲ್ಲಾ ಪಂ . ಕಾರ್ಯದರ್ಶಿ ನಿತಿನ್ ಬೆಳುವಾಯಿ , ವಲಯ ನಿಕಟಪೂರ್ವ ಅಧ್ಯಕ್ಷ ಭಾಸ್ಕರ್ ಕುಲಾಲ , ನಿಕಟಪೂರ್ವ ಕಾರ್ಯದರ್ಶಿ ಸೀತಾರಾಮ್ , ಕೋಶಾಧಿಕಾರಿ  ಯೋಗೀಶ್ ಕೋಟ್ಯಾನ್ , ವಲಯ ಗೌರವಾಧ್ಯಕ್ಷ ಮಹೇಂದ್ರ ಶೆಟ್ಟಿ , ಪ್ರಸ್ತಾವಗೈದರು. ವಲಯ ಅಧ್ಯಕ್ಷ  ಈಶ್ವರ್ ಕುಂಟಾಡಿ ಸ್ವಾಗತಿಸಿ ರಾಘವೇಂದ್ರ ಶೇರಿಗಾರ್ ನಿರೂಪಿಸಿ ಕಾರ್ಯದರ್ಶಿ ಟಿ. ವಿ. ಸುನಿಲ್ ಕುಮಾರ್ ವಂದಿಸಿದರು .

ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget