ಪುರಾತನ ಶ್ರೀ ಮಾರಿಯಮ್ಮ ದೇಗುಲ ಜೀರ್ಣೋದ್ಧಾರಕ್ಕೆ ನಿರ್ಧಾರ:ಜ. 10 ,11 ರಂದು ಅಷ್ಟಮಂಗಲ ಪ್ರಶ್ನೆ ಚಿಂತನೆ-Times Of Karkala

ಪುರಾತನ ಶ್ರೀ ಮಾರಿಯಮ್ಮ ದೇಗುಲ ಜೀರ್ಣೋದ್ಧಾರಕ್ಕೆ ನಿರ್ಧಾರ:ಜ. 10 ,11 ರಂದು ಅಷ್ಟಮಂಗಲ ಪ್ರಶ್ನೆ ಚಿಂತನೆ-Times Of Karkala


ಕಾರ್ಕಳ: ಕಾರ್ಕಳ ಪೇಟೆಯಲ್ಲಿರುವ ತಾಲೂಕಿಗೆ ಸಂಬಂದಿಸಿದ ಪುರಾತನ ಪ್ರಸಿದ್ಧ ಶ್ರೀ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಂಕಲ್ಪಿಸಿದ್ದು ದೇವಿಯ ಅಪ್ಪಣೆ ದೊರೆತಿದೆ. ಅದರಂತೆ ಜನವರಿ 10  ಮತ್ತು 11 ಸಾನಿದ್ಯದಲ್ಲಿ ಅಷ್ಟಮಂಗಲ ಪ್ರಶ್ನೆ ಚಿಂತನೆ ಇರಿಸಲಾಗಿದೆ ಎಂದು ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಬಿ. ಗೋಪಾಲಕೃಷ್ಣ ರಾವ್ ತಿಳಿಸಿದರು.


800  ವರ್ಷಗಳ  ಪುರಾತನ ದೇವಸ್ಥಾನ ಇದಾಗಿದ್ದು ಅನುವಂಶಿಕ ಆಡಳಿತ ಮೊಕ್ತೇಸರರಿಂದ ಆಡಳಿತ ನಡೆಸಿಕೊಂಡು ಬಂದಿದೆ.ಇದು 9  ಮಾಗಣೆ ದೇವಸ್ಥಾನವಾಗಿದೆ ಎಂದು  ಆಡಳಿತ ಮೊಕ್ತೇಸರ ಕೆ.ಬಿ. ಗೋಪಾಲಕೃಷ್ಣ ರಾವ್ ತಿಳಿಸಿದರು.

ಜೀರ್ಣೋದ್ದಾರ ಸಮಿತಿಯ ನವೀನ್ ದೇವಾಡಿಗ ಮಾತನಾಡಿ ಇಂಧನ ಹಾಗೂ  ಕನ್ನಡ ಸಂಸ್ಕೃತಿ ಸಚಿವರು ಸಹಿತ ಆಡಳಿತ ಮೊಕ್ತೇಸರ ಕೆ.ಬಿ. ಗೋಪಾಲಕೃಷ್ಣ ರಾವ್ ,ಮೊಕ್ತೇಸರ ಕೆ.ಜೆ. ರಾಘವೇಂದ್ರ ರಾವ್ , ಪಿಡಬ್ಲು ಡಿ ಇಲಾಖೆಯ ಎ ಇ ಸೊಮಶೇಖರ, ಕೆ.ಬಿ. ಗುರುಪ್ರಸಾದ , ವಿಜಯ್ ಶೆಟ್ಟಿ, ಗಣೇಶ್ ಕಾಮತ್, ಜಗದೀಶ್ ಮಲ್ಯ , ನರಸಿಂಹ ಪೈ ಪಾಲಡ್ಕ, ನವೀನ್  ನಾಯಕ , ನವೀನ್ ದೇವಾಡಿಗ , ಭಾಸ್ಕರ್ ಕುಲಾಲ, ಹರೀಶ್ ಅಮೀನ್, ಪ್ರಶಾಂತ್ ರಾವ್, ಒಳಗೊಂಡ ಜೀರ್ಣೋದ್ದಾರ ಸಮಿತಿ ಸಮಸ್ತ ಭಕ್ತರ ಸಹಕಾರದಿಂದ ದೇಗುಲ ಅಭಿವೃದ್ಧಿಗೆ ನಿರ್ಧರಿಸಿದೆ ಎಂದು ತಿಳಿಸಿದರು

ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ಮುಂದಿನ ನಿರ್ಧಾರಗಳನ್ನು  ತಗೆದುಕೊಂಡು ಅಭಿವೃದ್ಧಿ ,ಮಾಡಲಾಗುವುದು  ಎಂದು ಹೇಳಿದರು. 

ಈ ಸಂದರ್ಭದಲ್ಲಿ ಕೆ.ಬಿ. ಗುರುಪ್ರಸಾದ್ ,ವಿಜಯ್ ಶೆಟ್ಟಿ, ನವೀನ್ ನಾಯಕ, ಭಾಸ್ಕರ್ ಕುಲಾಲ್ , ಹರೀಶ್ ಅಮೀನ್ ಪ್ರಶಾಂತ್ ರಾವ್, ಸುರೇಶ ಹವಾಲ್ದಾರ್ ಉಪಸ್ಥಿತರಿದ್ದರು.

                                                                         ಜಾಹೀರಾತು 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget