ರಸ್ತೆಯಲ್ಲಿ ಸಿಕ್ಕ 10 ಸಾವಿರ ರೂ. ಅನ್ನು ಮಾಲೀಕರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದ ಹೈಸ್ಕೂಲ್ ವಿದ್ಯಾರ್ಥಿನಿಯರು-Times of karkala

ರಸ್ತೆಯಲ್ಲಿ ಸಿಕ್ಕ 10 ಸಾವಿರ ರೂ. ಅನ್ನು ಮಾಲೀಕರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದ ಹೈಸ್ಕೂಲ್ ವಿದ್ಯಾರ್ಥಿನಿಯರು

ಹೈಸ್ಕೂಲ್ ವಿದ್ಯಾರ್ಥಿನಿಯರು ಶಾಲೆಯಿಂದ ಮನೆಗೆ ತೆರಳುತ್ತಿದ್ದಾಗ ರಸ್ತೆಯಲ್ಲಿ ಸಿಕ್ಕ 10 ಸಾವಿರ ರೂ. ಅನ್ನು ಮಾಲೀಕರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದಿರುವ ಘಟನೆ ಕುಂದಾಪುರ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ನಡೆದಿದೆ.


ಕೋಣಿ ಪ್ರೌಢ ಶಾಲಾ ನಾಲ್ಕು ವಿದ್ಯಾರ್ಥಿನಿಳಾದ ಶ್ರಾವ್ಯಾ, ಐಶ್ವರ್ಯಾ.ಜೆ, ಪ್ರಸ್ತುತಿ ಮತ್ತು ವೈಷ್ಣವಿ ಪ್ರಾಮಾಣಿಕತೆ ಮೆರೆದಿದ್ದಾರೆ. ಅವರು ಶಾಲೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ರಸ್ತೆಯಲ್ಲಿ ಪ್ಲಾಸ್ಟಿಕ್ ನಲ್ಲಿ ಸುತ್ತಿದ ಪೊಟ್ಟಣ ಸಿಕ್ಕಿದೆ. ಅದನ್ನು ಈ ವಿದ್ಯಾರ್ಥಿನಿಯರು ತೆಗೆದು ನೋಡಿದಾಗ 10 ಸಾವಿರ ರೂಪಾಯಿ ಇರುವುದು ಕಂಡುಬಂದಿದೆ. ತಕ್ಷಣ ವಿದ್ಯಾರ್ಥಿನಿಯರು ಸಿಕ್ಕಿದ ಹತ್ತು ಸಾವಿರ ರೂ. ಅನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಕೊಟ್ಟಿದ್ದಾರೆ.

ಮುಖ್ಯೋಪಾಧ್ಯಯರು ವಾಟ್ಸಪ್ ಮೂಲಕ ಸಾರ್ವಜನಿಕ ಸಂದೇಶವನ್ನು ಹರಿಬಿಟ್ಟಿದ್ದಾರೆ. ನಂತರ ಈ ಹಣ ಅದೇ ಊರಿನ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವ ಸುಲೇಖಾ ಅವರದ್ದು ಎಂಬುದು ಗಮನಕ್ಕೆ ಬಂದಿದೆ. ಪರಿಣಾಮ ಇಂದು ಬೆಳಗ್ಗೆ ಶಾಲೆಯ ಅಸಂಬ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಾಮಾಣಿಕ ಮಕ್ಕಳಾದ ಶ್ರಾವ್ಯಾ, ಐಶ್ವರ್ಯಾ.ಜೆ, ಪ್ರಸ್ತುತಿ ಮತ್ತು ವೈಷ್ಣವಿ ಇವರು ಹಣವನ್ನು ಕಳೆದುಕೊಂಡ ಸುಲೇಖಾ ಅವರಿಗೆ ಹಸ್ತಾಂತರಿಸಿದರು.

ಸುಲೇಖಾ ಶಾಲೆಯ ಎಲ್ಲ ವಿದ್ಯಾರ್ಥಿಗಳಗೆ ಸಿಹಿ ವಿತರಿಸಿ ಧನ್ಯವಾದ ಸಮರ್ಪಿಸಿದರು. ಮಕ್ಕಳ ಈ ಪ್ರಾಮಾಣಿಕತನ ಎಲ್ಲರಿಗೂ ಮಾದರಿಯಾಗಬೇಕು ಎಂದು ಆಶಿಸಿದರು.

                                                                         

ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget