ಸಚಿವ ಸುನಿಲ್‌ ಕುಮಾರ್‌ ರವರಿಂದ ಹೆಬ್ರಿ ತಾಲ್ಲೂಕು ಕಚೇರಿ ನೂತನ ಕಟ್ಟಡ " ಮಿನಿ ವಿಧಾನ ಸೌಧ "ವೀಕ್ಷಣೆ - 2 .50 ಕೋಟಿ ಹೆಚ್ಚುವರಿ ಅನುದಾನದ ವ್ಯವಸ್ಥೆ. -Times Of Karkala

ಸಚಿವ ಸುನಿಲ್‌ ಕುಮಾರ್‌ ರವರಿಂದ ಹೆಬ್ರಿ ತಾಲ್ಲೂಕು ಕಚೇರಿ ನೂತನ ಕಟ್ಟಡ " ಮಿನಿ ವಿಧಾನ ಸೌಧ "ವೀಕ್ಷಣೆ -2 .50  ಕೋಟಿ ಹೆಚ್ಚುವರಿ ಅನುದಾನದ ವ್ಯವಸ್ಥೆ. -Times Of  Karkala 

ಹೆಬ್ರಿ : ಹೆಬ್ರಿ ಗ್ರಾಮದ ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಬಳಿ 804.25   ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ತಾಲ್ಲೂಕು ಕಚೇರಿಯ ನೂತನ ಕಟ್ಟಡ " ಮಿನಿ ವಿಧಾನ ಸೌಧ " ವನ್ನು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವರಾದ ಸುನಿಲ್‌ ಕುಮಾರ್‌ರವರು  ವೀಕ್ಷಿಸಿದರು.

ಮುಂದಿನ ಎರಡು ತಿಂಗಳೊಳಗೆ ಕಟ್ಟಡ ಸಂಪೂರ್ಣ ಕೆಲಸವನ್ನು ಮಾಡಿ ಬಿಟ್ಟುಕೊಡಬೇಕು, ಅತ್ಯಂತ ಪರಿಪೂರ್ಣವಾಗಿ ಕೆಲಸವನ್ನು ನಿರ್ವಹಿಸುವಂತೆ ಸೂಚಿಸಿ ಕಡಿಮೆ ಬೀಳುವ  2 .50 ಕೋಟಿ ಅನುದಾನವನ್ನು ಅತೀ ಶೀಘ್ರವಾಗಿ ವ್ಯವಸ್ಥೆಗೊಳಿಸಲಾಗುವುದು ಎಂದು ಸುನಿಲ್‌ ಕುಮಾರ್‌ ತಿಳಿಸಿದರು.


ಹೆಬ್ರಿ ತಹಶೀಲ್ಧಾರ್ ಪುರಂದರ್,  ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್, ಕಂದಾಯ ನಿರೀಕ್ಷಕ ಹಿತೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್‌ ಕುಮಾರ್‌ ಶಿವಪುರ, ಬಿಜೆಪಿ ಮುಖಂಡರಾದ ಹೆಬ್ರಿ ಗುರುದಾಸ ಶೆಣೈ, ಶಿವಪುರ ಸುರೇಶ್ ಶೆಟ್ಟಿ, ಸುಧಾಕರ ಹೆಗ್ಡೆ, ಪಂಚಾಯಿತಿ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಗಣೇಶ ಕುಮಾರ್‌, ಸ್ಥಳೀಯ ಮುಖಂಡ ಭಾಸ್ಕರ ಜೋಯಿಸ್‌, ಪಕ್ಷದ ವಿವಿಧ ಮುಖಂಡರು, ಜನಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಜಾಹೀರಾತು































Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget