ಮುದ್ರಾಡಿ ಆದಿಶಕ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ : 30 ದಿನಗಳ ಭಜನಾ ಸಂಭ್ರಮಕ್ಕೆ ಚಾಲನೆ.ಭಜನೆಯಿಂದ ಕ್ಷೇತ್ರದ ಕಾರಣಿಕ ವೃದ್ಧಿ : ಸೂರಿಮಣ್ಣು ಸದಾಶಿವ ಭಟ್.-Times Of Karkala

ಮುದ್ರಾಡಿ ಆದಿಶಕ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ : 30  ದಿನಗಳ ಭಜನಾ ಸಂಭ್ರಮಕ್ಕೆ ಚಾಲನೆ.ಭಜನೆಯಿಂದ ಕ್ಷೇತ್ರದ ಕಾರಣಿಕ ವೃದ್ಧಿ : ಸೂರಿಮಣ್ಣು ಸದಾಶಿವ ಭಟ್.-Times Of Karkala

ಹೆಬ್ರಿ : ಭಕ್ತರ ಭಕ್ತಿಯಿಂದ ಕ್ಷೇತ್ರದ ಕಾರಣಿಕ ವೃದ್ಧಿಯಾಗಲಿ, ಕ್ಷೇತ್ರದಲ್ಲಿಯ ನಿತ್ಯೋತ್ಸವ ಆಗಲಿ, ಧರ್ಮಯೋಗಿ ಮೋಹನ್‌ ಸ್ವಾಮೀಜಿಯವರ ಕನಸುಗಳೆಲ್ಲವೂ ಈಡೇರಲಿ ಎಂದು ಶಿವಪುರ ಸೂರಿಮಣ್ಣು ಮಠದ ಆಡಳಿತ ಮಂಡಳಿಯ ಮುಖ್ಯಸ್ಥರಾದ ಸದಾಶಿವ ಉಪಾಧ್ಯಾಯ ಹೇಳಿದರು. 

ಅವರು ಮುದ್ರಾಡಿ ನಾಟ್ಕದೂರು ಆದಿಶಕ್ತಿ ದೇವಸ್ಥಾನದಲ್ಲಿ ಫೆಬ್ರವರಿ 2  ರಿಂದ 4  ರ ತನಕ ನಡೆಯಲಿರುವ ಬ್ರಹ್ಮಕಲಶೋತ್ಸವ ಪುನ: ಪ್ರತಿಷ್ಠೆ ಅಂಗವಾಗಿ ಬುಧವಾರ ಆರಂಭಗೊಂಡ 30  ದಿನಗಳ ಭಜನಾ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 


30 ದಿನಗಳ ಭಜನಾ ಸಂಭ್ರಮಕ್ಕೆ ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕರಾದ ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಹೆಗ್ಡೆ ಚಾಲನೆ ನೀಡಿದರು. 30 ದಿನ  60 ತಂಡಗಳು ಭಜನೆಯಲ್ಲಿ ಭಾಗವಹಿಸಲಿವೆ, ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸುವಂತೆ ಆಡಳಿತ ಮೋಕ್ತೇಸರ  ಸುಕುಮಾರ್‌ ಮೋಹನ್‌ ಮನವಿ ಮಾಡಿದರು. 

ಈ ಸಂದರ್ಭದಲ್ಲಿ  ಮುದ್ರಾಡಿಯ ಶ್ರೀರಾಮ ಭಜನಾ ಮಂಡಳಿ ಮತ್ತು ಶ್ರೀರಾಮ ಮಕ್ಕಳ ಮಂಡಳಿಯ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಮುದ್ರಾಡಿಯ ಶ್ರೀರಾಮ ಭಜನಾ ಮಂಡಳಿ ಮುಖ್ಯಸ್ಥರಾದ ಪಂಚಾಯಿತಿ ಸದಸ್ಯ ಶುಭದರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣಪತಿ ಮುದ್ರಾಡಿ, ಮುದ್ರಾಡಿ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷರಾದ ಗುಂಡಾಳ ಸದಾಶಿವ ಶೆಟ್ಟಿ, ಹಿರಿಯರಾದ ಮುದ್ರಾಡಿ ಮಂಜುನಾಥ ಕಾಮತ್‌, ಆದಿಶಕ್ತಿ ಕ್ಷೇತ್ರದ ಕಮಲಾ ಮೋಹನ್‌, ಸುರೇಂದ್ರ ಮೋಹನ್‌, ಸುಧೀಂದ್ರ ಮೋಹನ್‌, ಉಮೇಶ್‌ ಕಲ್ಮಾಡಿ ಮುಂತಾದವರು ಉಪಸ್ಥಿತರಿದ್ದರು. 

ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget