ಜನವರಿ 7 ರಿಂದ 2 ವಾರಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿ -ಸರ್ಕಾರದ ಮಾರ್ಗ ಸೂಚಿಯಲ್ಲಿ ಏನಿದೆ ..?-Times Of Karkala

ಜನವರಿ 7 ರಿಂದ 2  ವಾರಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿ -ಸರ್ಕಾರದ ಮಾರ್ಗ ಸೂಚಿಯಲ್ಲಿ ಏನಿದೆ ..?-Times Of Karkala 

ಕೊರೊನ ಸೋಂಕು ಮತ್ತು  ಒಮಿಕ್ರಾನ್ ಹೆಚ್ಚಳ ಹಿನ್ನೆಲೆ ಅಲರ್ಟ್ ಆಗಿರೋ ರಾಜ್ಯ ಸರ್ಕಾರ ಕೋವಿಡ್-19  ನಿಯಂತ್ರಣಕ್ಕಾಗಿ ಕಠಿಣ ನಿಯಮಗಳ ಮೊರೆ ಹೋಗಿದ್ದು ಈ ಕುರಿತಂತೆ ಸಿ ಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ನಡೆಸಿ , ತಜ್ಞರ ಸಲಹೆ ಪಡೆದು ಚರ್ಚೆ ನಡೆಸಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. 

ಕೊರೊನ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ 15  ಅಂಶಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು ಮಾರ್ಗಸೂಚಿಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.

1 .ಜನವರಿ 7  ರ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆ 5  ಗಂಟೆ ವರೆಗೆ ವೀಕೆಂಡ್ ಕರ್ಫ್ಯೂ . ಮುಂದಿನ 2  ವಾರಗಳ 

    ಕಾಲ ವೀಕೆಂಡ್ ಕರ್ಫ್ಯೂ  ಜಾರಿಯಾಗಲಿದೆ . ಸದ್ಯ ರಾಜ್ಯದಲ್ಲಿ ಜಾರಿಯಲ್ಲಿರುವ ನೈಟ್ ಕರ್ಫ್ಯೂ 2  ವಾರಗಳ  ಕಾಲ ವಿಸ್ತರಣೆ 

    ಮಾಡಲಾಗಿದೆ .

2 .ಎಲ್ಲ ಸರ್ಕಾರಿ ಕಚೇರಿಗಳು ಈ ಎರಡು ವಾರಗಳ ಅವಧಿಯಲ್ಲಿ 5  ದಿನಗಳು ಅಂದರೆ ಸೋಮವಾರದಿಂದ ಶುಕ್ರವಾದವರೆಗೆ 

   ಮಾತ್ರ ಕಾರ್ಯ ನಿರ್ವಹಿಸಲಿವೆ. 

3 .ಸರ್ಕಾರಿ ಕಚೇರಿಗಳು ಶೇ 50  ರಷ್ಟು ಅಧಿಕಾರಿ ಸಿಬ್ಬಂದಿಯೊಂದಿಗೆ ಮಾತ್ರ ಕಾರ್ಯ ನಿರ್ವಹಿಸುತ್ತದೆ.

4 .ರಾಜ್ಯದಲ್ಲಿ ಎರಡು ವಾರಗಳ ಕಾಲ ವಾರಾಂತ್ಯ ಕರ್ಫ್ಯೂ ಜಾರಿ  ಇರಲಿದೆ.  ಶುಕ್ರವಾರ ರಾತ್ರಿ 10  ರಿಂದ   ಸೋಮವಾರ 

    ಬೆಳಿಗ್ಗೆ 5  ಗಂಟೆ ವರೆಗೆ ವೀಕೆಂಡ್ ಕರ್ಫ್ಯೂ ಜಾರಿ ಇರಲಿದೆ. 

5 .ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಜನರ ಅಗತ್ಯತೆಗಳಿಗೆ ಅನುಕೂಲವಾಗುವಂತೆ ಮಾರ್ಗಸೂಚಿಗಳ ಅನ್ವಯ ಬಿ ಎಂ ಆರ್ 

     ಸಿಎಲ್ ಹಾಗೂ ಸಾರಿಗೆ ಇಲಾಖೆ ಕಾರ್ಯ ನಿರ್ವಹಿಸಲಿವೆ.

6 . ಬೆಂಗಳೂರು ನಗರ ಜಿಲ್ಲೆಯಲ್ಲಿ ಮೆಡಿಕಲ್ ಪ್ಯಾರಾ ಮೆಡಿಕಲ್ ಕಾಲೇಜುಗಳು ಹಾಗೂ ಎಸ್ ಎಸ್ ಎಲ್  ಸಿ , ಪಿಯುಸಿ 

     ತರಗತಿಗಳು ಮಾತ್ರ ನಡೆಯಲಿದೆ . ಉಳಿದಂತೆ ಎಲ್ಲಾ ಶಾಲಾ ಕಾಲೇಜುಗಳು ಜನವರಿ 6  ರಿಂದ ಕ್ಲೋಸ್ ಆಗಲಿದೆ.

7   ಪಬ್ ,ಕ್ಲಬ್, ರೆಸ್ಟೋರೆಂಟ್, ಬಾರ್, ಹೋಟೆಲ್ ಗಳು ಶೇ. 50  ರಷ್ಟು ಸಾಮರ್ಥ್ಯದೊಂದಿಗೆ ಮಾತ್ರ ಕಾರ್ಯ ನಿರ್ವಹಿಸಲಿದೆ.

8 . ಸಿನಿಮಾ ಥಿಯೇಟರ್, ಮಲ್ಟಿಪ್ಲೇಕ್ಸ್ ,ರಂಗ ಮಂದಿರಗಳಲ್ಲಿ, ಶೇ. 50 ರಷ್ಟು ಸೀಟ್ ಭರ್ತಿ ಮಾಡಲು ಮಾತ್ರ ಅವಕಾಶ 

    ನೀಡಲಾಗಿದೆ.ಅಲ್ಲದೆ ಸಂಪೂರ್ಣ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ಮಾಡಲು ಅವಕಾಶ ನೀಡಲಾಗುತ್ತದೆ.

9 .ಮದುವೆ ಕಾರ್ಯಕ್ರಮದಲ್ಲಿ ಹೊರಾಂಗಣದಲ್ಲಿ 200  ಜನರಿಗೆ,ಒಳಾಂಗಣದಲ್ಲಿ 100  ಜನರಿಗೆ ಮಾತ್ರ ಅವಕಾಶ                      ನೀಡಲಾಗಿದೆ. ಈ ವೇಳೆ ಕೋರೋನ ಮಾರ್ಗ ಸೂಚಿಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.

10 .ಧಾರ್ಮಿಕ ಕೇಂದ್ರಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ. ಯಾವುದೇ ವಿಶೇಷ ಸೇವೆ ಹಾಗೂ ಪೂಜೆಗಳಿಗೆ ಅವಕಾಶವಿಲ್ಲ .

11 .ಮಾಲ್ . ಶಾಪಿಂಗ್ ಮಾಲ್ ಮತ್ತು ಅಂಗಡಿಗಳು ವೀಕ್ ಡೇ ಗಳಲ್ಲಿ ಎಂದಿನಂತಯೇ ಕಾರ್ಯನಿರ್ವಹಿಸಲು  ಅವಕಾಶ 

     ನೀಡಲಾಗಿದೆ.

12  ಜಿಮ್ ಈಜು ಕೊಳಗಳು ಶೇ. 50 ರಷ್ಟು ಸಾಮರ್ಥ್ಯದಲ್ಲಿ ಮಾತ್ರ  ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.

14..ರಾಜ್ಯದಲ್ಲಿ ಎಲ್ಲಾ ರೀತಿಯ ಪ್ರತಿಭಟನೆ. ರ್ಯಾಲಿಗಳಿಗೆ ನಿಷೇಧ ವಿಧಿಸಲಾಗಿದೆ.

15.ರಾಜ್ಯ ಅರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾರ್ಗ ಸೂಚಿಯಂತೆ ಕೇರಳ ಹಾಗೂ ಮಹಾರಾಷ್ಟ್ರ , ಗೋವಾ ಗಡಿ 

    ಪ್ರದೇಶಗಳಲ್ಲಿ ತೀವ್ರ ಕಣ್ಗಾವಲು ವಿಧಿಸಲಾಗುತ್ತದೆ.


ವೀಕೆಂಡ್ ಕರ್ಫ್ಯೂ ಮಾರ್ಗ ಸೂಚಿಯ ಅಂಶಗಳು:

1 .ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಅವುಗಳು ಸ್ವಾಯುತ್ತ ಸಂಸ್ಥೆಗಳು ,ನಿಗಮಗಳು ತುರ್ತು ಅಗತ್ಯ 

  ಸೇವೆಗಳೊಂದಿಗೆ ವ್ಯವಹರಿಸುತ್ತದೆ. ಕೋವಿಡ್-19 ನಿಯಂತ್ರಣ ಹಾಗೂ ನಿರ್ವಹಣಾ ಕರ್ತವ್ಯಗಳನ್ನು ನಿರ್ವಹಿಸುವ  ಸಂಸ್ಥೆಗಳು ಎಂದಿನಂತೆ ಸಂಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸಂಸ್ಥೆಗಳ  ಅಧಿಕಾರಿಗಳು / ಸಿಬ್ಬಂದಿಗಳು ಸಂಚಾರ ಮಾಡಲು ಅನುಮತಿ ನೀಡಲಾಗಿದೆ.

2 .ಎಲ್ಲಾ ಸಾರ್ವಜನಿಕ ಪಾರ್ಕ್ ಗಳು ಕ್ಲೋಸ್  ಇರುತ್ತದೆ.

3 .ಐಟಿ ಉದ್ಯಮಿಗಳಿಗೆ ವಿನಾಯತಿ ನೀಡಲಾಗಿದ್ದು ಉದ್ಯೋಗಿಗಳು ಸಂಸ್ಥೆಯ ಐಡಿ ಕಾರ್ಡ್ ತೋರಿಸಿ ಸಂಚಾರ ಮಾಡಲು 

    ಅವಕಾಶ ನೀಡಲಾಗಿದೆ.

4 ಆರೋಗ್ಯ ಚಿಕಿತ್ಸೆ , ಲಸಿಕೆ ಪಡೆಯಲು ಆಸ್ಪತ್ರೆಗೆ ತೆರಳುವ ರೋಗಿಗಳು ಹಾಗೂ ಸಂಬಂಧಿಕರಿಗೆ ಅವಕಾಶ ನೀಡಲಾಗಿದೆ.

5 . ಆಹಾರ ದಿನಸಿ ಹಣ್ಣುಗಳು ಮತ್ತು ತರಕಾರಿ, ಮಾಂಸದ ಅಂಗಡಿ ,ಮೀನು ಡೈರಿ ಮತ್ತು ಹಾಲಿನ ಬೂತ್ ಗಳಿಗೆ ಎಂದಿನಂತೆ 

    ತೆರೆಯಲು ಅವಕಾಶ ನೀಡಲಾಗಿದೆ.ಬೀದಿ ಬೀದಿ ವ್ಯಾಪಾರಿಗಳಿಗೂ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ .

6 . ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ.

7 . ರೈಲು ಮತ್ತು ವಿಮಾನ್ ಸೇವೆಗೆ ಅವಕಾಶ ನೀಡಲಾಗಿದೆ.ಪ್ರಯಾಣಿಕರು ಟಿಕೆಟ್ ಹಾಗೂ ಅಗತ್ಯ ದಾಖಲೆಗಳನ್ನು ತೋರಿಸಿ 

    ಪ್ರಯಾಣಿಸಬಹುದಾಗಿದೆ. ಟ್ಯಾಕ್ಸಿ ಸಾರ್ವಜನಿಕ ಸಾರಿಗೆ ಸೇವೆಗಳು ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶವಿದೆ.

8 .ಮದುವೆ ಕಾರ್ಯಕ್ರಮದಲ್ಲಿ ಹೊರಾಂಗಣದಲ್ಲಿ 200  ಜನರಿಗೆ,ಒಳಾಂಗಣದಲ್ಲಿ 100  ಜನರಿಗೆ ಮಾತ್ರ ಅವಕಾಶ 

  ನೀಡಲಾಗಿದೆ.ಈ ವೇಳೆ ಕೋರೋನ ಮಾರ್ಗ ಸೂಚಿಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.

ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget