ಕೆ.ಎಲ್. ರಾಹುಲ್ ನಾಯಕ-Times Of Karkala

 ಕೆ.ಎಲ್. ರಾಹುಲ್ ನಾಯಕ-Times Of Karkala 

ಬುಮ್ರಾ ಉಪನಾಯಕ , ಮರಳಿದ ಧವನ್ 

ಹೊಸದಿಲ್ಲ: ಗಾಯಾಳು ರೋಹಿತ್ ಶರ್ಮ ದಕ್ಷಿಣ ಆಫ್ರಿಕಾ ಎದುರಿನ ಏಕ ದಿನ ಸರಣಿಯಿಂದಲೂ ಹೊರಗುಳಿದಿದ್ದಾರೆ. ಹೀಗಾಗಿ ಕರ್ನಾಟಕದ ಆರಂಭಕಾರ ಕೆ.ಎಲ್.ರಾಹುಲ್ ಅವರನ್ನು ಭಾರತ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ. ಯಾರ್ಕರ್ ಸ್ಪೆಷಲಿಸ್ಟ್ ಜಸ್ ಪ್ರೀತ್ ಬುಮ್ರಾರವರಿಗೆ  ಮೊದಲ ಸಲ ಟೀಮ್ ಇಂಡಿಯಾದ ಉಪನಾಯಕತ್ವ ನೀಡಲಾಗಿದೆ. 

ವರ್ಷಾಂತ್ಯದದ 3  ದಿನ ಪಂದ್ಯಗಳ ಈ ಸರಣಿಗಾಗಿ 18  ಸದ್ಯಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ.ವೇಗಿ ಮೊಹಮದ್ ಶಮಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.ಆನ್ ಫಿಟ್ ಆಗಿರುವ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ .ಓಪನರ್ ಋತುರಾಜ್ ಗಾಯಕ್ವಾಡ್  ಮತ್ತು ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಈ ತಂಡದಲ್ಲಿದ್ದು ಮೊದಲ ಸಲ ವಿದೇಶ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಇಬ್ಬರಿಗೂ 2021 ರ ವಿಜಯ್ ಹಜಾರೆ ಟ್ರೋಫಿ ಪದ್ಯಾವಳಿಯಲ್ಲಿ ಪ್ರಚಂಡ ಪದರ್ಶನ ನೀಡಿದ್ದರು. ಗಾಯಕ್ವಾಡ್ 5  ಪಂದ್ಯಗಳಲ್ಲಿ 4  ಶತಕಗಳ ನೆರವಿನಿಂದ 603 ರನ್ ಪೇರಿಸಿದ್ದರು. 

ನಾಯಕತ್ವದಿಂದ ಕೆಳಗಿಳಿಸಲ್ಪಟ್ಟ ವಿರಾಟ್ ಕೊಹ್ಲಿ , ಕೀಪರ್ ರಿಷಬ್ ಪಂತ್ ಮತ್ತು ನೂತನ ಉಪನಾಯಕ ಜಸ್ ಪ್ರೀತ್ ಬುಮ್ರಾ 9  ತಿಂಗಳ ಬಳಿಕ ಏಕದಿನ ತಂಡಕ್ಕೆ ವಾಪಸಾಗಿದ್ದಾರೆ. ಕಳೆದ ಶ್ರೀಲಂಕಾ ಪ್ರವಾಸದ ವೇಳೆ ಭಾರತದ 'ದ್ವಿತೀಯ ತಂಡದ ನಾಯಕತ್ವ ವಹಿಸಿದ್ದ ಎಡಗೈ ಆರಂಭ ಕಾರ  ಶಿಖರ್ ಧವನ್ ಕೂಡ ಮರಳಿದ್ದಾರೆ. 

ರೋಹಿತ್ ಶರ್ಮ ಅವರನ್ನು ಏಕದಿನ ತಂಡದ ನೂತನ ನಾಯಕ್ ಹಾಗೂ ಟೆಸ್ಟ್ ತಂಡದ ನೂತನ ಉಪನಾಯಕನನ್ನಾಗಿ ನೇಮಿಸಲಾಗಿತ್ತು. ಆದರೆ ಈ ಎರಡು   ಜವಾಬ್ಧಾರಿಯನ್ನು ವಹಿಸಲು ಅವರಿಗೆ ಸಾಧ್ಯವಾಗದಿರುವುದು ವಿಪರ್ಯಾಸ !

ಏಕದಿನ ಸರಣಿಯ ಪಂದ್ಯಗಳು ಜ. 19 .21  ಮತ್ತು 23 ರಂದು ನಡೆಯಲಿದೆ.

ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget