ಕಾರ್ಕಳ: ತಲೆ ನೋವಿನಿಂದ ಬಳಲುತ್ತಿದ್ದ ಯುವತಿ ಮೃತ್ಯು-Times Of Karkala

 ಕಾರ್ಕಳ: ತಲೆ ನೋವಿನಿಂದ ಬಳಲುತ್ತಿದ್ದ ಯುವತಿ ಮೃತ್ಯು-Times Of Karkala



ಕಾರ್ಕಳ:ತಲೆ ನೋವಿನಿಂದ ಬಳಲುತ್ತಿದ್ದ ಯುವತಿಯೊಬ್ಬಳು ಹಠಾತ್ ಆಗಿ ಮೃತ ಪಟ್ಟ ಘಟನೆ ಕಾರ್ಕಳ ತಾಲೂಕಿನ ನೀರೆ ಗ್ರಾಮದ ಬಾರೇಜಡ್ಡು  ಎಂಬಲ್ಲಿ ನಡೆದಿದೆ.

ನೀರೆ ಗ್ರಾಮದ ಶಿವರಾಮ ಆಚಾರ್ಯ ಅವರ ಮಗಳು 18 ವರ್ಷದ ಶರಣ್ಯ ಮೃತ ಪಟ್ಟ ಯುವತಿ. ಶರಣ್ಯಳಿಗೆ 12  ದಿನಗಳ  ಹಿಂದೆ   ತೆಲೆನೋವು ಕಾಣಿಸಿಕೊಂಡಿತ್ತು. ಬಳಿಕ ಮನೆಯವರು ಅವಳಿಗೆ ಕಾರ್ಕಳ ಸರ್ಕಾರಿ  ಆಸ್ಪತ್ರೆಗೆ ಕೆರೆದುಕೊಂಡು ಹೋಗಿ ಚಿಕೆತ್ಸೆ ಕೊಡಿಸಿಕೊಂಡು ಬಂದಿದ್ದರು. ಜ.9  ರಂದು ಸಂಜೆ 4 ಗಂಟೆಗೆ ಮತ್ತೆ ತಲೆ ನೋವು ಕಾಣಿಸಿಕೊಂಡಿದೆ. ಬಳಿಕ ವಾಂತಿ ಮಾಡಿಕೊಂಡು ಅಸ್ವಸ್ಥಳಾಗಿದ್ದ ಆಕೆಯನ್ನು ಕಾರ್ಕಳ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು , ಅಲ್ಲಿ ವೈದ್ಯರು ಪ್ರಾಥಮಿಕ ಚಿಕೆತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.

ಅದರಂತೆ ಸಂಜೆ 7  ಗಂಟೆಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಅದಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.ಈ ಬಗ್ಗೆ ಕಾರ್ಕಳ ನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜಾಹೀರಾತು 














Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget