ಆಜೆಕಾರು:ಬಸ್ಸಿನಿಂದ ಬಿದ್ದು ವಿದ್ಯಾರ್ಥಿನಿಗೆ ಗಾಯ-Times Of Karkala

ಆಜೆಕಾರು:ಬಸ್ಸಿನಿಂದ  ಬಿದ್ದು ವಿದ್ಯಾರ್ಥಿನಿಗೆ ಗಾಯ-Times Of  Karkala 

ಕಾರ್ಕಳ: ಬಸ್  ಚಾಲಕನ ನಿರ್ಲಕ್ಷದಿಂದ ಬಸ್ಸಿಂದ ಬಿದ್ದು ವಿದ್ಯಾರ್ಥಿನಿಗೆ ಗಾಯಗಳಾಗಿರುವ ಘಟನೆ ಅಜೆಕಾರು ಕಾಡುಹೊಳೆ ಎಂಬಲ್ಲಿ ನಡೆದಿದೆ. ಉಡುಪಿ ಖಾಸಗಿ ಕಾಲೇಜಿನಲ್ಲಿ ಸಿ ಎ ವಿದ್ಯಾರ್ಥಿನಿ ಅಭಿಜ್ಞಾ (18 ) ಘಟನೆಯಲ್ಲಿ ಗಾಯಗೊಂಡವಳು .



ವಿದ್ಯಾರ್ಥಿನಿ ಜನವರಿ 1 ರ ಮದ್ಯಾಹ್ನ 3 .10  ರ ವೇಳೆಗೆ ಅಜೆಕಾರು ಕಡೆಯಿಂದ ಲಕ್ಷ್ಮೀಶ ಬಸ್ಸಿನಲ್ಲಿ  ಕಾಡುಹೊಳೆ ಜಂಕ್ಷನ್ ಗೆ ಬಂದಿದ್ದಳು. ನಿಂತಿದ್ದ ಬಸ್ಸಿನ ಮುಂದಿನ ಬಾಗಿಲಿನಿಂದ ಅಭಿಜ್ಞಾ ಳು ಇಳಿಯುತ್ತಿರುವಾಗ ಬಸ್ಸಿನ ಚಾಲಕನು ಏಕಾಏಕಿಯಾಗಿ ಬಸ್ಸನ್ನು ಅಜಾಗರೂಕತೆಯಿಂದ ಮುಂದಕ್ಕೆ ಚಹಾಯಿಸಿರುವುದು ಈ ಘಟನೆ ಗೆ ಕಾರಣವಾಗಿದೆ. ಪರಿಣಾಮವಾಗಿ ವಿದ್ಯಾರ್ಥಿನಿ ಬಸ್ಸಿನಿಂದ ಡಾಂಬರು ರಸ್ತೆಗೆ ಬಿದ್ದು ಗಂಭೀರ ಗಾಯವಾಗಿದೆ. 

ಬಸ್ಸಿನ ಡ್ರೈವರ್, ಕಂಡೆಕ್ಟರ್ ಹಾಗೂ  ಸಾರ್ವಜನಿಕರ ಸಹಾಯದಿಂದ ಆಕೆಯನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿದ್ದಾರೆ.ಬಸ್ಸು ಚಾಲಕ ಶ್ರೀಕಾಂತ್ ವಿರುದ್ಧ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು






























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget