ಕಾರ್ಕಳ: ಬೂಸ್ಟರ್ ಡೋಸ್ ಗೆ ಚಾಲನೆ-Times Of Karkala

 ಕಾರ್ಕಳ: ಬೂಸ್ಟರ್ ಡೋಸ್  ಗೆ ಚಾಲನೆ-Times Of Karkala  ಕಾರ್ಕಳ:ಜನವರಿ ಅಂತ್ಯದದ ವೇಳೆಗೆ ಐಸಿಯು ಘಟಕವನ್ನು ಲೋಕಾರ್ಪಣೆ ಗೊಳಿಸಲಾಗುವುದು ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ರಾಷ್ಟ್ರೀಯ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ತಾ | ಆರೋಗ್ಯಾಧಿಕಾರಿಗಳ ಕಚೇರಿ ಕಾರ್ಕಳ ಇದರ ವತಿಯಿಂದ ಅರೋಗ್ಯ ಕಾರ್ಯಕರ್ತರು , ಮುಂಚೂಣಿ ಕಾರ್ಯಕರ್ತರು, 60  ವರ್ಷ ಮೇಲ್ಪಟ್ಟವರಿಗೆ ಕೋವಿಡ್ 19  ಮುಂಜಾಗ್ರತಾ ಡೋಸ್ ಲಸಿಕೆ ಅಭಿಯಾನಕ್ಕೆ ತಹಶೀಲ್ದಾರ್ ಕಚೇರಿಯಲ್ಲಿ ಚಾಲನೆ ನೀಡಿ ಮಾತನಾಡಿದರು.

ಆರಂಭದಲ್ಲಿ ಸೋಂಕು ಕಾಣಿಸಿಕೊಂಡಾಗ ಸಾಕಷ್ಟು ಸಮಸ್ಯೆ ಎದುರಾಗಿತ್ತು. 2 ನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಅನಾಹುತಗಳಾಗಿದ್ದವು.3 ನೇ ಆಲ್  ಬಂದಾಗ ಬಹಳ ಎಚ್ಚರಿಕೆ ವಹಿಸಿ ಮುನ್ನೆಚ್ಚರಿಕೆಗಳನ್ನು  ವಹಿಸಿದ್ದೆವು.ಸೋಂಕು ಕಾಣಿಸಿಕೊಂಡಾಗಿನಿಂದಲೂ ವಿಶೇಷ ಮುನ್ನೆಚ್ಚರಿಕೆ ತಗೆದುಕೊಂಡ ಪರಿಣಾಮ ತಾಲೂಕು, ಜೆಲ್ಲೆಗಳಲ್ಲಿ ಜಾಸ್ತಿ ಸಮಸ್ಯೆಯಾಗಿಲ್ಲ ಆದರೆ ಮಕ್ಕಳ ಐಸಿಯು ಕೇಂದ್ರವನ್ನು ತೆರೆಯಲು  ನಿರ್ಧರಿಸಿದ್ದೆವು ಅದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ ಐಕ್ಯೂಪ್ಮೆಂಟ್ ಹೊಂದಲು ಅದಾನಿ ಗ್ರೂಪ್ 8  ಲಕ್ಷ ರೂ. ನೀಡಿದ್ದಾರೆ. ಜನವರಿ  ಅಂತ್ಯಕ್ಕೆ ಉದ್ಘಾಟನೆ ನಡೆಯಲಿದೆ ಎಂದರು.14 ವರ್ಷ ಮೇಲ್ಪಟ್ಟ ಮಕ್ಕಳಿಗೆ ಶೇ. 60 ರಷ್ಟು ಲಸಿಕೆಯನ್ನು ಜಿಲ್ಲಾದ್ಯಂತ  ನೀಡಿದ್ದೇವೆ. ಉಳಿದ ಶೇ 40  ಪ್ರಮಾಣವನ್ನು ವಾರದೊಳಗೆ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ. ಜನರ ಸಹಕಾರದಿಂದ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಮುಂಜಾಗ್ರತಾ ಡೋಸ್ ಅಭಿಯಾನವೂ ಯಸಃಸ್ವಿಯಾಗಲಿ ಎಂದರು.

ತಾಲೂಕು ಆರೋಗ್ಯಾಧಿಕಾರಿ ಪ್ರಸ್ತಾವನೆಗೈದು ಆರಂಭದಲ್ಲಿ ಸರಕಾರಿ ಖಾಸಗಿ ವೈದ್ಯರಿಗೆ ಲಸಿಕೆ ನೀಡಿ ಅನಂತರ ಇತರ ಇಲಾಖೆಗಳಿಗೆ ನೀಡಲಿದ್ದೇವೆ . ಮಕ್ಕಳ ಲಸಿಕೆಯ ಗುರಿ ಶೇ 50 ರಷ್ಟು ಪೂರ್ಣಗೊಳಿಸಿದ್ದು ಉಳಿದನ್ನು ಶೀಘ್ರ ಪೂರ್ಣಗೊಳಿಸುತ್ತೇವೆ ಎಂದರು.

ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಕೆ. ಎಸ. ರಾವ್ , ಸರ್ಕಲ್ ಇನ್ ಸ್ಪೆಕ್ಟರ್  ಸಂಪತ್ ಕುಮಾರ್ , ಪುರಸಭೆ ಅಧ್ಯಕ್ಷೆ  ರೂಪಾ ಟಿ. ಶೆಟ್ಟಿ , ಪುರಸಭೆ ಅಧ್ಯಕ್ಷೆ ಸುಮಾ ಕೇಶವ್ ಉಪಸ್ಥಿತರಿದ್ದರು. 

ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget