ಕಾರ್ಕಳ:ನಿರಂತರ ಭಜನೆಯಿಂದ ಕ್ಷೇತ್ರದ ಬಿಂಬ ಸಾನಿಧ್ಯ ವೃದ್ಧಿ.-ಶ್ಯಾಮಲಾ. ಎಸ್. ಕುಂದರ್-Times Of Karkala

ಕಾರ್ಕಳ:ನಿರಂತರ ಭಜನೆಯಿಂದ ಕ್ಷೇತ್ರದ ಬಿಂಬ ಸಾನಿಧ್ಯ ವೃದ್ಧಿ.-ಶ್ಯಾಮಲಾ. ಎಸ್. ಕುಂದರ್-Times Of Karkala


 

ಕಾರ್ಕಳ: ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಟಬಂದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ  ಭಜನಾ ಮಾಸಾಚರಣೆ ನಡೆಯುತ್ತಿದ್ದು ನಿತ್ಯವೂ  ಭಜನಾ ಮಂಡಳಿಯವರಿಂದ  ಭಜನಾ ಕಾರ್ಯಕ್ರಮ ಬಹಳ ಅರ್ಥ ಪೂರ್ಣವಾಗಿ ನಡೆಯುತ್ತಿದೆ. ಪ್ರತಿ ದಿನವೂ ಗಣ್ಯ ವ್ಯಕ್ತಿ ಗಳನ್ನೂ ಅತಿಥಿಗಳನ್ನಾಗಿ ಆಮಂತ್ರಿಸಿ ಅವರ ಕೈಯಲ್ಲಿಯೇ ದೀಪ ಪ್ರಜ್ವಲಿಸಿ‌ ಭಜನೆಯನ್ನು ಆರಂಭಿಸಲಾಗುತ್ತದೆ.   ಜನವರಿ 2  ರಂದು ನಡೆದ ಭಜನಾ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶಾಮಲಾ ಎಸ್ ಕುಂದರ್ ಆಗಮಿಸಿದ್ದರು.  ದೀಪ ಪ್ರಜ್ವಲಿಸಿ‌ ಭಜನೆಯಿಂದ ಮಾತ್ರ ದೇವರ ಬಿಂಬ ಸಾನಿಧ್ಯವನ್ನು ಹೆಚ್ಚಿಸಲು ಸಾಧ್ಯ ಆದ್ದರಿಂದ ನಿರಂತರ ಭಜನಾ ಕಾರ್ಯಕ್ರಮಗಳು ಕ್ಷೇತ್ರದ  ಅಭಿವೃದ್ಧಿಗೆ ಪೂರಕವಾಗಿರಲಿ ಹಾಗೂ ಜನರಲ್ಲಿ ಇನ್ನಷ್ಟು ಧಾರ್ಮಿಕ ಭಾವನೆಯ ಜಾಗೃತಿ ಮೂಡುವಂತಾಗಲಿ ತಿಳಿಸಿದರು. ಕಾರ್ಕಳ ನನ್ನ ಹುಟ್ಟೂರು ಇಲ್ಲಿ  ಬ್ರಹ್ಮಕಲಶೋತ್ಸವದ ಹೊಸ್ತಿಲ್ಲಿರುವ ದೇವಸ್ಥಾನದ  ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು ನನ್ನ ಬಾಗ್ಯ ಆ ಪ್ರಯುಕ್ತ  ಹಮ್ಮಿಕೊಂಡ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು. 

ವೇದಿಕೆಯಲ್ಲಿ ನಿಟ್ಟೆ ವಿದ್ಯಾಸಂಸ್ಥೆಯ ಪ್ರೊಫೆಸರ್ ಶಶಿಕಾಂತ ಕರಿಂಕ  ಅವರ ಧರ್ಮಪತ್ನಿ ಚೇತನಾ ಶಶಿಕಾಂತ್ ಕರಿಂಕ. ಹಿರಿಯ ಸಮಾಜ ಬಂದು ಶಾರದಾ ಮಾದೋಜಿ ಮುಂಡ್ಕೂರು ಉಪಸ್ಥಿತರಿದ್ದರು. ದೇವಳದ ಆಡಳಿತ ಮೊಕ್ತೇಸರಾದ ಗಿರೀಶ್ ರಾವ್ ಅಧ್ಯಕ್ಷತೆ ವಹಿಸಿದ್ದು ಕ್ಷೇತ್ರದ ಪರವಾಗಿ ಮನವಿ ಸಲ್ಲಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಶುಭದ ರಾವ್ ಸ್ವಾಗತಿಸಿ ಜೀರ್ಣೋದ್ಧಾರ ಸಮಿತಿಯ ಅದ್ಯಕ್ಷ ಪ್ರಕಾಶ್ ಜಾದವ್ ವಂದಿಸಿದರು.‌ ಪದ್ಮಾವತಿ ಮಹಿಳಾ ಭಜನಾ ಮಂಡಲಿ ಸದಸ್ಯರು ‌ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget