ಕಾರ್ಕಳ: ಗತ ವೈಭವದೊಂದಿಗೆ ನವೀಕರಣಗೊಳ್ಳಿತ್ತಿದೆ ಕೋಟೆ ಮಾರಿಯಮ್ಮ ಕ್ಷೇತ್ರ-Times Of Karkala

 ಕಾರ್ಕಳ: ಗತ ವೈಭವದೊಂದಿಗೆ ನವೀಕರಣಗೊಳ್ಳಿತ್ತಿದೆ ಕೋಟೆ ಮಾರಿಯಮ್ಮ ಕ್ಷೇತ್ರ-Times Of Karkala 

ಕಾರ್ಕಳ: ಕಾರ್ಕಳದ ಕೋಟೆ ಮಾರಿಯಮ್ಮ ಶ್ರೀ ಕ್ಷೇತ್ರದಲ್ಲಿ ಅಷ್ಟಮಂಗಲ ಪ್ರಶ್ನೆ  ಚಿಂತನೆಯನ್ನು ಜ.10  ಮತ್ತು 11  ರಂದು ಆಯೋಜಿಸಲಾಗಿದ್ದು, ಮೊದಲನೇ ದಿನವಾದ ನಿನ್ನೆ ಅಷ್ಟಮಂಗಲ  ಚಿಂತನೆಯಲ್ಲಿ ಈ ವಿಚಾರಗಳನ್ನು ಮುಂದಿಟ್ಟರು.

ಶ್ರೀ ಕ್ಷೇತ್ರವು ಜೀರ್ಣೋದ್ದಾರದೊಂದಿಗೆ ನವೀಕರಣಗೊಳ್ಳುವ ಮೂಲಕ ಅಷ್ಟಬಂದ ಬ್ರಹ್ಮಕಲಶೋತ್ಸವವು ಸಾಂಗವಾಗಿ ನರವೇರಲಿದೆ ಎಂದು ಕೇರಳದ ಪಯ್ಯನ್ನೂರಿನ ನಾರಾಯಣ ಪೊದುವಾಳ್ ನುಡಿದರು.

ಇಕ್ಕೇರಿ ನಾಯಕನ ಕಾಲದಲ್ಲಿ ರಾಮಕ್ಷತ್ರಿಯ ಜನಾಂಗದವರು ಆರಾಧಿಸಿಕೊಂಡು ಬಂದಿದ್ದ ಶ್ರೀ ಮಾರಿಯಮ್ಮ ಹಾಗೂ ಕೋಟೆ ಆಂಜನೇಯ ಶ್ರೀ ಕ್ಷೇತ್ರಗಳೆರಡೂ  ಸಮಕಾಲದಲ್ಲಿ ನವೀಕರಣಗೊಳ್ಳುತ್ತಿದೆ. ಅನುವಂಶಿಕ ಆಡಳಿತ ಮೊಕ್ತೇಸರರರು, ಜೀರ್ಣೋದ್ದಾರ ಸಮಿತಿಯವರು, ಅರ್ಚಕ ವೃಂದದವರು ಭಕ್ತಾದಿಗಳು ಭಕ್ತಿ ಭಾವನೆ ಏಕತೆಯಿಂದ ಸತ್ಕಾರ್ಯ ನಡೆಸಿದಾಗ , ಶ್ರೀಕ್ಷೇತ್ರವು ಮತ್ತೆ ಕಾರಣಿಕ  ಕ್ಷೇತ್ರವಾಗಿ ಮೆರೆಯಲಿದೆ. ಧಾರ್ಮಿಕ ಸಾಮಾಜಿಕ ,ಶೈಕ್ಷಣಿಕ, ಕಲೆ , ಸಾಹಿತ್ಯಕ್ಕೆ ಇಲ್ಲಿ ಪ್ರಾಶಸ್ತ್ಯ ದೊರಕಲಿದೆ ಆ ಮೂಲಕ ಕಾರ್ಕಳ ಬೆಳಗಲಿದೆ ಎಂದು ಜ್ಯೋತಿಶಾಸ್ತ್ರ ಮೂಲಕ ತಿಳಿಸಿದ್ದಾರೆ.

ಇನ್ನು ಅಷ್ಟಮಂಗಲ  ಪ್ರಶ್ನೆಯ ವಿಮರ್ಶಕ ಶಶಿಪಂಡಿತ್, ಲಕ್ಷ್ಮೀಶ್ ಪಂಡಿತ್, ಸಜಿತ್ ಪೊದುವಾಳ್, ಶ್ರೀ ಕ್ಷೇತ್ರದ ಅರ್ಚಕ ರಘುರಾಮ್ ಆಚಾರ್ಯ , ಲಕ್ಷ್ಮೀಶ್ ಭರದ್ವಾಜ  ಅಷ್ಟಮಂಗಲ ಚಿಂತನೆಯಲ್ಲಿ ಪಾಲ್ಗೊಂಡರು.

ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿರುವ ಶಾಸಕ ಹಾಗು ಸಚಿವ ವಿ. ಸುನಿಲ್ ಕುಮಾರ್ , ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರದ ಕೆ.ಬಿ ಗೋಪಾಲಕೃಷ್ಣ  ರಾವ್ , ಕೆ.ಜೆ  ರಾಘವೇಂದ್ರ ರಾವ್ , ಸುರೇಶ ಹವಾಲ್ದಾರ್, ಕೆ.ಬಿ. ಗುರುಪ್ರಸಾದ್, ಸಮಿತಿಯ ಪ್ರಮುಖರಾದ ವಿಜಯ ಶೆಟ್ಟಿ, ಸುಜಯ್ ಕುಮಾರ್ ಶೆಟ್ಟಿ, ಗಣೇಶ್ ಕಾಮತ , ಜಗದೀಶ್ ಮಲ್ಯ, ಪಾಲಡ್ಕ ನರಸಿಂಹ ಪೈ , ನವೀನ್ ನಾಯಕ, ನವೀನ್ ದೇವಾಡಿಗ   ಭಾಸ್ಕರ್ ಕುಲಾಲ್, ಹರೀಶ್ ಅಮೀನ್, ಪ್ರಶಾಂತ್ ರಾವ್, ಹಾಗೂ ಭಕ್ತರು ಉಪಸ್ಥಿತರಿದ್ದರು.

ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget