ಹೆಬ್ರಿ ಶಾಲೆಯಲ್ಲಿ ಕಲಿಕೋಪಕರಣಗಳ ವಿತರಣಾ ಕಾರ್ಯಕ್ರಮ:ದಾನಿಗಳಿಗೆ ಸನ್ಮಾನ-Times Of Karkala

ಹೆಬ್ರಿ ಶಾಲೆಯಲ್ಲಿ ಕಲಿಕೋಪಕರಣಗಳ ವಿತರಣಾ ಕಾರ್ಯಕ್ರಮ:ದಾನಿಗಳಿಗೆ ಸನ್ಮಾನ-Times Of Karkala

ಹೆಬ್ರಿ : ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕಾದರೆ ಹರೀಶ್ ಶೆಟ್ಟಿ ಅವರಂಥ ದಾನಿಗಳು  ಮುಂದೆ ಬರಬೇಕಾಗಿದೆ. ಶಾಲೆ ಸಮುದಾಯದ ಸ್ವತ್ತು ಪ್ರತಿಯೊಬ್ಬರಿಗೂ ಅತೀ ಅವಶ್ಯಕವಾಗಿದ್ದು ಸಮಾಜದ ಪ್ರತಿಯೊಬ್ಬರು ಕಿಂಚಿತ್ತು ಸಹಾಯವನ್ನು ಸರ್ಕಾರಿ ಶಾಲೆಗಳಿಗೆ ನೀಡಿದರೆ. ಸರ್ಕಾರಿ ಶಾಲೆಗಳು ಕೂಡ ಖಾಸಗಿ ಶಾಲೆಯಷ್ಟೆ ಬಲಿಷ್ಠವಾಗಬಹುದು ಎಂದು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ್ ಹೇಳಿದರು.

ಅವರು ಶುಕ್ರವಾರ  ಕುಚ್ಚೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ದಾನಿಗಳು ವಿದ್ಯಾರ್ಥಿಗಳಿಗೆ ನೀಡಿದ ಕಲಿಕೋಪಕರಣಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುಚ್ಚೂರು ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಶೆಟ್ಟಿ ಬಾದ್ಲು ಮಾತನಾಡಿ ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆಗಳು ಉತ್ತಮವಾಗಿವೆ, ನಮ್ಮೂರಿನ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳು ಉತ್ತಮ ಫಲಿತಾಂಶವನ್ನು ಪಡೆದಿರುವುದು ಕೂಡ ಸಾಧನೆಯಾಗಿದೆ. ಸರ್ಕಾರಿ ಶಾಲೆಯಲ್ಲಿ  ಮುಂದಿನ ದಿನಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇನ್ನಷ್ಟು ಕ್ರಿಯಾಶೀಲರಾದಾಗ ಸರ್ಕಾರಿ ಶಾಲೆ ಉಳಿಯುತ್ತದೆ ಎಂದರು.

ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಐದು ಸರ್ಕಾರಿ ಶಾಲೆಗಳಾದ ದೂಪದಕಟ್ಟೆ, ಕುಚ್ಚೂರು ಪ್ರಥಮ, ಸಳ್ಳೆ ಕಟ್ಟೆ , ದಾಸನಗುಡ್ಡೆ ಹಾಗೂ ಕುಚ್ಚೂರು ೨ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 350 ವಿದ್ಯಾರ್ಥಿಗಳಿಗೆ ಕಲಿಕೋಪಕರಣವನ್ನು ದಾನಿ ಹರೀಶ್ ಶೆಟ್ಟಿ ಬಾದ್ಲು ಕೊಡುಗೆಯಾಗಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಉದ್ಯಮಿ ಬೇಳಂಜೆ ಸೀತಾರಾಮ ಶೆಟ್ಟಿ ಊಟದ ಬಟ್ಟಲನ್ನು ಕುಚ್ಚೂರು ಶಾಲೆಗೆ ಕೊಡುಗೆಯಾಗಿ ನೀಡಿದರು.

ಕಾರ್ಯಕ್ರಮದಲ್ಲಿ ದಾನಿಗಳಾದ ಹರೀಶ ಶೆಟ್ಟಿ ಬಾದ್ಲು, ಬೇಳಂಜೆ ಸೀತಾರಾಮ ಶೆಟ್ಟಿ ಅವರನ್ನು ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಮಾಲಿನಿ, ಬೇಳಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಭೂತುಗುಂಡಿ ಕರುಣಾಕರ ಶೆಟ್ಟಿ, ಕುಚ್ಚೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿ, ಉದ್ಯಮಿ ಕಿರಣ್ ತೋಳಾರ್, ಪಿಡಿಒ ಪುರಂದರ, ಪ್ರಮುಖರಾದ ವೀರಣ್ಣ ಶೆಟ್ಟಿ, ಸನತ್ ಕುಮಾರ್ ಶೆಟ್ಟಿ, ಕಲಾವತಿ ಉಪಸ್ಥಿತರಿದ್ದರು. ಶಿಕ್ಷಕ ಮಂಜುನಾಥ ಶೆಟ್ಟಿ ನಿರೂಪಿಸಿದರು.

ಜಾಹೀರಾತುLabels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget